ಆಧಾರ್ ದುರ್ಬಳಕೆ ತಡೆಯಲು ಹೊಸ ವಿಧಾನ ಪರಿಚಯಿಸಿದ ಯುಐಡಿಎಐ; ಏನಿದರ ವಿಶೇಷತೆ?

By Anusha ShettyFirst Published May 10, 2024, 7:17 PM IST
Highlights

ಆಧಾರ್ ದುರ್ಬಳಕೆ ತಡೆಗೆ ಮುಂದಾಗಿರುವ ಯುಐಡಿಎಐ, 16 ಅಂಕೆಗಳ ಡಿಜಿಟಲ್ ವರ್ಚುವಲ್ ಐಡಿ (ವಿಐಡಿ) ಮೂಲಕ ಲಾಕ್ ಹಾಗೂ ಅನ್ ಲಾಕ್ ಫೀಚರ್ ಪರಿಚಯಿಸಿದೆ.

ನವದೆಹಲಿ (ಮೇ 10): ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಿವೆ. ಆಧಾರ್ ನಂಬ್ರ ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಆಧಾರ್ ಅನ್ನು 16 ಅಂಕೆಗಳ ಡಿಜಿಟಲ್ ವರ್ಚುವಲ್ ಐಡಿ (ವಿಐಡಿ)  ಬಳಸಿಕೊಂಡು ಸಂರಕ್ಷಿಸಲು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)  ಲಾಕ್ ಹಾಗೂ ಅನ್ ಲಾಕ್ ಫೀಚರ್ ಪರಿಚಯಿಸಿದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಅಥವಾ ಕಳುವಾಗಿದ್ದರೆ ನೀವು ಯುಐಡಿಎಐ ವೆಬ್ ಸೈಟ್ ಅಥವಾ ಎಸ್ ಎಂಎಸ್ ಮೂಲಕ ಆಧಾರ್ ಸಂಖ್ಯೆಯನ್ನು ಲಾಕ್ ಮಾಡಬಹುದು. ಕೆಲವು ವರದಿ ಪ್ರಕಾರ ಕಳೆದು ಹೋಗಿರುವ ನಿಮ್ಮ ಆಧಾರ್ ಕಾರ್ಡ್ ಸಿಕ್ಕಿದ ಬಳಿಕ ಅಥವಾ ಬದಲಿ ಕಾರ್ಡ್ ಪಡೆದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿಕೊಂಡು ಅಥವಾ ಯುಐಡಿಎಐ ವೆಬ್ ಸೈಟ್ ಮುಖಾಂತರ ಲಾಕ್ ಅನ್ನು ತೆಗೆಯಬಹುದು. ಇನ್ನು ನಿಮ್ಮ ಆಧಾರ್ ಲಾಕ್ ಆಗಿರುವಾಗ ಅದನ್ನು ಯಾರು ಕೂಡ ಯಾವುದೇ ವಿಧದ ದೃಢೀಕರಣ ಪ್ರಕ್ರಿಯೆಗೆ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.

ಆಧಾರ್ ಲಾಕ್ ಅಥವಾ ಅನ್ ಲಾಕ್ ಹೇಗೆ?
1.ವರ್ಚುವಲ್ ಐಡಿ (ವಿಐಡಿ) ಸೃಷ್ಟಿಸಿ: ನಿಮ್ಮ ಆಧಾರ್ ಅನ್ನು ಲಾಕ್ ಮಾಡಲು 16 ಅಂಕೆಗಳ ವರ್ಚುವಲ್ ಐಡಿ (ವಿಐಡಿ) ಅಗತ್ಯ. ನೀವು ಯುಐಡಿಎಐ ವೆಬ್ಸೈಟ್ www.myaadhaar.uidai.gov.in ಭೇಟಿ ನೀಡಿ ಅಲ್ಲಿ "Generate Virtual ID" ಬಳಸಿಕೊಂಡು ವರ್ಚುವಲ್ ಐಡಿ ಸೃಷ್ಟಿಸಬಹುದು. ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಸ್ ಎಂಎಸ್ ಕಳುಹಿಸುವ ಮೂಲಕ ಕೂಡ ಕೂಡ ವರ್ಚುವಲ್ ಐಡಿ ಸೃಷ್ಟಿಸಬಹುದು. ಎಸ್ ಎಂಎಸ್ ಮೂಲಕ ವರ್ಚುವಲ್ ಐಡಿ ಸೃಷ್ಟಿಸಲು 'GVID (ಯುಐಡಿಯ ಕೊನೆಯ ನಾಲ್ಕು ಅಥವಾ ಎಂಟು ಅಂಕೆಗಳು) ಅನ್ನು 194ಕ್ಕೆ ಕಳುಹಿಸಿ. ಉದಾಹರಣೆಗೆ "GVID 1234".

ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಗಡುವು ವಿಸ್ತರಿಸಿದ ಸರ್ಕಾರ, ಜೂನ್ 14ರ ತನಕ ಕಾಲಾವಕಾಶ

2.ವಿಐಡಿ ಬಳಸಿಕೊಂಡು ಆಧಾರ್ ಲಾಕ್ ಮಾಡಿ: ಒಮ್ಮೆ ನಿಮಗೆ ವಿಐಡಿ ಸಿಕ್ಕ ಬಳಿಕ ಯುಐಡಿಎಐ ವೆಬ್ ಸೈಟ್ ಅಥವಾ mAadhaar app ಬಳಸಿಕೊಂಡು ನಿಮ್ಮ ಆಧಾರ್ ಲಾಕ್ ಮಾಡಿ. ಈ ರೀತಿ ಒಮ್ಮೆ ಲಾಕ್ ಮಾಡಿದ ಬಳಿಕ ನಿಮ್ಮ ಆಧಾರ್ ಸಂಖ್ಯೆ, ಬಯೋಮೆಟ್ರಿಕ್, ಡೆಮೋಗ್ರಾಫಿಕ್ ಅಥವಾ ಒಟಿಪಿ ಮೋಡ್ ಬಳಸಿಕೊಂಡು ದೃಢೀಕರಣ ಮಾಡಲು ಸಾಧ್ಯವಾಗೋದಿಲ್ಲ.

ಆಧಾರ್ ಅನ್ ಲಾಕ್ ಮಾಡೋದು ಹೇಗೆ?
1.ವಿಐಡಿ ಹಿಂಪಡೆಯೋದು: ಒಂದು ವೇಳೆ ನಿಮಗೆ ಆಧಾರ್ ಅನ್ ಲಾಕ್ ಮಾಡಬೇಕಾಗಿದ್ದು, ವಿಐಡಿ ಮರೆತು ಹೋಗಿದ್ದರೆ 'RVID (ಯುಐಡಿಎಐಯ ಕೊನೆಯ 4 ಅಥವಾ 8 ಅಂಕೆಗಳು)' ಅನ್ನು 1947ಕ್ಕೆ ಕಳುಹಿಸಿ. ಉದಾಹರಣೆಗೆ RVID 1234 ಎಂದು 1947ಕ್ಕೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಸ್ ಎಂಎಸ್ ಮಾಡಿ. ಇದಾದ ಬಳಿಕ  ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ 16 ಅಂಕೆಗಳ ವಿಐಡಿ ಎಸ್ ಎಂಎಸ್ ಮೂಲಕ ಬರುತ್ತದೆ.

ಏನಿದು ನೀಲಿ ಆಧಾರ್ ಕಾರ್ಡ್? ಇದನ್ನು ಯಾರಿಗಾಗಿ, ಹೇಗೆ ಮಾಡಿಸುವುದು?

2.ವಿಐಡಿ ಮೂಲಕ ಆಧಾರ್ ಅನ್ ಲಾಕ್ ಮಾಡಿ: ಒಮ್ಮೆ ನಿಮಗೆ ವಿಐಡಿ ಸಿಕ್ಕ ಬಳಿಕ ಯುಐಡಿಎಐ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ mAadhaar app ಮೂಲಕ ಆಧಾರ್ ಅನ್ನು ಅನ್ ಲಾಕ್ ಮಾಡಿ. ಹೀಗೆ ಅನ್ ಲಾಕ್ ಮಾಡಿದ ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ದೃಢೀಕರಣ ಉದ್ದೇಶಗಳಿಗೆ ಬಳಸಬಹುದು. 


 

click me!