ಓದು ಮುಗಿದ್ಮೇಲೆ ಉದ್ಯೋಗವೇ ಆಗ್ಬೇಕಿಲ್ಲ, ವ್ಯಾಪಾರ ಶುರು ಮಾಡಿ ಹಣ ಗಳಿಸ್ಬಹುದು!

By Suvarna News  |  First Published Feb 26, 2024, 10:45 AM IST

ಉದ್ಯೋಗ ಪಡೆಯಲು ಓದು ಎನ್ನುವಂತಿರಬಾರದು. ಶಿಕ್ಷಣ ನಿಮ್ಮ ಜ್ಞಾನ ವರ್ದನೆಗಾದ್ರೆ ಕೆಲಸ ಹೊಟ್ಟೆ, ಬೊಕ್ಕಸ ತುಂಬಿಸುತ್ತೆ. ಹಾಗಾಗಿ ವ್ಯಾಪಾರ ಯಾವುದೇ ಇರಲಿ ಮನಸ್ಸಿಟ್ಟು ಮಾಡಿದ್ರೆ ಉದ್ಯೋಗಿಗಳಿಗಿಂತ ಹೆಚ್ಚು ಸಂಪಾದನೆ ಮಾಡಬಹುದು ಎಂಬುದನ್ನು ಮೊದಲು ಅರಿತುಕೊಳ್ಳಿ.  
 


ಮಕ್ಕಳು ಶಾಲೆಗೆ ಹೋಗುವ ಸಮಯದಲ್ಲಿ ಮುಂದೆ ಏನಾಗ್ತೀಯಾ ಅಂತಾ ದೊಡ್ಡವರು ಪ್ರಶ್ನೆ ಕೇಳ್ತಿರುತ್ತಾರೆ. ಮಕ್ಕಳು, ಡಾಕ್ಟರ್, ಇಂಜಿನಿಯರ್ ಅಥವಾ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತೇನೆ ಅಂದ್ರೆ ಭೇಷ್ ಎನ್ನುವ ಹಿರಿಯರು, ಸ್ವಂತ ಉದ್ಯೋಗ ಮಾಡ್ತೇನೆ ಎಂಬ ವಿಷ್ಯ ಮಕ್ಕಳ ಬಾಯಿಂದ ಬಂದ್ರೆ ಅದನ್ನು ಸಹಿಸೋದಿಲ್ಲ. ಕೈ ತುಂಬ ಸಂಬಳ ಬರುವ ಒಳ್ಳೆ ಕೆಲಸಕ್ಕೆ ಸೇರಿಕೋ ಎಂದೇ ಸಲಹೆ ನೀಡ್ತಾರೆ. ಓದಿಗೆ ತಕ್ಕ ಉದ್ಯೋಗ ಮಾಡೋದು ಬಿಟ್ಟು, ಅಂಗಡಿ ತೆರೆದಿದ್ದಾರೆ ಎಂದು ಕಾಲೆಳೆಯುವ ಜನರೂ ಸಾಕಷ್ಟಿದ್ದಾರೆ. ಸ್ವದೇಶಿ ವಸ್ತು ಹಾಗೂ ಸ್ಟಾರ್ಟ್ ಅಪ್ ಗೆ ಈಗಿನ ದಿನಗಳಲ್ಲಿ ಸರ್ಕಾರ ಕೂಡ ನೆರವು ನೀಡ್ತಿರುವ ಕಾರಣ ಕಾಲ ನಿಧಾನವಾಗಿ ಬದಲಾಗ್ತಿದೆ. ಮಕ್ಕಳು ಸ್ವಂತ ಉದ್ಯೋಗ, ವ್ಯಾಪಾರ ಮಾಡ್ತೇನೆ ಅಂದ್ರೆ ಅದನ್ನು ಪ್ರೋತ್ಸಾಹಿಸುವ ಪಾಲಕರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಪದವಿ ಮುಗಿದ ತಕ್ಷಣ ಬಹುತೇಕರು ಮಾಡುವ ಕೆಲಸ ಉದ್ಯೋಗದ ಹುಡುಕಾಟ. ಈ ವ್ಯಕ್ತಿ ಮಾತ್ರ ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಉದ್ಯೋಗದ ಬದಲು ವ್ಯಾಪಾರ ಶುರುಮಾಡುವ ಆಸೆ ಹೊಂದಿದ್ದ ಇವರು, ಅದೇ ದಾರಿ ಹಿಡಿದು ಯಶಸ್ವಿಯಾಗಿದ್ದಾರೆ.

ನಾವು ಬಿಹಾರ (Bihar) ದ ಬಂಕಾ ಜಿಲ್ಲೆಯ ತಿಲ್ ಬಾಡಿಯಾ ಗ್ರಾಮದ ನಿವಾಸಿ ದಿವಾಕರ್ ಪಂಡಿತ್ ಬಗ್ಗೆ ಹೇಳ್ತಿದ್ದೇವೆ. ಬಿಹಾರದ ಈ ವ್ಯಕ್ತಿ ಕೋಟ್ಯಾಧಿಪತಿ ಆಗ್ದೆ ಇರಬಹುದು, ಆದ್ರೆ ಲಕ್ಷಾಧಿಪತಿಯಂತೂ ಹೌದು. ವಾರ್ಷಿಕವಾಗಿ  12 ಲಕ್ಷ ರೂಪಾಯಿಗಿಂತ ಹೆಚ್ಚು ಸಂಪಾದನೆ ಮಾಡ್ತಿರುವ ದಿವಾಕರ್ ಪಂಡಿತ್ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಶಿಕ್ಷಣ (Education) ಕ್ಕೆ ತಕ್ಕಂತೆ ಉದ್ಯೋಗ ಸಿಕ್ಕಿಲ್ಲ, ಐಟಿ ಕಂಪನಿಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗ್ತಿದೆ ಎಂಬೆಲ್ಲ ದೂರು ಹೇಳ್ತಾ ಕುಳಿತುಕೊಳ್ಳುವ ಜನರ ಮಧ್ಯೆ ಇವರು ಸ್ವಂತ ಉದ್ಯೋಗ (Jobs) ಶುರು ಮಾಡಿ ಯಶಸ್ಸಿನ ದಾರಿ ಹಿಡಿದಿದ್ದಾರೆ.

