Auto News: ಹೊಸ 2022 SX4 S Cross ಅನಾವರಣ, ರಗಡ್ ಲುಕ್, ಸಖತ್ ಸ್ಟೈಲಿಶ್!

By Suvarna News  |  First Published Nov 26, 2021, 12:49 PM IST

ಹೊಸ ಎಸ್ ಕ್ರಾಸ್ ಕಾರನ್ನ ಸುಜುಕಿ ಜಾಗತಿಕವಾಗಿ ಅನಾವರಣ ಮಾಡಿದೆ. ಈ ಹಿಂದಿನ ಎಸ್ ಕ್ರಾಸ್‌ಗೆ ಹೋಲಿಸಿದರೆ, ಈಗ ಅನಾವರಣಗೊಂಡಿರುವ ಕಾರ್ ಸಖತ್ ಸ್ಟೈಲಿಶ್ ಆಗಿದೆ, ರಗಡ್ ಲುಕ್ ಹೊಂದಿದೆ. ಜತೆಗೆ ಹೆಚ್ಚು ವಿಶಾಲವೂ ಆಗಿದೆ. ಎಸ್ ಕ್ರಾಸ್‌ಗೆ ಭಾರತೀಯ ಮಾರುಕಟ್ಟೆಯಲ್ಲೂ ಒಳ್ಳೆಯ ಪ್ರತಿಕ್ರಿಯೆ ಇದೆ. ಈಗ ಹೊಸ ಎಸ್ ಕ್ರಾಸ್‌ಗೆ ಯಾವ ರೀತಿ ಪ್ರಕ್ರಿಯೆ ಸಿಗಲಿದೆ ನೋಡಬೇಕು.


ಭಾರತದಲ್ಲಿ ಇತ್ತೀಚೆಗಷ್ಟೇ ಹೊಸ ತಲೆಮಾರಿನ ಸೆಲೆರಿಯೊ (Celerio) ಕಾರ್ ಲಾಂಚ್ ಮಾಡಿದ್ದ ಮಾರುತಿ ಸುಜುಕಿ (Maruti Suzuki) ತನ್ನ ಮತ್ತೊಂದು ಜನಪ್ರಿಯ ಹೊಸ 2022 ಎಸ್ ಕ್ರಾಸ್ (S-Cross) ಕಾರನ್ನು ಅನಾವರಣ ಮಾಡಿದೆ. ಈಗಾಗಲೇ ಎಸ್ ಕ್ರಾಸ್‌ ಕ್ರಾಸ್ ಓವರ್ ಚಾಲ್ತಿಯಲ್ಲಿದೆ. ಭಾರತವು ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಕಾರಿಗೆ ಒಳ್ಳೆಯ ಮಾರುಕಟ್ಟೆಯೂ ಇದೆ. ಈ ಎಸ್ ಕ್ರಾಸ್‌ನ ಹೊಸ ಆವೃತ್ತಿ 2022 ಎಸ್-ಕ್ರಾಸ್, ಎಸ್ ಎಕ್ಸ್ 4(SX4) ಜಾಗತಿಕವಾಗಿ ಅನಾವರಣಗೊಂಡಿದೆ. ಈ ಹಿಂದಿನ ಎಸ್ ಕ್ರಾಸ್‌ಗೆ ಹೋಲಿಸಿದರೆ ಹೊಸ ಎಸ್‌ ಕ್ರಾಸ್ ಹೆಚ್ಚು ಸ್ಟೈಲಿಶ್ ಆಗಿದೆ. ಹೆಚ್ಚು ಎಸ್‌ಯುವಿ ಲುಕ್ ಹೊಂದಿದೆ. ಕಣ್ಣಿಗೆ ಹೆಚ್ಚು ಜಬರ್ದಸ್ತ್ ಆಗಿ ಕಾಣುತ್ತಿದೆ.  ಕಪ್ಪು ಬಣ್ಣದ ಬೋಲ್ಡ್ ಪ್ಲಾಸ್ಟಿಕ್ ಬಾಡಿ ಕ್ಲಾಡಿಂಗ್‌ನೊಂದಿಗೆ ವಿಸ್ತಾರವಾದ ವೀಲ್ ಆರ್ಚ್‌ಗಳು ಎಸ್ ಕ್ರಾಸ್‌ನ ಹೊಸ ಕ್ರಾಸ್‌ಒವರ್ ನೋಟಕ್ಕೆ ಪೂರಕವಾಗಿವೆ. ಭಾರತದ ಮಾರುಕಟ್ಟೆಯಲ್ಲೂ ಈ ಎಸ್ ಕ್ರಾಸ್‌ಗೆ ತನ್ನದೇ ಗ್ರಾಹಕವಲಯವು ಸೃಷ್ಟಿಯಾಗಿದೆ. ಇದೀಗ ಹೊಸ ಲುಕ್‌ನಲ್ಲಿ ಅನಾವರಣಗೊಂಡಿರುವ ಈ ಕಾರ್ ಹೆಚ್ಚು ಗಮನ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಜಾಗತಿಕವಾಗಿ ಅನಾವರಣಗೊಂಡಿರುವ 2022ರ ಹೊಸ ಸುಜುಕಿ ಎಸ್ ಕ್ರಾಸ್  ರಿಯರ್ ಪ್ರೊಫೈಲ್ ಕೂಡ ಹೆಚ್ಚು ಆಕರ್ಷಕವಾಗಿದೆ. ಅಗಲವಾದ ಟೈಲ್‌ಲೈಟ್ಸ್‌ಗಳನ್ನು ನೀಡಲಾಗಿದೆ. ಬಂಪರ್ ಕೂಡ ಹೆಚ್ಚು ವಿಸ್ತಾರವಾಗಿರುವ ವಿನ್ಯಾಸವನ್ನು ಪಡೆದುಕೊಂಡಿದೆ. ಬೋಲ್ಡ್ ಸ್ಕಿಡ್ ಪ್ಲೇಟ್ ಹೆಚ್ಚು ಬುರುಡೆಯಾಕಾರದ ವಿನ್ಯಾಸವನ್ನು ಹೊಂದಿದೆ. ಸುಜುಕಿ ಕ್ರಾಸ್, ಆಲ್ ವ್ಹೀಲ್ ಡ್ರೈವ್ ಸಾಫ್ಟ್‌ ರೋಡ್‌ಗಳಿಗೆ ಹೆಚ್ಚು ಸೂಕ್ತ. ಆದರೆ, ಹೊಸ ಎಸ್ ಕ್ರಾಸ್ ‌ಲುಕ್ ಮಾತ್ರ ಆಫ್‌ರೋಡ್‌ ಪ್ರಯಾಣಕ್ಕೂ ಈ ಕಾರ್ ಸೂಕ್ತವಾಗಿದೆ ಎಂದು ಭಾಸವಾಗುತ್ತದೆ.

