Reporting Traffic Violations: ಟ್ರಾಫಿಕ್ ಪೊಲೀಸ್ ರಂತೆ ನೀವೂ ಕೆಲ್ಸ ಮಾಡಿ, ತಿಂಗಳಿಗೆ 10-50 ಸಾವಿರ ಗಳಿಸುವ ಅವಕಾಶ

Published : Jul 14, 2025, 07:16 PM IST
Traffic Police Constable  01

ಸಾರಾಂಶ

ಟ್ರಾಫಿಕ್ ಪೊಲೀಸರಂತೆ ನೀವೂ ಕೆಲ್ಸ ಮಾಡುವ ಅವಕಾಶವಿದೆ. ರೂಲ್ಸ್ ಬ್ರೇಕ್ ಮಾಡಿದವರಿಗೆ ಸರಿಯಾದ ದಾರಿ ತೋರಿಸುವ ಜೊತೆಗೆ ನೀವು ಹಣ ಸಂಪಾದನೆ ಮಾಡ್ಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ. 

ಸಿಗ್ನಲ್ ಬ್ರೇಕ್ (Signal break) ಮಾಡಿದ್ರೆ ಸೀಟಿ ಊದಿ, ಕೈ ಮಾಡಿ ವಾಹನ ನಿಲ್ಲಿಸಿ ದಂಡ ವಿಧಿಸುತ್ತಿದ್ದ ಕಾಲ ಈಗಿಲ್ಲ. ಇದು ಡಿಜಿಟಲ್. ಎಲ್ಲ ಕಡೆ ಸಿಸಿಟಿವಿ ಅಳವಡಿಸಲಾಗಿದೆ. ಸಿಗ್ನಲ್ ಬ್ರೇಕ್ ಮಾಡಿದ್ರೆ, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ವಾಹನ ನಿಲ್ಲಿಸುವ ಅಗತ್ಯವಿಲ್ಲ ಅಥವಾ ಚಲನ್ ಸ್ಲಿಪ್ ನೀಡುವ ಅಗತ್ಯವಿಲ್ಲ. ಚಲನ್ ನೇರವಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ ಎಂಎಸ್ ಬರುತ್ತೆ ಅಥವಾ ಇಮೇಲ್ ಮೂಲಕ ಬರುತ್ತೆ. ತಂತ್ರಜ್ಞಾನ ಬದಲಾದಂತೆ ಸಂಚಾರಿ ಪೊಲೀಸರ ಕೆಲ್ಸ ಸುಲಭವಾಗಿದೆ. ಈಗ ಸಂಚಾರಿ ಪೊಲೀಸರು ಮಾತ್ರವಲ್ಲ ಸಾಮಾನ್ಯ ಜನರು ಕೂಡ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಚಲನ್ ನೀಡಬಹುದು. ಈ ಮೂಲಕ ನೀವೂ ಹಣ ಸಂಪಾದನೆ ಮಾಡ್ಬಹುದು. ತಿಂಗಳಿಗೆ 50 ಸಾವಿರದವರೆಗೆ ಹಣ ಗಳಿಸುವ ಅವಕಾಶ ನಿಮಗೆ ಸಿಗ್ತಿದೆ.

ದೆಹಲಿ ಪೊಲೀಸರು (Delhi Police) ಸಾರ್ವಜನಿಕರಿಗಾಗಿ ಪೊಲೀಸ್ ಪ್ರಹರಿ ಎಂಬ ವಿಶೇಷ ವ್ಯವಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇದರ ಮೂಲಕ, ಸಂಚಾರಿ ಸಿಗ್ನಲ್ ಉಲ್ಲಂಘಿಸುವವರ ಅಥವಾ ಸಂಚಾರ ನಿಯಮಗಳನ್ನು ನಿರ್ಲಕ್ಷಿಸುವವರ ಫೋಟೋವನ್ನು ಕಳುಹಿಸುವ ಮೂಲಕ ನೀವು ನಿಯಮಗಳನ್ನು ಅನುಸರಿಸಲು ಸಹಾಯ ಮಾಡಬಹುದು. ಅದ್ರ ಜೊತೆ ಹಣ ಗಳಿಸಬಹುದು.

