ಆಂಧ್ರಪ್ರದೇಶ: ಮರ್ಸಿಡಿಸ್ ಕಾರಿಗೆ ಡಿಕ್ಕಿ ಹೊಡೆದ ಟ್ರಾಕ್ಟರ್ ಒಂದು ಎರಡು ಭಾಗಗಳಾಗಿ ಮಗುಚಿ ಬಿದ್ದ ಘಟನೆ ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ತಿರುಪತಿ ಸಮೀಪದ ಚಂದ್ರಗಿರಿ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮರ್ಸಿಡಿಸ್ ಕಾರಿಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಾಕ್ಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರಾಕ್ಟರ್ ಎರಡು ಭಾಗವಾಗಿದ್ದು, ಮರ್ಸಿಡಿಸ್ ಬೆಂಜ್ ಕಾರಿನ ಒಂದು ಬದಿ ಜಖಂಗೊಂಡಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಾಕ್ಟರ್ ( Tractor) ರಾಂಗ್ ಸೈಡ್‌ನಿಂದ ಬಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಜಖಂಗೊಂಡ ಕಾರು ಒಂದು ಪಕ್ಕ ನಿಂತಿದ್ದು, ಮತ್ತೊಂದು ಭಾಗದಲ್ಲಿ ಎರಡು ಭಾಗಗಳಾಗಿ ಟ್ರಾಕ್ಟರ್ ಬಿದ್ದಿರುವುದು ಕಾಣಿಸುತ್ತಿದೆ. ಕಾರಿನ ಒಂದು ಭಾಗ ಜಖಂ ಆಗಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.
Udupi; 14 ಚಕ್ರದ ಗೂಡ್ಸ್ ಲಾರಿ ಚಲಾಯಿಸಿ ಇಬ್ಬರನ್ನುಕೊಂದ ಹದಿನಾರರ ಬಾಲಕ!
ಟ್ರಾಕ್ಟರ್ ಮಗುಚಿ 9 ಜನರ ದಾರುಣ ಸಾವು
ಟ್ರಾಕ್ಟರೊಂದು ಮಗುಚಿದ ಪರಿಣಾಮ ಒಂಭತ್ತು ಜನ ಮೃತಪಟ್ಟು ಅನೇಕರು ಗಾಯಗೊಂಡ ಘಟನೆ ಉತ್ತರಪ್ರದೇಶದಲ್ಲಿ (Uttar pradesh) ನಿನ್ನೆ ನಡೆದಿದೆ. ನಿನ್ನೆ ಲಕ್ನೋದ (Lucknow) ಇಟೌಂಜಾದಲ್ಲಿ (Itaunja) ಈ ಅನಾಹುತ ನಡೆದಿದೆ. ಪೊಲೀಸರ ಪ್ರಕಾರ ಈ ಟ್ರಾಕ್ಟರ್‌ನಲ್ಲಿ 46 ಜನ ಪ್ರಯಾಣಿಸುತ್ತಿದ್ದರು ಇವರಲ್ಲಿ 9 ಜನ ದುರಂತದಲ್ಲಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಇಟೌಂಜಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಟ್ರಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲಾ ನವರಾತ್ರಿ ಹಿನ್ನೆಲೆಯಲ್ಲಿ ಮೊಹನಾ ಪ್ರದೇಶದಿಂದ ಚಂದ್ರಿಕಾ ದೇವಿಯ (Chandrika Devi) ದೇಗುಲಕ್ಕೆ ಭೇಟಿ ನೀಡುತ್ತಿದ್ದರು.
ಸೈರಸ್ ಮಿಸ್ತ್ರಿ ಅಪಘಾತ ಸ್ಥಳದಲ್ಲಿ ಒಂದೇ ವರ್ಷದಲ್ಲಿ 26 ಸಾವು, ಬಿಚ್ಚಿ ಬೀಳಿಸುತ್ತಿದೆ ಸರ್ಕಾರಿ ದಾಖಲೆ!