4.10 ಕೋಟಿ ರೂ. ಬೆಲೆಯ ಬೆಂಟಗಾ ಐಷಾರಾಮಿ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

By Suvarna News  |  First Published Mar 19, 2021, 3:51 PM IST

ಜಗತ್ತಿನ ಐಷಾರಾಮಿ ಹಾಗೂ ತುಟ್ಟಿ ಕಾರುಗಳಲ್ಲಿ ಒಂದಾಗಿರುವ ಬೆಂಟಲೀ ಕಂಪನಿ ಬೆಂಟಗಾ ಎಸ್‌ಯುವಿ, ಫೇಸ್‌ಲಿಫ್ಟ್ ಹೊಸ ವರ್ಷನ್ ಭಾರತದಲ್ಲೂ ಬಿಡುಗಡೆಯಾಗಿದೆ. ಈ ಎಸ್‌ಯುವಿ ಕಾರಿನ ಬೆಲೆ ಬರೋಬ್ಬರಿ 4.10 ಕೋಟಿ ರೂಪಾಯಿ ಇದೆ. ಈಗಾಗಲೇ ಕಂಪನಿ ಭಾರತದಲ್ಲಿ ಬುಕ್ಕಿಂಗ್ ಕೂಡಾ ಆರಂಭಿಸಿದೆ.


ಐಷಾರಾಮಿ ಕಾರುಗಳನ್ನು ಉತ್ಪಾದಿಸುವ ಜಗತ್ತಿನ ಪ್ರಮುಖ ಕಾರು ಕಂಪನಿಗಳ ಪೈಕಿ ಬ್ರಿಟನ್‌ನ ಬೆಂಟಲೀ ಮೋಟಾರ್ಸ್ ಕೂಡಾ ಒಂದು. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಐಷಾರಾಮಿ ಅನುಭವವನ್ನು ಒದಗಿಸುವ ಬೆಂಟಲೀ ಕಾರುಗಳ ವಿಶ್ವಪ್ರಸಿದ್ದವಾಗಿವೆ ಮತ್ತು ಅಷ್ಟೇ ತುಟ್ಟಿಯೂ ಹೌದು.

ಪೆಟ್ರೋಲ್, ಡೀಸೆಲ್ ವಾಹನ ಯುಗ ಮುಕ್ತಾಯ? ಎಲೆಕ್ಟ್ರಿಕ್ ವಾಹನಗಳ ಭರಾಟೆ ಶುರು

Tap to resize

Latest Videos

undefined

ಬೆಂಟಲೀ ಕಂಪನಿ ಈಗ ಭಾರತದಲ್ಲೂ ತನ್ನ ಐಷಾರಾಮಿ ಕಾರುಗಳ ಪೈಕಿ ತನ್ನ ಜನಪ್ರಿಯ ಫೇಸ್‌ಲಿಫ್ಟ್ ವರ್ಷನ್ ‘ಬೆಂಟಗಾ’ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಈ ಕಾರಿನ ಬೆಲೆ ಕೇಳಿದ್ರೆ  ಬೆಚ್ಚಿ ಬೀಳ್ತಿರಿ. ಅಷ್ಟೊಂದು ದುಬಾರಿ ಕಾರು ಇದು. ಈ ಕಾರಿನ ಬೆಲೆ ಬರೋಬ್ಬರಿ 4.10 ಕೋಟಿ ರೂಪಾಯಿ! ಈ ಬೆಲ ದಿಲ್ಲಿ ಎಕ್ಸ್‌ಶೋರೂಮ್ ಬೆಲೆಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಈ ದುಬಾರಿ ಎಸ್‌ಯುವಿ ಕಾರಿಗೆ ಕಂಪನಿ ಈಗಾಗಲೇ ಬುಕ್ಕಿಂಗ್ ಆರಂಭಿಸಿದೆ. ದಿಲ್ಲಿ, ಮುಂಬೈ ಮತ್ತು ಹೈದ್ರಾಬಾದ್‌ಗಳಿಂದ ಬೆಂಟಲೀ ತಂಡ ಬುಕ್ಕಿಂಗ್‌ ಸ್ವೀಕರಿಸುತ್ತಿದೆ. ಆದರೆ, ಬೆಂಟಗಾ ಎಸ್‌ಯುವಿ  ಬೆಲೆ ನಗರದಿಂದ ನಗರಕ್ಕೆ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಈ ಬೆಲೆಯು ಎಕ್ಸ್‌ಚೇಂಜ್ ರೇಟ್ ಮೇಲೂ ಅವಲಂಬಿತವಾಗಿದೆ. ಯಾಕೆಂದರೆ, ಈ ಕಾರನ್ನು ನೇರವಾಗಿ ಹೊರದೇಶದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ, ಬೆಲೆಯಲ್ಲಿ ವ್ಯತ್ಯಾಸವಾಗಬಹುದು.