ದೆಹಲಿ ಸಂಚಾರ ಪೊಲೀಸ್ ಇಲಾಖೆಯ ಡಿಸಿಪಿ ಎಸ್.ಕೆ. ಸಿಂಗ್ ಅವರ ಪ್ರಕಾರ, ಗೂಗಲ್ ಪ್ಲೇ ಸ್ಟೋರ್ನಿಂದ ಪ್ರಹರಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ನೀವು OTP ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ನಂತ್ರ ಯಾರಾದರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದನ್ನು ನೀವು ನೋಡಿದರೆ ಅಂದ್ರೆ ಹೆಲ್ಮೆಟ್ ಇಲ್ಲದೆ ಚಾಲನೆ ಮಾಡುವುದು, ತಪ್ಪು ದಿಕ್ಕಿನಲ್ಲಿ ಚಾಲನೆ ಮಾಡುವುದು, ಸಿಗ್ನಲ್ ಬ್ರೇಕ್ ಮಾಡುವುದು ಸೇರಿದಂತೆ ಯಾವುದೇ ನಿಯಮ ಬ್ರೆಕ್ ಮಾಡೋದನ್ನು ನೀವು ನೋಡಿದ್ರೆ ನಂತರ ವಾಹನದ ಸ್ಪಷ್ಟ ಫೋಟೋ ತೆಗೆದುಕೊಂಡು ಅದನ್ನು ಅಪ್ಲಿಕೇಶನ್ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಇದರೊಂದಿಗೆ, ನೀವು ಫೋಟೋ ತೆಗೆದ ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಬೇಕು.

ದೆಹಲಿ ಸಂಚಾರ ಪೊಲೀಸರು ಮಾಹಿತಿಯನ್ನು ಪರಿಶೀಲಿಸುತ್ತಾರೆ. ಹಾಗೆ ನೀವು ನೀಡಿದ ಫೋಟೋ ಪರಿಶೀಲಿಸುತ್ತಾರೆ. ಫೋಟೋ ಸರಿಯಾಗಿದ್ದು, ನಿಯಮ ಉಲ್ಲಂಘನೆ ಮಾಡಿದ್ದು ಸ್ಪಷ್ಟವಾದ್ರೆ ವಾಹನ ಮಾಲೀಕರಿಗೆ ಇ-ಚಲನ್ ಕಳುಹಿಸಲಾಗುತ್ತದೆ. ಇದರೊಂದಿಗೆ, ಫೋಟೋ ಕಳುಹಿಸುವ ವ್ಯಕ್ತಿಗೆ ಅದರ ಬಗ್ಗೆ ತಿಳಿಸಲಾಗುತ್ತದೆ.

ಹಣ ಗಳಿಕೆ ಹೇಗೆ? : ದೆಹಲಿ ಪೊಲೀಸರ ಪ್ರಕಾರ, 'ಪ್ರಹರಿ' ಅಪ್ಲಿಕೇಶನ್ನಲ್ಲಿ ಜನರು ಪ್ರತಿದಿನ 14 ರಿಂದ 1500 ಚಲನ್ ಫೋಟೋಗಳನ್ನು ಕಳುಹಿಸಲಾಗುತ್ತಿದೆ. ಪ್ರತಿ ತಿಂಗಳು, ಹೆಚ್ಚು ಚಲನ್ ಕಳುಹಿಸಿದವರ ಮತ್ತು ಸರಿಯಾದ ಚಲನ್ಗಳನ್ನು ಕಳುಹಿಸಿದವರ ಪಟ್ಟಿ ಮಾಡ್ತಾರೆ. ಹೆಚ್ಚು ಚಲನ್ ಕಳುಹಿಸಿದ ಟಾಪ್ 4 ಜನರಿಗೆ ದೆಹಲಿ ಪೊಲೀಸರು ಬಹುಮಾನಗಳನ್ನು ನೀಡುತ್ತಾರೆ. ಒಂದು ತಿಂಗಳಲ್ಲಿ ಹೆಚ್ಚು ಮತ್ತು ಸರಿಯಾದ ಚಲನ್ಗಳನ್ನು ಕಳುಹಿಸಿ ನೀವೂ ಟಾಪರ್ ಆಗ್ಬಹುದು .ಇದಕ್ಕೆ ಪ್ರತಿಯಾಗಿ ದೆಹಲಿ ಪೊಲೀಸರು 50 ಸಾವಿರ ರೂಪಾಯಿ ನೀಡ್ತಾರೆ. ಮೊದಲು ಬಂದವರಿಗೆ 50 ಸಾವಿರ, ಎರಡನೇ ಸ್ಥಾನದಲ್ಲಿರುವವರಿಗೆ 25000 ರೂಪಾಯಿ ನೀಡಲಾಗುತ್ತದೆ. ಮೂರನೇ ಸ್ಥಾನ ಪಡೆದ ವ್ಯಕ್ತಿಗೆ 15 ಸಾವಿರ ಮತ್ತು ನಾಲ್ಕನೇ ಸ್ಥಾನಕ್ಕೆ ಬಂದ ವ್ಯಕ್ತಿಗೆ 10 ಸಾವಿರ ನೀಡಲಾಗುತ್ತದೆ. ಈ ಬಹುಮಾನಗಳನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಈ ಯೋಜನೆ ನಿರುದ್ಯೋಗಿಗಳಿಗೆ ಅಥವಾ ಸಮಾಜಕ್ಕೆ ಸಹಾಯ ಮಾಡಲು ಬಯಸುವವರಿಗೆ ಪ್ರಯೋಜನ ನೀಡ್ತಿದೆ. ಅನೇಕರು ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