Tap to resize

Latest Videos

undefined

ಹೊಸ ಎಸ್ ಎಕ್ಸ್ 4 ಎಸ್ ಕ್ರಾಸ್ (SX4 S-Cross) ಕ್ರಾಸ್  ಓವರ್ ಹೆಚ್ಚು ಗಮನ ಸೆಳೆಯುತ್ತಿದೆ. 4300 ಎಂಎಂ ಉದ್ದ, 1785 ಅಗಲ ಮತ್ತು 1,588 ಎತ್ತರವಾಗಿದೆ. ಇಷ್ಟುದೊಡ್ಡದಾದ ಈ ಎಸ್ ಕ್ರಾಸ್ ನೋಡೋದಕ್ಕೆ ರಗಡ್ ಲುಕ್‌ನೊಂದಿಗೆ ಎಸ್‌ಯುವಿ ರೀತಿ ಕಾಣುತ್ತಿದೆ. 

New Car Launch: ಅಪ್‌ಡೇಟ್‌ಗಳೊಂದಿಗೆ ರಸ್ತೆಗಿಳಿಯಲಿದೆ ಹೊಸ ಮಾರುತಿ ವಿಟಾರಾ ಬ್ರೆಜಾ    

ಈ ಹೊಸ ಎಸ್ ಕ್ರಾಸ್ ಒಟ್ಟು ಆರು ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಸಾಲಿಡ್ ವೈಟ್ (Solid White), ಮೆಟಾಲಿಕ್ ಟೈಟನ್ ಡಾರ್ಕ್ ಗ್ರೇ (Metallic Titan Dark Grey), ಎನೆರ್ಜೆಟಿಕ್ ರೆಡ್ (Energetic Red), ಸ್ಪ್ರೀ ಬ್ಲೂ (Sphere Blue), ಕಾಸ್ಮಿಕ್ ಬ್ಲ್ಯಾಕ್ (Cosmic Black) ಮತ್ತು ಸಿಲ್ಕಿ ಸಿಲ್ವರ್ (Silky Silver) ಬಣ್ಣಗಳಲ್ಲಿ ಆಯ್ಕೆಯಲ್ಲಿ ಸಿಗಲಿದೆ.