ಬೆಂಟಲೀ ಕಂಪನಿ ಬೆಂಟಗಾ ಎಸ್‌ಯುವಿ ಜಗತ್ತಿನ ಅತ್ಯಂತ ವೇಗದ ಐಷಾರಾಮಿ ಕಾರು ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಈಗಲೂ ಅದೇ ಸ್ಥಾನದಲ್ಲಿ ಮುಂದುವರಿದಿದೆ. ಬೆಂಟೆಗಾ ಎಸ್‌ಯುವಿಯನ್ನು ಅದರ ಈ ಮೊದಲಿನ ಜನರೇಷನ್ ಮಾಡೆಲ್‌ನ ಜನಪ್ರಿಯತೆಯ ಆಧಾರದ ಮೇಲೆ ರೂಪಿಸಲಾಗಿದೆ. ಈ ಎಸ್‌ಯುವಿ ಸಂಪೂರ್ಣವಾಗಿ ಹ್ಯಾಂಡ್‌ಕ್ರಾಫ್ಟೆಡ್ ಅಂದರೆ ಸಂಪೂರ್ಣವಾಗಿ ಕೌಶಲಯುತ ಸಿಬ್ಬಂದಿಯೇ ನಿರ್ಮಿಸಿದ್ದಾರೆ. ಒಂದು ಕಾರು ರೆಡಿ ಮಾಡಲು ಈ ತಂಡಕ್ಕೆ 100 ಗಂಟೆಗಳು ಬೇಕಾಗುತ್ತವೆ.

ಮಹಿಂದ್ರಾ ವಾಹನಗಳ ಖರೀದಿ ಮೇಲೆ ಗರಿಷ್ಠ 3.06 ಲಕ್ಷ ರೂ. ಡಿಸ್ಕೌಂಟ್

ಈಗ ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಬೆಂಟಗಾ ಕಾರಿನಲ್ಲಿ 4.0, ಟ್ವಿನ್ ಟರ್ಬೋ ಚಾರ್ಜ್ಡ್ ವಿ8 ಪೆಂಟ್ರೋಲ್ ಲೀಟರ್ ಎಂಜಿನ್ ಅಳವಡಿಸಲಾಗಿದೆ. ಜೊತೆಗೆ ಈ ಎಂಜಿನ್ 8 ಸ್ಪೀಡ್ ಗಿಯರ್ ಬಾಕ್ಸ್ ಒಳಗೊಂಡಿದೆ. 542 ಬಿಎಚ್‌ಪಿ ಪವರ್ ಹಾಗೂ 770ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಈ ಬೆಂಟಲೀ ಮೋಟರ್ಸ್ ಕಂಪನಿಯ ಜನಪ್ರಿಯ ಬೆಂಟಗಾ ಕಾರಿನ ಗರಿಷ್ಠ ವೇಗ ಎಷ್ಟು ಗೊತ್ತಾ? ಈ ಎಸ್‌ಯುವಿ ಗಂಟೆಗೆ 290 ಕಿ  ಮೀ ವೇಗದಲ್ಲಿ ಓಡುತ್ತದೆ. ಹಾಗೆಯೇ ಶೂನ್ಯದಿಂದ 100 ಕಿ.ಮೀ ವೇಗಕ್ಕೆ ತಲುಪಲು ಕೇವಲ 4ರಿಂದ 5 ಸೆಕೆಂಡ್ ಸಾಕು! ಅಷ್ಟೊಂದು ಪವರ್ ಫುಲ್ ಎಂಜಿನ್ ಅನ್ನು ಈ ಎಸ್‌ಯುವಿ ಒಳಗೊಂಡಿದೆ.

