ಪೆಟ್ರೋಲ್, ಡೀಸೆಲ್‌ಗೂ ಕೊರೋನಾ ಎಫೆಕ್ಟ್ : ನಿರಂತರ ಇಳಿಯುತ್ತಿದೆ ದರ, ಈಗೆಷ್ಟು..?

By Suvarna NewsFirst Published Mar 2, 2020, 11:20 AM IST
Highlights

ಮಾರಕ ಕೊರೋನಾ ಪೆಟ್ರೋಲ್ ಡೀಸೆಲ್  ಮೇಲೂ ತನ್ನ ಪರಿಣಾಮ ಬೀರಿದೆ. ಪೆಟ್ರೋಲ್ ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಹಾಗಾದ್ರೆ ಈಗೆಷ್ಟು..? 

ನವದೆಹಲಿ [ಮಾ.02]: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಬೆನ್ನಲ್ಲೇ ಭಾರತದಲ್ಲಿ  ಪೆಟ್ರೋಲ್ ಡೀಸೆಲ್ ದರ ಇಳಿಕೆಯಾಗಿದೆ. ಕೊರೋನಾ ಎಫೆಕ್ಟ್ ಪೆಟ್ರೋಲ್ , ಡೀಸೆಲ್ ಮೇಲೂ ಬಿದ್ದಿದೆ. 

ಭಾರತದಲ್ಲಿ ಮಾರ್ಚ್ 2 ರಿಂದ ಅನ್ವಯವಾಗುವಂತೆ ಪ್ರತೀ ಲೀಟರ್ ಪೆಟ್ರೋಲ್  ದರ 22 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆ ಪ್ರತೀ ಲೀಟರ್ ಗೆ 21 ಪೈಸೆ ಇಳಿಕೆಯಾಗಿದೆ. 

ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 71.49 ರು.ಗಳಿದ್ದು, ಮುಂಬೈನಲ್ಲಿ 77.18 ರು.ಗಳಿದೆ. ಕೋಲ್ಕತಾದಲ್ಲಿ 74.28ರು.ಗಳಷ್ಟಾಗಿದೆ. 

ಸಬ್ಸಿಡಿ ರಹಿತ ಎಲ್‌ಪಿಜಿ ದರ 50 ರು. ಇಳಿಕೆ: ನಿನ್ನೆಯಿಂದಲೇ ಜಾರಿ..

ಇನ್ನು ಡೀಸೆಲ್ ದರ ದಿಲ್ಲಿಯಲ್ಲಿ ಪ್ರತೀ ಲೀಟರ್ ಗೆ 64.10 ರು.ಗಳಿದ್ದು, ಮುಂಬೈನಲ್ಲಿ 67.13ರು.ಗಳಷ್ಟಿದೆ. ಇನ್ನು ಕೋಲ್ಕತಾದಲ್ಲಿ 67.65 ರು.ಗಳಿದೆ. 

ಬೆಂಗಳೂರಲ್ಲಿ ಎಷ್ಟು: ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್‌ಗೆ 74.44 ರು.ಗಳಿದ್ದು, ಡೀಸೆಲ್ ದರ 66.70 ರು.ಗಳಿದೆ.

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಆಮದು ಪ್ರಮಾಣದಲ್ಲಿ ಇಳಿಯಾಗಿದ್ದು ಉತ್ಪಾದನೆ ಪ್ರಮಾಣ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಪೆಟ್ರೋಲ್ ದರ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗುತ್ತಲೇ ಸಾಗಿದೆ.  

ಇನ್ನು ಸಬ್ಸಿಡಿ ರಹಿತ ಎಲ್ ಪಿ ಜಿ ದರವೂ ಕೂಡ 50 ರು.ನಷ್ಟು ಇಳಿಕೆಯಾಗಿದೆ.

ಮಾರ್ಚ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!