
ಇಸ್ಲಾಮಾಬಾದ್(ಫೆ.22): ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಟೊಮೆಟೊ ರಫ್ತನ್ನು ಭಾರತ ರದ್ದುಗೊಳಿಸಿದೆ. ಇದರಿಂದ ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಹಾಹಾಕಾರ ಸೃಷ್ಟಿಸಿದೆ.
ಪಾಕಿಸ್ತಾನದಲ್ಲಿ ಟೊಮೆಟೊ ದರ ಇದೀಗ ಕೆ.ಜಿಗೆ 180 ರೂ.ಗಳ ಗಡಿ ದಾಟಿದ್ದು, ಇದನ್ನು ಪಾಕಿಸ್ತಾನದ ವಿರುದ್ದದ ಟೊಮೆಟೊ ಯುದ್ಧ ಎಂದೇ ಬಣ್ಣಿಸಲಾಗಿದೆ.
ಭಾರತ ಇದೀಗ ಪಾಕಿಸ್ತಾನದ ಜೊತೆ ವಾಣಿಜ್ಯ ಸಂಬಂಧ ಕಡಿದುಕೊಂಡಿದ್ದು, ಇದರ ಬಿಸಿ ಈಗಾಗಲೇ ಪಾಕಿಸ್ತಾನಕ್ಕೆ ತಟ್ಟಲು ಆರಂಭಿಸಿದೆ. ಪಾಕಿಸ್ತಾನದಲ್ಲಿ ಹಲವು ದಿನ ಬಳಕೆಯ ವಸ್ತುಗಳ ದರ ಏರತೊಡಗಿದೆ.
ರೈತರಿಂದ ಸರ್ಜಿಕಲ್ ಸ್ಟ್ರೈಕ್:
ಮಧ್ಯಪ್ರದೇಶದ ಜಾಬುವಾ ಜಿಲ್ಲೆಯ ರೈತರು ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ನಿಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ತಮ್ಮ ಟೊಮೆಟೊ ಕಳುಹಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ಟೊಮೆಟೊ ಪೂರೈಕೆ ಸ್ಥಗಿತವಾಗಿ ದರ ಗಗನಕ್ಕೇರಿದೆ.
ಪಾಕ್ ಸಿಮೆಂಟ್ ಬೇಕಿಲ್ಲ:
ಇನ್ನು ಭಾರತೀಯ ವರ್ತಕರು ಪಾಕಿಸ್ತಾನದಿಂದ ಸಿಮೆಂಟ್ ಆಮದನ್ನೂ ಸ್ಥಗಿತಗೊಳಿಸಿದ್ದಾರೆ. ಪಾಕಿಸ್ತಾನ ದಿನಕ್ಕೆ 600-800 ಕಂಟೈನರ್‌ಗಳಷ್ಟು ಸಿಮೆಂಟ್ ಅನ್ನು ಭಾರತಕ್ಕೆ ರಫ್ತು ಮಾಡುತ್ತಿತ್ತು. ಇದೀಗ ಸಿಮೆಂಟ್ ಹೊತ್ತ ಹಡಗುಗಳು ಕರಾಚಿ ಬಂದರಿನಲ್ಲಿ ಠಿಕಾಣಿ ಹೂಡಿವೆ.
ಈ ಸುದ್ದಿಗಳನ್ನೂ ಓದಿ-
ಪಾಕ್ ಮೇಲೆ ಮತ್ತೊಂದು ಬಾಂಬ್: ಇಮ್ರಾನ್ ನೀರಿಳಿಸ್ತಿದ್ದಾರೆ ಮೋದಿ!
ಪಾಕ್ ಮೇಲೆ ಬಿತ್ತು ಬಾಂಬ್: ಮೋದಿ ಹೊಡೆತಕ್ಕೆ ಇಮ್ರಾನ್ ಲಬೋ ಲಬೋ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.