ಎಲೆಕ್ಟ್ರಿಕ್ ವಾಹನ ಹೊಂದಿರೋರು 1.5 ಲಕ್ಷ ರೂ. ತನಕ ತೆರಿಗೆ ಉಳಿಸ್ಬಹುದು, ಅದು ಹೇಗೆ?

By Anusha Shetty  |  First Published May 10, 2024, 4:20 PM IST

ತೆರಿಗೆ ಉಳಿತಾಯಕ್ಕೆ ಯಾವೆಲ್ಲ ಮಾರ್ಗಗಳಿವೆ ಎಂದು ತೆರಿಗೆದಾರರು ಯೋಚಿಸೋದು ಸಹಜ. ಎಲೆಕ್ಟ್ರಿಕ್ ವಾಹನ ಹೊಂದಿರೋರು 1.5 ಲಕ್ಷ ರೂ. ತನಕ ತೆರಿಗೆ ಉಳಿತಾಯ ಮಾಡಲು ಸಾಧ್ಯವಿದೆ. ಅದು ಹೇಗೆ? 


Business Desk: ಈಗಂತೂ ತೆರಿಗೆ ಉಳಿಸಲು ಯಾವೆಲ್ಲ ಮಾರ್ಗಗಳಿವೆ ಎಂದು ತೆರಿಗೆದಾರರು ಹುಡುಕಾಟ ನಡೆಸುವ ಸಮಯ. ಏಕೆಂದ್ರೆ ಐಟಿಆರ್ ಸಲ್ಲಿಕೆ ಪ್ರಕ್ರಿಯೆಗಳು ಈಗಾಗಲೇ ಪ್ರಾರಂಭಗೊಂಡಿವೆ. ಹೀಗಿರುವಾಗ ಎಲೆಕ್ಟ್ರಿಕ್ ಆಹನ ಹೊಂದಿರೋರಿಗೆ ತೆರಿಗೆ ಉಳಿಸಲು ಅವಕಾಶವಿದೆ ಎಂಬ ವಿಚಾರ ಬಹುತೇಕರಿಗೆ ತಿಳಿದಿಲ್ಲ. ಭಾರತ ಸರ್ಕಾರ ಹಸಿರು ಭವಿಷ್ಯದ ಕನಸು ಕಾಣುತ್ತಿದೆ. ಅಷ್ಟೇ ಅಲ್ಲ, ಅದರ ಸಾಕಾರಕ್ಕೆ ಎಲೆಕ್ಟ್ರಿಕ್ ವಾಹನಗಳನ್ನೇ ಮೆಟ್ಟಿಲಾಗಿಸಿಕೊಂಡಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಖರೀದಿಸೋರಿಗೆ ಸಬ್ಸಿಡಿ ಹೊರತಾಗಿ ತೆರಿಗೆ ಪ್ರಯೋಜನಗಳನ್ನು ಕೂಡ ನೀಡುತ್ತಿದೆ. ಹೌದು, ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿದ ಸಾಲದ ಬಡ್ಡಿ ಪಾವತಿ ಮೇಲೆ ಆದಾಯ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಇಇಬಿ  ಅಡಿಯಲ್ಲಿ ತೆರಿಗೆದಾರರು ಎಲೆಕ್ಟ್ರಿಕ್ ವಾಹನ ಖರೀದಿಸಲು ಮಾಡಿದ ಸಾಲಕ್ಕೆ ಪಾವತಿಸಿದ ಬಡ್ಡಿ ಮೇಲೆ 1,50,000 ರೂ. ತನಕ ತೆರಿಗೆ ಕಡಿತವನ್ನು ಕ್ಲೇಮ್ ಮಾಡಬಹುದು. ಹಾಗಾದ್ರೆ ಈ ತೆರಿಗೆ ಕಡಿತದ ಪ್ರಯೋಜನವನ್ನು ಬಳಸಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.

ಷರತ್ತು ಅನ್ವಯ
ಅಂದಹಾಗೇ ಎಲೆಕ್ಟ್ರಿಕ್ ವಾಹನದ ಸಾಲದ ಬಡ್ಡಿ ಪಾವತಿ ಮೇಲಿನ ತೆರಿಗೆ ಕಡಿತದ ಪ್ರಯೋಜನ  2019ರ ಜನವರಿ 1ರಿಂದ 2023ರ ಮಾರ್ಚ್ 31ರ ನಡುವೆ ಅನುಮೋದನೆಗೊಂಡ ಸಾಲಗಳಿಗೆ ಮಾತ್ರ ಅನ್ವಯಿಸುತ್ತದೆ. ಹೀಗಾಗಿ ಈ ಅವಧಿಯಲ್ಲಿ ನೀವು ಸಾಲ ಮಾಡಿ ಎಲೆಕ್ಟ್ರಿಕ್ ವಾಹನ ಖರೀದಿಸಿದ್ರೆ ತೆರಿಗೆ ಕಡಿತದ ಪ್ರಯೋಜನವನ್ನು ಬಳಸಿಕೊಳ್ಳಬಹುದು. ಆದರೆ, ಆ ಬಳಿಕ ಖರೀದಿಸಿದ್ರೆ ಈ ಅವಕಾಶ ನಿಮಗೆ ಸಿಗಲ್ಲ. 