ಹೊಸ ಎಸ್ ಕ್ರಾಸ್ ಒಳಾಂಗಣ ವಿನ್ಯಾಸವೂ ಗಮನಾರ್ಹವಾಗಿದೆ. ಏರ್ ಕಾನ್ವೆಂಟ್ಸ್ ಮತ್ತು ಸ್ವಿಚ್ ನಾಬ್ಸ್ ಸೇರಿದಂತೆ ಒಂದಿಷ್ಟು ಹಿಂದಿನ ಕಾರಿನಂತಿಯೇ ಇವೆ. ಆದರೆ, ಒಟ್ಟಾರೆಯಾಗಿ ತೆಗೆದುಕೊಂಡಾಗ ಹೊಸ ಎಸ್ ಕ್ರಾಸ್‌ನ ಕ್ಯಾಬಿನ್ ಸಾಕಷ್ಟು ಬದಲಾವಣೆಗಳನ್ನು ಕಂಡಿರುವುದು ಗೊತ್ತಾಗುತ್ತದೆ. ಹೊಸ ವಿನ್ಯಾಸವನ್ನು ಗುರುತಿಸಬಹುದಾಗಿದೆ.

ಹೊಸ ಕಾರಿನಲ್ಲಿ 9.0 ಇಂಚ್ ಟಟ್ ಸ್ಕ್ರೀನ್ ಕಾನ್ಸೋಲ್‌ ಅನ್ನು  ಕಾಣಬಹುದು. ಆಂಡ್ರಾಯ್ಡ್ ಆಟೋ (Android Auto) ಮತ್ತು ಆಪಲ್ ಕಾರ್ ಪ್ಲೇ (Apple Car Play)ಗೆ ಇದು ಸಪೋರ್ಟ್ ಮಾಡುತ್ತದೆ. ಇನ್ನುಳಿದಂತೆ ಕ್ಲೈಮೆಟ್ ಕಂಟ್ರೋಲ್ಸ್, ಡ್ರೈವ್ ಮೋಡ್ ಸೆಲೆಕ್ಟರ್,  ಗಿಯರ್ ಲಿವರ್‌ಗಳೆಲ್ಲವೂ ಈ ಹಿಂದಿನ ಕಾರಿನಲ್ಲಿರುವಂತೆಯೇ ಇರಿಸಲಾಗಿದೆ. ಬಹುತೇಕವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ, ಕಾರಿನ ಹೊಸ ವಿನ್ಯಾಸ ಮಾತ್ರ ಸೊಗಸಾಗಿದೆ, ರಗಡ್ ಆಗಿ ಕಾಣುತ್ತದೆ.

Auto News: ಅಲ್ಟೋ 800 ಹೇಗಿದೆ? ಪ್ರಯೋಗಾರ್ಥ ರಸ್ತೆಗಳಲ್ಲಿ ಸಂಚಾರ

ಎಂಜಿನ್‌ ಬಗ್ಗೆ ಹೇಳುವುದಾದರೆ, ಹೊಸ ಎಸ್ ಕ್ರಾಸ್‌ನಲ್ಲೂ ಕಂಪನಿ,  1.4 ಲೀಟರ್ ನಾಲ್ಕು ಸಿಲೆಂಡರ್‌ ಟರ್ಬೊ ಪೆಟ್ರೋ ಮೋಟಾರ್‌ ಎಂಜಿನ್ ನೀಡಲಾಗಿದೆ.  ಇಂದು ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಸಂಯೋಜಿತವಾಗಿದೆ.  125 ಬಿಎಚ್‌ಪಿ ಪವರ್ ಮತ್ತು 235 ಎನ್ ಎಂ ಟಾರ್ಕ್ ಉತ್ಪಾದಿಸುತ್ತಿದೆ ಈ ಎಂಜಿನ್. ಕೇವಲ 9.5 ಸೆಕೆಂಡುಗಳಲ್ಲಿ ಈ ಕಾರು 100 ಕಿ.ಮೀ. ಸ್ಪೀಡ್‌ ಪಡೆದುಕೊಳ್ಳಬಲ್ಲದು. 6 ಗೇರ್‌ಗಳಿವೆ.

click me!