Latest Videos

undefined

ಎಂಜಲು ಆಯ್ದು ತಿನ್ನೋ ಈ ಭಿಕ್ಷುಕ 10 ಮನೆಗಳನ್ನು ಹೊಂದಿರೋ ಮಿಲೇನಿಯರ್

ಪದವಿ ಮುಗಿದ ತಕ್ಷಣ ದಿವಾಕರ್ ಪಂಡೀತ್ ಆನ್‌ಲೈನ್ ಆಧಾರ್ ಕೇಂದ್ರವನ್ನು ತೆರೆದಿದ್ದರು. ಇದೇ ವೇಳೆ ಯಾವುದು ಒಳ್ಳೆ ವ್ಯಾಪಾರ ಎನ್ನುವ ಬಗ್ಗೆ ಯುಟ್ಯೂಬ್ (Youtube) ನಲ್ಲಿ ಸರ್ಚ್ ಮಾಡ್ತಿದ್ದರು. ಕೊನೆಯಲ್ಲಿ ಅವರು ಕಾಪಿ ಹಾಗೂ ನೋಟ್ ಬುಕ್ ವ್ಯವಹಾರ ಶುರು ಮಾಡಿದ್ರು. ಹೊಸ ವ್ಯಾಪಾರ ಆರಂಭಿಸಲು ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ದಿವಾಕರ್ ಪಂಡೀತ್ ಗೆ 10 ಲಕ್ಷ ರೂಪಾಯಿ ಸಾಲ ಸಿಕ್ಕಿತ್ತು. 2022 ರಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿದ ಅವರು ನೋಟ್‌ಬುಕ್ ಮತ್ತು ಕಾಪಿ ಬುಕ್ ತಯಾರಿಸುತ್ತಿದ್ದಾರೆ. ಕಾರ್ಖಾನೆಯಲ್ಲಿ ಮೂವರು ಕೆಲಸಕ್ಕಿದ್ದು, ಅವರಿಗೆ ತಿಂಗಳಿಗೆ ಎಂಟು ಸಾವಿರದಂತೆ ಸಂಬಳ ನೀಡ್ತಿದ್ದಾರೆ. ದಿವಾಕರ್ ಕಾರ್ಖಾನೆ ಆಧುನಿಕವಾಗಿದೆ. ಎಲ್ಲವೂ ಡಿಜಿಟಲ್ ಮೂಲಕ ನಡೆಯುತ್ತದೆ. ಅವರು ಸ್ಟ್ರೆಚಿಂಗ್ ಮೆಷಿನ್, ಕಟ್ಟರ್, ವೆಂಡಿಂಗ್ ಮೆಷಿನ್ ಹೊಂದಿದ್ದಾರೆ. ಕೊಲ್ಕತ್ತಾದಿಂದ ಕಚ್ಚಾ ವಸ್ತು ತರಿಸಿಕೊಳ್ಳುವ ಅವರು ನಿತ್ಯ 8ರಿಂದ 10 ಸಾವಿರ ಪ್ರತಿಗಳನ್ನು ತಯಾರಿಸುತ್ತಾರೆ. ಪ್ರತಿಯನ್ನು  10 ರೂಪಾಯಿಯಿಂದ 50 ರೂಪಾಯಿಗೆ ಮಾರಾಟ ಮಾಡುತ್ತಾರೆ. 

145 ಕೋಟಿ ರೂ. ಆಫರ್ ತಿರಸ್ಕರಿಸಿ 8300 ಕೋಟಿ ರೂ. ಕಂಪನಿ ಕಟ್ಟಿದ ಸುಂದರಿ ಸುನೀರಾ

ಕಾಪಿ ಹಾಗೂ ನೋಟ್ ಬುಕ್ ಬ್ಯುಸಿನೆಸ್ : ನೀವು ಸಣ್ಣ ಪ್ರಮಾಣದಲ್ಲೂ ಇದನ್ನು ಪ್ರಾರಂಭಿಸಬಹುದು. ಆದ್ರೆ ಮಷಿನ್ ಅವಶ್ಯಕತೆ ಇರುವ ಕಾರಣ ದೊಡ್ಡ ಜಾಗದ ಅವಶ್ಯಕತೆ ಇರುತ್ತದೆ. ಮೂರರಿಂದ ನಾಲ್ಕು ಮಷಿನ್ ಇದಕ್ಕೆ ಅಗತ್ಯ. ಮಾರಾಟ ಮಾಡಿದ ವಸ್ತುವನ್ನು ಚಿಲ್ಲರೆ ಅಥವಾ ಸಗಟು ರೂಪದಲ್ಲಿ ವ್ಯಾಪಾರ ಮಾಡಬಹುದು. ಆಫ್ಲೈನ್, ಆನ್ಲೈನ್ ಎರಡರಲ್ಲೂ ನೀವು ಇದನ್ನು ಮಾರಾಟ ಮಾಡಿ ಹಣ ಗಳಿಸಬಹುದು. ನೋಟ್ ಬುಕ್ ಕ್ವಾಲಿಟಿ, ಅದ್ರ ಬೆಲೆ ಮೇಲೆ ನಿಮ್ಮ ಲಾಭ ನಿಂತಿರುತ್ತದೆ. 

click me!