ಆಧಾರ್​ ಕಾರ್ಡ್​ನಲ್ಲಿಯೋ ಜನ್ಮದಿನ ಆನ್​ಲೈನ್​ನಲ್ಲಿ ಬದಲಿಸಬಹುದಾ? ಇಲ್ಲಿದೆ ಪುಲ್​ ಡಿಟೇಲ್ಸ್​...

Published : May 06, 2025, 08:44 PM ISTUpdated : May 07, 2025, 09:58 AM IST
ಆಧಾರ್​ ಕಾರ್ಡ್​ನಲ್ಲಿಯೋ ಜನ್ಮದಿನ ಆನ್​ಲೈನ್​ನಲ್ಲಿ ಬದಲಿಸಬಹುದಾ? ಇಲ್ಲಿದೆ ಪುಲ್​ ಡಿಟೇಲ್ಸ್​...

ಸಾರಾಂಶ

ಆಧಾರ್‌ನಲ್ಲಿ ವಿಳಾಸ, ಮೊಬೈಲ್ ಸಂಖ್ಯೆ ಆನ್‌ಲೈನ್‌ನಲ್ಲಿ ತಿದ್ದುಪಡಿ ಮಾಡಬಹುದು. ಆದರೆ ಜನ್ಮ ದಿನಾಂಕ ತಿದ್ದುಪಡಿಗೆ ಸಮೀಪದ ಆಧಾರ್ ಕೇಂದ್ರಕ್ಕೆ ಜನನ ಪ್ರಮಾಣಪತ್ರ, ಶಾಲಾ ದಾಖಲೆ, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಮುಂತಾದ ದಾಖಲೆಗಳೊಂದಿಗೆ ಭೇಟಿ ನೀಡಲೇಬೇಕು. ಜನ್ಮ ದಿನಾಂಕ ಒಮ್ಮೆ ಮಾತ್ರ ಬದಲಾಯಿಸಬಹುದು. ಎರಡನೇ ಬಾರಿಗೆ ಸಂಕೀರ್ಣ ಪ್ರಕ್ರಿಯೆ ಇದೆ.

​ ಇದೀಗ ಸಾಮಾನ್ಯವಾಗಿ ಎಲ್ಲರ ಭಾರತೀಯರ ಬಳಿಯೂ ಆಧಾರ್​ ಕಾರ್ಡ್​ ಇದ್ದೇ ಇದೆ. ಆಧಾರ್​ ಕಾರ್ಡ್​ ಇಲ್ಲದಿದ್ದರೆ ಹಲವಾರು ಸೌಲಭ್ಯಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಇದನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. 12 ಅಂಕೆಗಳ  ವಿಶಿಷ್ಟ ಗುರುತಿನ ಚೀಟಿಯಾಗಿರುವ ಆಧಾರ್​ ಕಾರ್ಡ್​ ಇದ್ದರೆ ಈಗ ಹಲವಾರು ಕೆಲಸಗಳು ಸುಲಭ ಜೊತೆಗೆ ಸರ್ಕಾರಿ ಸೌಲಭ್ಯಗಳಿಗೆ ಇವು ಕಡ್ಡಾಯವಾಗಿ ಬೇಕು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಯಾವುದೋ ಕಾರಣಗಳಿಗೆ ಆಧಾರ್​ ಕಾರ್ಡ್​ನಲ್ಲಿ ಕೆಲವೊಂದು ಮಾಹಿತಿಗಳು ತಪ್ಪಾಗಿ ನಮೂದಾಗಿರುತ್ತವೆ. ಆಧಾರ್​ ಕಡ್ಡಾಯ ಮಾಡಿದ್ದ ಸಂದರ್ಭದಲ್ಲಿ, ಯಾವ್ಯಾವುದೋ ದಾಖಲೆ  ಕೊಟ್ಟೋ ಅಥವಾ ಇನ್ನೇನೋ ತಪ್ಪು ಮಾಹಿತಿ ಕೊಟ್ಟೋ ಆಧಾರ್​ ಕಾರ್ಡ್​ ಮಾಡಿಸಿಕೊಂಡಿರುತ್ತಾರೆ. ಆ ಸಮಯದಲ್ಲಿ ಅದರ ತಿದ್ದುಪಡಿಯ ಅಗತ್ಯವಿದೆ.

ಹಾಗಿದ್ದರೆ ಆಧಾರ್​ ಕಾರ್ಡ್​ನಲ್ಲಿ ಏನೆಲ್ಲಾ ತಿದ್ದುಪಡಿ ಮಾಡಬಹುದು? ಆನ್​ಲೈನ್​  ಮೂಲಕ ಮಾಡುವ ಅವಕಾಶ ಇದ್ಯಾ ಎನ್ನುವ ಪ್ರಶ್ನೆ ಬಹು ಜನರಲ್ಲಿ ಕಾಡಬಹುದು. ನೀವು ಆನ್​ಲೈನ್​ನಲ್ಲಿ ನಿಮ್ಮ ವಿಳಾಸವನ್ನು ಎಷ್ಟು ಸಾರಿ ಬೇಕಾದರೂ ಬದಲಾಯಿಸಬಹುದು. ಮೊಬೈಲ್​ ಸಂಖ್ಯೆಯನ್ನು ಬದಲಾಯಿಸಲು ಅವಕಾಶವಿದೆ. ಆದರೆ ಜನ್ಮ ದಿನಾಂಕವನ್ನು ಮಾತ್ರ ಆನ್​ಲೈನ್​ ಮೂಲಕ ಬದಲಾಯಿಸಲು ಸಾಧ್ಯವಿಲ್ಲ. ನಿಮ್ಮ ಜನ್ಮ ದಿನಾಂಕ ಆಧಾರ್​ನಲ್ಲಿ ನಮೂದಾಗಿರುತ್ತದೆ. ಅಕಸ್ಮಾತ್ತಾಗಿ ಅದೇನಾದರೂ ತಪ್ಪಾಗಿ ನಮೂದು ಆಗಿದ್ದರೆ ನೀವು ಅದನ್ನು ಆನ್​ಲೈನ್​ನಲ್ಲಿ ಸರಿ ಮಾಡಲು ಅವಕಾಶ ಇಲ್ಲ!

