ನವದೆಹಲಿ(ಫೆ.19): ಭಾರತದಲ್ಲಿ ರೆನಾಲ್ಟ್(Renault India) ಹೊಸ ಕಾರುಗಳ ಮೂಲಕ ಮತ್ತೆ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಲು ಆರಂಭಿಸಿದೆ. ರೆನಾಲ್ಟ್ ಡಸ್ಟರ್ ಕಾರಿನ ಉತ್ಪಾದನೆ ಸ್ಥಗಿತಗೊಂಡ ಬೆನ್ನಲ್ಲೇ ಇದೀಗ ರೆನಾಲ್ಟ್ ಟ್ರೈಬರ್(Renualt Triber Car) ಕಾರು ಹೊಸ ದಾಖಲೆ ಬರೆದಿದೆ. ದೇಶದ ಕೈಗೆಟುಕುವ ದರದ MPV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಟ್ರೈಬರ್ ಕಾರು ಇದೀಗ 1 ಲಕ್ಷ ಮಾರಾಟ(Sales) ಕಂಡಿದೆ.
ದೇಶದಲ್ಲಿ MPV ಕಾರುಗಳ ಬೇಡಿಕೆಗೆ ಅನುಗುಣವಾಗಿ ರೆನಾಲ್ಟ್ 2019ರ ಜೂನ್ ತಿಂಗಳಲ್ಲಿ ಟ್ರೈಬರ್ ಕಾರನ್ನು ಬಿಡುಗಡೆ ಮಾಡಿದೆ. ಮಾರುತಿ ಎರ್ಟಿಗಾ(Maruti Ertiga) ಸೇರಿದಂತೆ MPV ಕಾರುಗಳಿಗೆ ರೆನಾಲ್ಟ್ ಟ್ರೈಬರ್ ಪ್ರತಿಸ್ಪರ್ಧಿಯಾಗಿದೆ. ಇದೀಗ 1 ಲಕ್ಷ ಕಾರುಗಳು ಮಾರಾಟವಾಗುವ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಲಕ್ಷ ಗಡಿ ದಾಟಿದ MPV ಕಾರು ಅನ್ನೋ ಕೀರ್ತಿಗೂ ಟ್ರೈಬರ್ ಪಾತ್ರವಾಗಿದೆ.
undefined
Renault Duster ದಶಕಗಳ ಬಳಿಕ ಭಾರತದಲ್ಲಿ ಉತ್ಪಾದನೆ ನಿಲ್ಲಿಸಿದ ಜನಪ್ರಿಯ ರೆನಾಲ್ಟ್ ಡಸ್ಟರ್ SUV ಕಾರು!
ರೆನಾಲ್ಟ್ ಟ್ರೈಬರ್ ಕಾರಿನ ಬೆಲೆ 5.76 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ. ಟ್ರೈಬರ್ ಕಾರಿನಲ್ಲಿ RXE, RXL, RXT ಹಾಗೂ RXZ ಎಂಬ ನಾಲ್ಕು ವೇರಿಯೆಂಟ್ ಲಭ್ಯವಿದೆ. ಇತ್ತೀಚೆಗೆ ಟ್ರೈಬರ್ ಕೆಲ ಅಪ್‌ಗ್ರೇಡ್‌ಗಳೊಂದಿಗೆ ಬಿಡುಗಡೆಯಾಗಿದೆ. ರೆನಾಲ್ಟ್ ಟ್ರೈಬರ್ 1.0 ಲೀಟರ್ ಎಂಜಿನ್ ಹೊಂದಿದೆ. ಇನ್ನು ಮಾನ್ಯುಯೆಲ್ ಹಾಗೂ R AMT ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ.
ಟ್ರೈಬರ್ ಸುರಕ್ಷತೆ:
ಭಾರತದಲ್ಲಿ ಪ್ರಯಾಣಿಕರ ಸುರಕ್ಷತೆಗೆ(Car safety) ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಸದ್ಯ ಭಾರತದಲ್ಲಿ ಬಿಡುಗಡೆಯಾಗುವ ಕಾರುಗಳ ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ ಉತ್ತಮ ಅಂಕ ಪಡೆಯಲು ಗರಿಷ್ಠ ಸುರಕ್ಷತೆಯನ್ನು ಒದಗಿಸುತ್ತಿದೆ. ಇದರಂತೆ ರೆನಾಲ್ಟ್ ಟ್ರೈಬರ್ ಗ್ಲೋಬಲ್NCAP ಸುರಕ್ಷತಾ ಫಲಿತಾಂಶದಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ. 5 ಸ್ಟಾರ್ ಗರಿಷ್ಠ ಸುರಕ್ಷತೆ ರೇಟಿಂಗ್ ಆಗಿದೆ.
