
ನವದೆಹಲಿ (ಫೆ.13): ಮೈದಾನದಲ್ಲಿ ಚೆಂಡನ್ನು ಸ್ಟೇಡಿಯಂನ ಆಚೆಗಟ್ಟುವ ಮೂಲಕ ಅಭಿಮಾನಿಗಳಿಗೆ ಕ್ರಿಕೆಟ್‌ನ ಮತ್ತೇರಿಸಿದ್ದ ಯುವರಾಜ್ ಸಿಂಗ್ ಈಗ ನಿವೃತ್ತಿಯ ಬಳಿಕ ಆಲ್ಕೋಹಾಲ್ ಮೂಲಕ ಮತ್ತೇರಿಸಲು ಸಜ್ಜಾಗಿದ್ದಾರೆ. ಅಲ್ಟ್ರಾ-ಪ್ರೀಮಿಯಂ ಸ್ಪಿರಿಟ್ ರೂಪದಲ್ಲಿ ಯವರಾಜ್ ಸಿಂಗ್ ಹಾಗೂ ಸಮಾನಮನಸ್ಕ ಉದ್ಯಮಿಗಳ ಗುಂಪು 'ಫಿನೋ' ಹೆಸರಿನ ಟಕಿಲಾವನ್ನು ಅನಾವರಣ ಮಾಡಿದೆ. ಇದು ಅಮೆರಿಕದಲ್ಲಿ ಅಧಿಕೃತವಾಗಿ ಲಾಂಚ್ ಆಗಿದ್ದು, ಇದು ಐಷಾರಾಮಿ ಟಕಿಲಾ ಮಾರುಕಟ್ಟೆಯಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲು ಎನ್ನಲಾಗಿದೆ. ಮೆಕ್ಸಿಕೋದ ಜಲಿಸ್ಕೊದ ಎತ್ತರದ ಪ್ರದೇಶಗಳಲ್ಲಿ ತಯಾರಿಸಲಾದ FINO ಟಕಿಲಾವನ್ನು ತಯಾರಿಸಲಾಗುತ್ತಿದೆ. Failure Is not an option (ವೈಫಲ್ಯವು ಒಂದು ಆಯ್ಕೆಯಲ್ಲ) ಅನ್ನೋದು FINO ವಿಸ್ತ್ರತ ರೂಪ. ಅಮೆರಿಕದ ಷಿಕಾಗೋದಲ್ಲಿ ಇದು ಪಾದಾರ್ಪಣೆ ಮಾಡಿದೆ. ಅಂತಾರಾಷ್ಟ್ರೀಯ ವಿಸ್ತರಣೆಗೆ ಆಯ್ಕೆಯಾದ ಬ್ರ್ಯಾಂಡ್‌ನ ಕಾರ್ಯತಂತ್ರದ ಕೇಂದ್ರ ಇದಾಗಿದೆ.
ಸದ್ಯಕ್ಕೆ ಈ ಬ್ರ್ಯಾಂಡ್ ಭಾರತದಲ್ಲಿ ಲಭ್ಯವಿಲ್ಲ. ಭಾರತಕ್ಕೆ ಏಪ್ರಿಲ್ ಮಧ್ಯಭಾಗದಲ್ಲಿ ಪಾದಾರ್ಣೆ ಮಾಡಬಹುದು ಎನ್ನಲಾಗಿದೆ. ಭಾರತದೊಂದಿಗೆ ಇತರ ದೇಶಗಳಿಗೂ ವಿಸ್ತರಣೆ ಮಾಡುವ ಯೋಜನೆ ರೂಪಿಸಲಾಗಿದೆ.