ನೀಲಿ ಆಧಾರ್​ ಕಾರ್ಡ್​ ಇದ್ಯಾ? ಇದರ ಪ್ರಯೋಜನ- ಆನ್​ಲೈನ್​ನಲ್ಲೇ ಮಾಡಿಸೋ ಬಗೆ ತಿಳಿಯಿರಿ...

ಒಂದು ವೇಳೆ ನೀವು ಜನ್ಮ ದಿನಾಂಕವನ್ನು ಸರಿಪಡಿಸಬೇಕು ಎಂದಾದರೆ, ಸೂಕ್ತ ದಾಖಲೆಯನ್ನು ತೆಗೆದುಕೊಂಡು ಸಮೀಪದ ಆಧಾರ್​ ಕಾರ್ಡ್​ ಸೆಂಟರ್​ಗೇ ಹೋಗಬೇಕು. ಆ ಸಂದರ್ಭದಲ್ಲಿ ನಿಮ್ಮ ಸರಿಯಾದ ಜನ್ಮದಿನದ ಮಾಹಿತಿ ಇರುವ ಜನನ ಪ್ರಮಾಣ ಪತ್ರ, ಶಾಲೆಯ ದಾಖಲಾತಿ ಪತ್ರ, ಪಾಸ್​ಪೋರ್ಟ್​, ಪ್ಯಾನ್​ಕಾರ್ಡ್​ ಇತ್ಯಾದಿಗಳನ್ನು ಕೊಟ್ಟು ಕಚೇರಿಯಲ್ಲಿಯೇ ಅದನ್ನು ಸರಿಪಡಿಸಿಕೊಳ್ಳಬೇಕು. ಹಾಂ. ಒಂದು ಮಾತು ನೆನಪಿರಲಿ. ಒಮ್ಮೆ ನೀವು ನಿಮ್ಮ ಜನ್ಮದಿನವನ್ನು ಬದಲಾಯಿಸಿಕೊಂಡದ್ದೇ ಆದಲ್ಲಿ, ಮತ್ತೊಮ್ಮೆ ಅದನ್ನು ಬದಲಾಯಿಸುವ ಅವಕಾಶ ಇರುವುದಿಲ್ಲ.

ಹಾಗೊಮ್ಮೆ ಎರಡು ಬಾರಿ ನಿಮಗೆ ಬದಲಾಯಿಸುವ ಅಗತ್ಯ ಬಿದ್ದರೆ ಕಚೇರಿಯಲ್ಲಿ ಇರುವ ತುಂಬಾ ದೊಡ್ಡ ಪ್ರೊಸೀಜರ್​ಗೆ ನೀವು ಒಳಗಾಗಬೇಕಾಗುತ್ತದೆ. ಆ ಸಂದರ್ಭದಲ್ಲಿ ಅವರು ಕೇಳುವ ಎಲ್ಲಾ ದಾಖಲೆಗಳನ್ನೂ ನೀಡಬೇಕಾಗುತ್ತದೆ. ಸ್ವಲ್ಪ ಅನುಮಾನ ಬಂದರೂ ನಿಮಗೇ ಅಪಾಯ. ಆದ್ದರಿಂದ ಜನ್ಮ ದಿನಾಂಕವನ್ನು ಬದಲಾಯಿಸುವ ಸಂದರ್ಭ ಬಂದರೆ, ಸಮೀಪದ ಕಚೇರಿಗೆ ಸೂಕ್ತ ದಾಖಲೆ ಜೊತೆ ಹೋಗಿ ಸರಿಪಡಿಸಿಕೊಂಡು ಬನ್ನಿ. ಅದಕ್ಕೂ ಮುನ್ನ ನೀವು ಸರಿಪಡಿಸುತ್ತಿರುವ ಜನ್ಮದಿನ ಸರಿಯಾಗಿದೆಯೇ ಎನ್ನುವುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ. ಜನ್ಮದಿನವನ್ನು ಆನ್​ಲೈನ್​ನಲ್ಲಿ ಬದಲಾಯಿಸಬಹುದು ಎನ್ನುವ ಮಾತಿಗೆ ಕಿವಿಗೊಡಬೇಡಿ. 

ಗೃಹ, ವಾಹನ ಸಾಲ ಬಯಸಿದವರಿಗೆ ಬಂಪರ್​: FD ಇಡುವವರಿಗೆ ಬ್ಯಾಡ್​ ನ್ಯೂಸ್​: ಇಲ್ಲಿದೆ ಡಿಟೇಲ್ಸ್​...

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!