ಪಾನ್‌ ಜತೆ ಆಧಾರ್‌ ಲಿಂಕ್‌ ಮಾಡದಿದ್ರೆ 10 ಸಾವಿರ ರು. ದಂಡ

By Kannadaprabha NewsFirst Published Mar 3, 2020, 8:39 AM IST
Highlights

ಮಾರ್ಚ್ 31 ರೊಳಗೆ ಪಾನ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಸಂಯೋಜಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಆ ದಿನದ ನಂತರ ನಿಷ್ಕ್ರಿಯವಾಗಿರುವ ಪಾನ್‌ ಸಂಖ್ಯೆಯನ್ನು ಬಳಸಿದ್ದೇ ಆದಲ್ಲಿ ಪ್ರತಿ ವ್ಯವಹಾರಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ನವದೆಹಲಿ (ಮಾ. 03): ಮಾರ್ಚ್ 31 ರೊಳಗೆ ಪಾನ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಸಂಯೋಜಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಆ ದಿನದ ನಂತರ ನಿಷ್ಕಿ್ರಯವಾಗಿರುವ ಪಾನ್‌ ಸಂಖ್ಯೆಯನ್ನು ಬಳಸಿದ್ದೇ ಆದಲ್ಲಿ ಪ್ರತಿ ವ್ಯವಹಾರಕ್ಕೆ 10 ಸಾವಿರ ರು. ದಂಡ ವಿಧಿಸಲಾಗುತ್ತದೆ.

ಮಾಚ್‌ರ್‍ 31ರೊಳಗೆ ಪಾನ್‌ ಸಂಖ್ಯೆಯನ್ನು ಆಧಾರ್‌ನೊಂದಿಗೆ ಸಂಯೋಜಿಸದೇ ಹೋದರೆ ಪಾನ್‌ ಕಾರ್ಡ್‌ ನಿಷ್ಕ್ರಿಯವಾಗುತ್ತದೆ ಎಂದು ಕೆಲವು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 272ಬಿ ಪ್ರಕಾರ, ಪಾನ್‌ ಸಂಖ್ಯೆ ನಿಷ್ಕಿ್ರಯವಾದಾಗ, ವಹಿವಾಟಿನಲ್ಲಿ ‘ಇವರು ಪಾನ್‌ ಸಂಖ್ಯೆ ನಮೂದಿಸಿಲ್ಲ’ ಎಂದು ಭಾವಿಸಲಾಗುತ್ತದೆ. ಇದಕ್ಕೆ 10 ಸಾವಿರ ರು. ದಂಡ ವಿಧಿಸಲಾಗುತ್ತದೆ.

ಮಾಚ್‌ರ್‍ 31ರೊಳಗೆ ಪಾನ್‌ ಸಂಖ್ಯೆಯನ್ನು ಆಧಾರ್‌ ಜತೆ ಸಂಯೋಜಿಸುತ್ತಿದ್ದರೆ, ಸಂಯೋಜನೆಯಾದ ದಿನದಿಂದಲೇ ಪಾನ್‌ ಸಂಖ್ಯೆ ಚಾಲ್ತಿಗೆ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ಪರಿಗಣಿಸುತ್ತದೆ.

2020ರ ಜನವರಿವರೆಗೆ 30.75 ಕೋಟಿ ಪಾನ್‌ ಕಾರ್ಡುಗಳು ಆಧಾರ್‌ ಜತೆ ಸಂಯೋಜನೆಯಾಗಿವೆ. ಇನ್ನೂ 17.58 ಕೋಟಿ ಪಾನ್‌ ಸಂಖ್ಯೆಗಳು ಸಂಯೋಜನೆ ಆಗಬೇಕಿವೆ.

 

click me!