ಯುವರಾಜ್ ಸಿಂಗ್ ಅವರ ಮೌಲ್ಯ 320 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದ್ದು, ತಾವು ಕ್ಯಾನ್ಸರ್ ಚಿಕಿತ್ಸೆ ಪಡೆದು ಪುನರ್ಜನ್ಮ ಪಡೆದ ಸ್ಥಳವಾದ ಷಿಕಾಗೋದಿಂದಲೇ ತಮ್ಮ ಉದ್ಯಮದ ಕನಸನ್ನು ಆರಂಭಿಸಿದ್ದಾರೆ. ಇದರ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
ಫಿನೋದಲ್ಲಿ ಚೀಫ್ ಶಾಟ್ ಕಾಲರ್ ಆಗಿರುವ ಯುವರಾಜ್ ಸಿಂಗ್, 'FINO ನಾನು ಬೆಂಬಲಿಸುವ ಎಲ್ಲವನ್ನೂ ಒಳಗೊಂಡಿದೆ. ಸವಾಲುಗಳನ್ನು ವಿಜಯಗಳಾಗಿ ಪರಿವರ್ತಿಸುವ ಧೈರ್ಯ ಇದರಲ್ಲಿದೆ. ಕ್ರಿಕೆಟ್ ಮತ್ತು ಜೀವನದ ಬಗೆಗಿನ ನನ್ನ ವಿಧಾನದಂತೆಯೇ, FINO ಮಿತಿಗಳನ್ನು ತಳ್ಳುವುದು ಮತ್ತು ದೃಢನಿಶ್ಚಯದಿಂದ ಏನನ್ನಾದರೂ ಸಾಧಿಸಬಹುದು ಎಂದು ಸಾಬೀತುಪಡಿಸುವುದು ಎನ್ನುವುದನ್ನು ತೋರಿಸುತ್ತದೆ' ಎಂದಿದ್ದಾರೆ.
FINO ನ ಮುಖ್ಯ ಕಂದಾಯ ಅಧಿಕಾರಿ ವಿಕ್ರಮ್ ಕುಮಾರ್, ಬ್ರ್ಯಾಂಡ್‌ನ ವಿಶಿಷ್ಟ ವಿಧಾನವನ್ನು ಎತ್ತಿ ತೋರಿಸಿದರು: "ನಾವು ಸಾಂಪ್ರದಾಯಿಕ ಕರಕುಶಲತೆಯನ್ನು ಡಿಜಿಟಲ್ ರೂಪಾಂತರದ ಶಕ್ತಿಯೊಂದಿಗೆ ಸಂಯೋಜಿಸುತ್ತೇವೆ, ಸಾಧನೆ-ಚಾಲಿತ ಗ್ರಾಹಕರನ್ನು ಆಕರ್ಷಿಸುವ ಬ್ರ್ಯಾಂಡ್ ಅನ್ನು ರೂಪಿಸುತ್ತೇವೆ' ಎಂದರು.
ಕಿಂಗ್ ಫಿಶರ್ ಬಿಯರ್ ಪೂರೈಕೆ ಬಂದ್ ಮಾಡಿದ ಬೆನ್ನಲ್ಲೇ, ಬಿಯರ್ ದರವನ್ನು ಶೇ. 15ರಷ್ಟು ಏರಿಸಿದ ರಾಜ್ಯ!
ಪ್ರಸ್ತುತ ದಿ ಸೇಂಟ್ ರೆಗಿಸ್‌ನಲ್ಲಿ ಮೈಕೆಲಿನ್ ಇರುವ ಇಂಡಿಯೆನ್, ಆರ್‌ಪಿಎಂ ಇಟಾಲಿಯನ್, ಮಿರು ಮತ್ತು ಟ್ರೆ ಡಿಟಾ ಸೇರಿದಂತೆ ಚಿಕಾಗೋದ ಪ್ರಮುಖ ಸ್ಥಳಗಳಲ್ಲಿ ಲಭ್ಯವಿರುವ ಫಿನೊ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಿರುತ್ತದೆ, ಆರಂಭದಲ್ಲಿ ಸುಂಕ ರಹಿತ ಮಳಿಗೆಗಳ ಮೂಲಕ ಇದು ಜನರ ಕೈಗೆ ಸಿಗಲಿದೆ.
ಮದ್ಯಪ್ರಿಯರಿಗೆ ಶಾಕ್, ಈ 6 ಬಿಯರ್‌ಗಳ ಬೆಲೆ 10 ರಿಂದ 45 ರೂಪಾಯಿವರೆಗೆ ಏರಿಕೆ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.