NCAP Crash Test ಕೈಗೆಟುಕುವ ದರದ ನಿಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!
ಇತ್ತೀಚೆಗೆ ಬಿಡುಗಡೆಯಾಗುವ ರೆನಾಲ್ಟ್ ಟ್ರೈಬರ್ ಕಾರು 4 ಏರ್‌ಬ್ಯಾಗ್ ಹೊಂದಿದೆ. ಇದರ ಜೊತೆಗೆ ಎಬಿಎಸ್ ಬ್ರೇಕ್, ರೇರ್ ಕ್ಯಾಮಾರ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಇತರ ಸುರಕ್ಷತಾ ಫೀಚರ್ಸ್ ಹೊಂಂದಿದೆ.
ಇತ್ತೀಚೆಗೆ ರೆನಾಲ್ಟ್ ಟ್ರೈಬರ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಬುಕಿಂಗ್ ಕೂಡ ಆರಂಭಗೊಂಡಿದೆ. 7.24 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಬೆಲೆಯಲ್ಲಿ ಲಿಮಿಟೆಡ್ ಎಡಿಶನ್ ಕಾರು ಲಭ್ಯವಿದೆ.
ರೆನಾಲ್ಟ್ ಡಸ್ಟರ್ ಸ್ಥಗಿತ
2012ರಲ್ಲಿ ಭಾರತದಲ್ಲಿ SUV ಕಾರಿನ ಮೂಲಕ ಹೊಸ ಅಧ್ಯಾಯ ಬರೆದ ರೆನಾಲ್ಟ್ ಡಸ್ಟರ್(Renault Duster) ಬಹುಬೇಡಿಕೆಯ ಕಾರಾಗಿ ಮಾರ್ಪಟ್ಟಿತ್ತು. SUV ಕಾರುಗಳ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದ್ದ ರೆನಾಲ್ಟ್ ಡಸ್ಟರ್ ಇದೀಗ ತೀವ್ರ ಪೈಪೋಟಿ ಎದುರಿಸಿತು. ಹಲವು ಆಟೋಮೊಬೈಲ್ ಕಂಪನಿಗಳ ಕಾರುಗಳು ಡಸ್ಟರ್ ಕಾರಿಗೆ ಪೈಪೋಟಿ ನೀಡಿತು. ಇನ್ನು 2020ರಲ್ಲಿ ಬಿಎಸ್6 ನಿಯಮದ ಕಾರು ಡಸ್ಟರ್ ಡೀಸೆಲ್ ಕಾರನ್ನು ಕಂಪನಿ ಸ್ಥಗಿತಗೊಳಿಸಿತು. ಇದೀಗ ಮಾರಾಟದಲ್ಲಿ ಗಣನೀಯ ಕುಸಿತ ಕಂಡ ಕಾರಣ ರೆನಾಲ್ಟ್ ಡಸ್ಟರ್ ಕಾರನ್ನು ಭಾರತದಲ್ಲಿ ಸ್ಥಗಿತಗೊಳಿಸಿದೆ. ಜನವರಿ 2022ರಲ್ಲಿ ಒಂದೇ ಒಂದು ಡಸ್ಟರ್ ಕಾರು ಮಾರಾಟವಾಗಿಲ್ಲ.
ರೆನಾಲ್ಟ್ ಕಿಗರ್
ಟ್ರೈಬರ್ ಬಳಿಕ ರೆನಾಲ್ಟ್ ಭಾರತದಲ್ಲಿ ಕಿಗರ್ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಿದೆ. ಈ ಮೂಲಕ ಕಡಿಮೆ ಬೆಲೆ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಕ್ವಿಡ್ ಕಾರಿನ ಬಳಿಕ ಇದೀಗ ಕಿಗರ್ ಕಾರಿಗೂ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಸದ್ಯ ರೆನಾಲ್ಟ್ ಭಾರತದಲ್ಲಿ ಕ್ವಿಡ್, ಟ್ರೈಬರ್, ಕಿಗರ್ ಕಾರು ಮಾರಾಟ ಮಾಡುತ್ತಿದೆ. ಈ ಮೂರು ಕಾರುಗಳಿಗೆ ಉತ್ತಮ ಬೇಡಿಕೆ ಇದೆ.