
ಪುಣೆ(ಜು.06): ಉಪವಾಸ ನಿರತ ವಕೀಲರೊಬ್ಬರಿಗೆ ಮಾಂಸಾಹಾರ ಭೋಜನ ಕಳುಹಿಸಿದ ಜೊಮ್ಯಾಟೋಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಇಲ್ಲಿನ ಸ್ಥಳೀಯವಕೀಲ ಷಣ್ಮುಖ್ ದೇಶಮುಖ್ ಎಂಬುವವರು ಜೊಮ್ಯಾಟೋ ಆ್ಯಪ್ ಮೂಲಕ ಸಸ್ಯಾಹಾರ ಭೋಜನ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಎರಡು ಬಾರಿಯೂ ಮಾಂಸಾಹಾರ ಭೋಜನವನ್ನು ರವಾನಿಸಲಾಗಿದೆ.
ಷಣ್ಮುಖ್ ಪನ್ನೀರ್ ಆರ್ಡರ್ ಮಾಡಿದ್ದರೆ ಅವರಿಗೆ ಎರಡು ಬಾರಿ ಬಟರ್ ಚಿಕನ್ ಭೋಜನವನ್ನು ಕಳುಹಿಸಲಾಗಿದೆ ಎನ್ನಲಾಗಿದೆ.
ಈ ಕುರಿತು ಷಣ್ಮುಖ್ ಸ್ಥಳೀಯ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಕೂಡಲೇ ಜೊಮ್ಯಾಟೋ 55 ಸಾವಿರ ಮತ್ತು ಬಟರ್ ಚಿಕನ್ ರವಾನಿಸಿದ ಹೊಟೇಲ್’ಗೆ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.