ಇದು ಆಫರ್: ಬರೀ 1 ರೂ.ಗೆ ಚಿನ್ನ, ನೀವು ಹೀಗೆ ಮಾಡಿದರೆ ಚೆನ್ನ!

Published : Dec 18, 2018, 06:43 PM ISTUpdated : Dec 18, 2018, 06:45 PM IST
ಇದು ಆಫರ್: ಬರೀ 1 ರೂ.ಗೆ ಚಿನ್ನ, ನೀವು ಹೀಗೆ ಮಾಡಿದರೆ ಚೆನ್ನ!

ಸಾರಾಂಶ

ಕೇವಲ 1 ರೂ.ಗೆ ಸಿಗಲಿದೆ 10 ಗ್ರಾಂ ಚಿನ್ನ| ಆನ್‌ಲೈನ್ ಮಾರುಕಟ್ಟೆಯಲ್ಲಿ ಜೋರಾಗಿದೆ ವಹಿವಾಟು| ಏನಿದು 1 ರೂ.ಗೆ ಚಿನ್ನದ ಅಸಲಿ ಕಹಾನಿ?| ಭಾರತದಲ್ಲಿ ಶೆ.23 ರಷ್ಟು ಕಡಿಮೆಯಾಗಿದೆ ಚಿನ್ನದ ಮಾರಾಟ  

ನವದೆಹಲಿ(ಡಿ.18): ಬಂಗಾರ ಕೂಡ ಆನ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇ-ಕಾಮರ್ಸ್ಗಳ ಮೂಲಕ ಚಿನ್ನ, ಬೆಳ್ಳಿ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಅದರಂತೆ ಆನ್‌ಲೈನ್‌ನಲ್ಲಿ ಚಿನ್ನದ ದರಗಳ ಪೈಪೋಟಿ ಶುರುವಾಗಿದ್ದು, ಇದೀಗ ಚಿನ್ನವನ್ನು ಕೇವಲ 1 ರೂ. ಗೆ ಆನ್‌ಲೈನ್ ಮೂಲಕ ಖರೀದಿಸುವ ಆಫರ್ ಚರ್ಚೆಗೆ ಗ್ರಾಸವಾಗಿದೆ.

ಆಭರಣ ಆಮದಿನಲ್ಲಿ ಭಾರತ ವಿಶ್ವದ ಎರಡನೇ ಅತ್ಯಂತ ದೊಡ್ಡ ಆಮದು ರಾಷ್ಟ್ರವಾಗಿದ್ದು, ಪಾರಂಪರಿಕ ಬಂಗಾರದ ಅಂಗಡಿಯಿಂದ ಚಿನ್ನ, ಬೆಳ್ಳಿ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ.

ಇದೇ ಕಾರಣಕ್ಕೆ ಆಭರಣ ಮಳಿಗೆಯವರು ಆನ್‌ಲೈನ್ ವ್ಯಾಪಾರಕ್ಕೆ ಮೊರೆ ಹೋಗಿದ್ದು, ಆನ್‌ಲೈನ್‌ನಲ್ಲಿ ಚಿನ್ನ, ಬೆಳ್ಳಿ ಖರೀದಿಸುವ ಭರಾಟೆ ಜೋರಾಗಿದೆ.

ಇದಕ್ಕೆ ಹಲವು ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳು ಕೂಡ ಕೈ ಜೋಡಿಸಿದ್ದು, ಹತ್ತು ಹಲವು ಆಫರ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.

1 ಗ್ರಾಂ ಚಿನ್ನದ ಪ್ರಸ್ತುತ ಮಾರುಕಟ್ಟೆ ದರವನ್ನೇ ಪಾವತಿಸಬೇಕಾಗುತ್ತದೆ . ಆದರೆ ಇದಕ್ಕಾಗಿ ನಡೆಯುವ ನೋಂದಣಿ ಪ್ರಕ್ರಿಯೆಯಲ್ಲಿ ಕೇವಲ 1 ರೂ. ನಂತಹ ಪಬ್ಲಿಸಿಟಿ ಯೋಜನೆಗಳನ್ನು ಸೇರಿಸಲಾಗಿರುತ್ತದೆ.

ಕಳೆದ ಸೆಪ್ಟೆಂಬರ್‌ವರೆಗೆ ಭಾರತದಲ್ಲಿ 524 ಟನ್ ಚಿನ್ನದ ವಹಿವಾಟು ನಡೆದಿದ್ದು, ಇದಕ್ಕೆ ಹೋಲಿಸಿದರೆ ಆನ್‌ಲೈನ್ ಬವಹಿವಾಟು ತುಂಬ ಕಡಿಮೆಯೇ ಇದೆ.

ಅಲ್ಲದೇ ಭಾರತದಲ್ಲಿ ಚಿನ್ನಕ್ಕಾಗಿ ಬೇಡಿಕೆ ಶೇ. 23 ರಷ್ಟು ಕಡಿಮೆಯಾಗಿದ್ದು, ಇದೇ ಕಾರಣಕ್ಕೆ ಆನ್‌ಲೈನ್ ಮಾರಾಟಕ್ಕೆ ಮೊರೆ ಹೋಗಿರುವ ವ್ಯಾಪಾರಸ್ಥರು ಹಲವು ಆಕರ್ಷಕ ಆಫರ್‌ಗಳನ್ನು ನೀಡುತ್ತಿದ್ದಾರೆ.

ಏನಿದು ವಿಚಿತ್ರ?: ಚಿನ್ನ, ಬೆಳ್ಳಿ ದರ ದಿಢೀರ ಕುಸಿತ!

‘ಕೇಳ್ದೆನೆ ಚಿನ್ನಾ, ಸಿಕ್ಕಾಪಟ್ಟೆ ಇಳ್ದಿದೆ ಚಿನ್ನ’: ಇಂದೇ ಕೊಂಡ್ರೆ ಚೆನ್ನ!

ಚಿನ್ನದ ದರದಲ್ಲಿ ಭಾರೀ ಏರಿಕೆ: ಫಲಿಸದ ಆಭರಣ ಪ್ರೀಯರ ಹಾರೈಕೆ!

  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?