ಈ ಹಿಂದಿನ ವರ್ಷನ್‌ನಲ್ಲಿರುವ ಯಾವುದೇ ವಿನ್ಯಾಸವನ್ನು ಈ ಹೊಸ ಫೇಸ್‌ಲಿಫ್ಟ್‌ನಲ್ಲೂ ಬದಲಿಸಿಲ್ಲ. ಅದನ್ನೇ ಮುಂದುವರಿಸಲಾಗಿದೆ. ಈ ಹೊಸ 2021ರ ಬೆಂಟಗಾ ಎಸ್‌ಯುವಿ ನಿಮಗೆ, ಇದೇ ಮೊದಲ ಬಾರಿಗೆ ಡಾರ್ಕ್ ಟಿಂಟೆಡ್ ಡೈಮಂಡ್ ಬ್ರಷ್ಡ್ ಅಲ್ಯುಮಿನಿಯಂ ಫಿನಿಷ್‌ನಲ್ಲಿ ಸಿಗಲಿದೆ.

ಈಗ ಮ್ಯಾಟ್ರಿಕ್ಸ್ ಗ್ರಿಲ್ ಇನ್ನಷ್ಟು ದೊಡ್ಡದಾಗಿದೆ. ಹೊಸ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳು ಇನ್ನಷ್ಟು ಆಕರ್ಷಕವಾಗಿವೆ. ಕ್ರಿಸ್ಟಲ್ ಗ್ಲಾಸ್‌ವೇರ್‌ನಿಂದ ಪ್ರೇರೇಪಿತಗೊಂಡ ವಿನ್ಯಾಸವನ್ನು ಈ ಬೆಂಟಲೀ ಒಳಗೊಂಡಿದೆ. ವೆಟ್ ಆರ್ಮ್ ವೈಪರ್ಸ್ ಇದ್ದು, ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಪ್ರತಿ ಆರ್ಮ್ 22 ವಾಶರ್ ಜೆಟ್ಸ್ ಒಳಗೊಂಡಿವೆ.

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ 1 ಲಕ್ಷ ರೂಪಾಯಿ ಸಬ್ಸಿಡಿ!

ಕ್ಯಾಬಿನ್ ಕೂಡ ಸ್ಪೇಸಿಯಸ್ ಆಗಿದೆ. ಲೆಗ್‌ರೂಮ್ ಈ ಮೊದಲಿಗಿಂತಲೂ ಹೆಚ್ಚಿದೆ. ಹೊಸ ವರ್ಷನ್‌ನ ಆಕರ್ಷಣೆ ಎಂದರೆ, 10.9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್. ಇದು ನಿಮಗೆ ಸೂಪರ್ ಹೈರೆಸೂಲೇಷನ್ ಗ್ರಾಫಿಕ್ಸ್‌ಗಳನ್ನು ಒದಗಿಸುತ್ತದೆ. ಹಾಗೆಯೇ ಕನೆಕ್ಟಿವಿಟಿ ಕೂಡ ಅತ್ಯದ್ಭುತವಾಗಿದೆ. ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಇದು ಸಪೋರ್ಟ್ ಮಾಡುತ್ತದೆ.

click me!