Tap to resize

Latest Videos

undefined

ತೆರಿಗೆದಾರರೇ ಗಮನಿಸಿ, ನೀವು ಆನ್ ಲೈನ್ ಐಟಿಆರ್ ಸಲ್ಲಿಕೆ ಮಾಡ್ಬಹುದು; ಐಟಿಆರ್-1, ಐಟಿಆರ್-2, ಐಟಿಆರ್-4 ಈಗ ಲಭ್ಯ

ಇದು ಹೇಗೆ ಕಾರ್ಯನಿರ್ವಹಿಸುತ್ತೆ?
2022ರಲ್ಲಿ ಎಲೆಕ್ಟ್ರಿಕ್ ಕಾರು ಖರೀದಿಸಲು ನೀವು 5 ಲಕ್ಷ ರೂ. ಸಾಲ ತೆಗೆದುಕೊಂಡಿರುತ್ತೀರಿ. ಇನ್ನು ಸಾಲದ ಅವಧಿಯಲ್ಲಿ ಒಂದು ಲಕ್ಷ ರೂ. ಬಡ್ಡಿ ಪಾವತಿಸಿರುತ್ತೀರಿ. ಸೆಕ್ಷನ್ 80EEB ಅಡಿಯಲ್ಲಿ ನೀವು ಬಡ್ಡಿ ಪಾವತಿ ಮೇಲೆ  1,50,000 ರೂ. ಕಡಿತವನ್ನು ಕ್ಲೇಮ್ ಮಾಡಬಹುದು. ಈ ಮೇಲೆ ವಿವರಿಸಿದ ಪ್ರಕರಣದಲ್ಲಿ ನೀವು ಪಾವತಿಸಿದ ಬಡ್ಡಿ ಕಡಿತದ ಮಿತಿಯ ಒಳಗಿದೆ. ಹೀಗಾಗಿ ನೀವು ನಿಮ್ಮ ತೆರಿಗೆ ವ್ಯಾಪ್ತಿಗೊಳಪಡುವ ಆದಾಯವನ್ನು ಒಂದು ಲಕ್ಷ ರೂ. ತನಕ ಕಡಿಮೆ ಮಾಡಬಹುದು. ಇದರಿಂದ ನಿಮ್ಮ ತೆರಿಗೆ ಬಿಲ್ ತಗ್ಗುತ್ತದೆ.

ಈ ಅಂಶಗಳನ್ನು ಗಮನಿಸಿ:
* ಈ ಕಡಿತದ ಮೊತ್ತ ಸಾಲದ ಬಡ್ಡಿ ಭಾಗಕ್ಕೆ ಮಾತ್ರ ಅನ್ವಯಿಸುತ್ತದೆ, ಮೂಲ ಮೊತ್ತಕ್ಕೆ ಅಲ್ಲ.
*ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆ ಮಾಡುವ ಸಮಯದಲ್ಲಿ ಈ ಕಡಿತ ಕ್ಲೇಮ್ ಮಾಡಬಹುದು.
*2024-25 ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆಗೆ 2024 ಜುಲೈ 31ಅಂತಿಮ ಗಡುವಾಗಿದೆ. 

ತೆರಿಗೆದಾರರೇ ನೆನಪಿಡಿ, ಐಟಿಆರ್ ಸಲ್ಲಿಕೆ ಮಾಡೋವಾಗ ಯಾವುದೇ ಕಾರಣಕ್ಕೂ ಈ 10 ತಪ್ಪುಗಳನ್ನು ಮಾಡ್ಬೇಡಿ

ಆನ್ ಲೈನ್ ಸಲ್ಲಿಕೆ ಹೇಗೆ?
ಆದಾಯ ತರಿಗೆ ಇಲಾಖೆಯ ಪೋರ್ಟಲ್ ನಲ್ಲಿ ನೇರವಾಗಿ ಮಾಹಿತಿಗಳನ್ನು ತುಂಬುವ ಮೂಲಕ ತೆರಿಗೆದಾರರು ಐಟಿಆರ್ ಸಲ್ಲಿಕೆ ಮಾಡಬಹುದು. ಆದರೆ, ಐಟಿಆರ್ ಸಲ್ಲಿಕೆ ಮಾಡುವ ಮೂಲಕ ಅದನ್ನು ದೃಢೀಕರಿಸೋದು ಕೂಡ ಅಗತ್ಯ. ತೆರಿಗೆದಾರರು ದೃಢೀಕರಿಸದ ಐಟಿಆರ್ ಅನ್ನು ಆದಾಯ ತೆರಿಗೆ ಇಲಾಖೆ ಪರಿಗಣಿಸೋದಿಲ್ಲ.

ಆಪ್ ಲೈನ್ ಐಟಿಆರ್ ಸಲ್ಲಿಕೆ ಹೇಗೆ?
ಆದಾಯ ತೆರಿಗೆ ಇಲಾಖೆ ಆಪ್ ಲೈನ್ ಐಟಿಆರ್ ಸಲ್ಲಿಕೆಗೆ ಕೂಡ ಏ.1ರಿಂದ ಅವಕಾಶ ಕಲ್ಪಿಸಿದೆ. ಇದಕ್ಕಾಗಿ JSON ಹಾಗೂ  Excel ಫಾರ್ಮ್ಯಾಟ್ ನಲ್ಲಿ ಐಟಿಆರ್1,ಐಟಿಆರ್ -2, ಐಟಿಆರ್-4, ಐಟಿಆರ್-6 ಅರ್ಜಿ ನಮೂನೆಗಳನ್ನು ಒದಗಿಸಿದೆ. ತೆರಿಗೆದಾರರು ತಮಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ, ಆ ಬಳಿಕ ಆದಾಯ ತೆರಿಗೆ ಪೋರ್ಟಲ್ ನಲ್ಲಿ ಅದನ್ನು ಅಪ್ಲೋಡ್ ಮಾಡಬೇಕು.

click me!