
ನವದೆಹಲಿ[ಮಾ.18]: ಹಗರಣಕ್ಕೆ ಸಿಕ್ಕಿಕೊಂಡ ಬಳಿಕ ಆರ್‌ಬಿಐನಿಂದ ಸೇವಾ ನಿರ್ಬಂಧಕ್ಕೆ ಒಳಗಾಗಿದ್ದ ಖಾಸಗಿ ವಲಯದ ಯಸ್ ಬ್ಯಾಂಕ್, ಬುಧವಾರದಿಂದ ಗ್ರಾಹಕರಿಗೆ ಪೂರ್ಣ ಪ್ರಮಾಣದ ಸೇವೆ ನೀಡಲಿದೆ.
ಸಂಜೆ 6 ಗಂಟೆಯಿಂದ ಎಲ್ಲಾ ರೀತಿಯ ಸೇವೆಯನ್ನು ಪುನಃ ಆರಂಭಿಸಲಾಗುತ್ತಿದೆ. ಆದರೆ ಬುಧವಾರ ಸಂಜೆ 6 ಗಂಟೆ ಬ್ಯಾಂಕ್ ಮುಕ್ತಾಯದ ಸಮಯವಾಗಿರುವ ಕಾರಣ ಗುರುವಾರ ಬೆಳಗ್ಗೆಯಿಂದ ಗ್ರಾಹಕರಿಗೆ ಮೊದಲಿನಂತೆ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗಲಿವೆ.
ಬ್ಯಾಂಕ್‌ನ ಗ್ರಾಹಕರಿಗೆ ಕೆಲ ದಿನಗಳ ಹಿಂದೆ ಆರ್‌ಬಿಐ ಮಾಸಿಕ ಗರಿಷ್ಠ 50000 ರು. ಹಿಂಪಡೆತದ ಮಿತಿ ಹಾಕಿತ್ತು. ಆದರೆ ಬಳಿಕ ಬ್ಯಾಂಕ್ ಪುನಶ್ಚೇತನಕ್ಕೆ ಆರ್‌ಬಿಐ ರೂಪಿಸಿದ್ದ ಮಾನದಂಡಗಳ ಅನ್ವಯ ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳು ಮುಂದೆ ಬಂದಿರುವ ಹಿನ್ನೆಲೆಯಲ್ಲಿ, ಬ್ಯಾಂಕ್ ಮತ್ತೆ ಸೇವೆ ಆರಂಭಿಸಲು ನಿರ್ಧರಿಸಿದೆ.
ಯಸ್ ಬ್ಯಾಂಕ್ ಷೇರು ಚೇತರಿಕೆ;
ಇದೇ ವೇಳೆ ಸತತ ಮೂರನೇ ದಿನದ ವಹಿವಾಟಿನಲ್ಲೂ ಯಸ್ ಬ್ಯಾಂಕ್ ಷೇರುಗಳು ಏರುಗತಿ ದಾಖಲಿಸಿವೆ. ಮಂಗಳವಾರದ ವಹಿವಾಟಿನಲ್ಲಿ ಯಸ್ ಬ್ಯಾಂಕ್ ಷೇರು ಮೌಲ್ಯ ಶೇ.59ರಷ್ಟುಏರಿಕೆ ಆಗಿವೆ. ಹೀಗಾಗಿ ಯಸ್ ಬ್ಯಾಂಕ್ ಷೇರುಗಳ ಮೌಲ್ಯ ಪ್ರತಿ ಷೇರಿಗೆ 58.65 ರು. ಆಗಿದೆ. ಮಧ್ಯಂತರ ಅವಧಿಯಲ್ಲಿ ಯಸ್ ಬ್ಯಾಂಕ್ ಷೇರು ಶೇ.72.91ರಷ್ಟುಏರಿ ಪ್ರತಿ ಷೇರಿಗೆ 64.15 ರು. ಆಗಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.