ಪೆಟ್ರೋಲ್‌, ಡೀಸೆಲ್‌ನಲ್ಲಿ ಅರ್ಧದಷ್ಟು ತೆರಿಗೆ ಪಾಲು!

By Kannadaprabha NewsFirst Published Mar 17, 2020, 9:56 AM IST
Highlights

ಪೆಟ್ರೋಲ್‌, ಡೀಸೆಲ್‌ನಲ್ಲಿ ಅರ್ಧದಷ್ಟು ತೆರಿಗೆ ಪಾಲು!| ಪೆಟ್ರೋಲ್‌ಗೆ 38 ರು., ಡೀಸೆಲ್‌ಗೆ 28 ರು. ತೆರಿಗೆ

ನವದೆಹಲಿ[ಮಾ.17]: ಕೇಂದ್ರ ಸರ್ಕಾರ ಇತ್ತೀಚೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 3ರುನಷ್ಟುಏರಿಸುವುದರೊಂದಿಗೆ, ಈ ಎರಡು ತೈಲೋತ್ಪನ್ನಗಳ ಒಟ್ಟು ದರದಲ್ಲಿ ತೆರಿಗೆಯ ಪಾಲೇ ಶೇ.50ರಷ್ಟನ್ನು ತಲುಪಿದಂತಾಗಿದೆ.

ಉದಾಹರಣೆಗೆ ದೆಹಲಿಯಲ್ಲಿ ಪೆಟ್ರೋಲ್‌ ದರ ಲೀ.ಗೆ 69.87 ರು.ನಷ್ಟುಇದೆ. ಈ ಪೈಕಿ ಶೆ.54ರಷ್ಟುತೆರಿಗೆ, ಅಂದರೆ ಪ್ರತಿ ಲೀ.ಗೆ 37.83ರಷ್ಟುನಾನಾ ರೀತಿಯ ತೆರಿಗೆ ವಿಧಿಸಲಾಗುತ್ತಿದೆ. ಇನ್ನು ಪೆಟ್ರೋಲ್‌ನ ವಾಸ್ತವ ದರ, ಸಾಗಣೆ ಶುಲ್ಕ, ಡೀಲರ್‌ ಕಮೀಷನ್‌ ಸೇರಿ 32.04ರು.ನಷ್ಟುಆಗುತ್ತದೆ. ಅಂದರೆ ಒಟ್ಟು ದರದಲ್ಲಿ ತೆರಿಗೆ ಪಾಲೇ ಹೆಚ್ಚು.

ಇನ್ನು ಡೀಸೆಲ್‌ನಲ್ಲೂ ಹೆಚ್ಚು ಕಡಿಮೆ ಇದೇ ಕಥೆ ಇದೆ. ದೆಹಲಿಯಲ್ಲಿ ಡೀಸೆಲ್‌ ದರ 62.44 ರು.ನಷ್ಟಿದೆ. ಇದರಲ್ಲಿ ತೆರಿಗೆ ಪಾಲು 28.06 ಅಂದರೆ ಶೇ.46ರಷ್ಟಿದೆ. ಇನ್ನು ಡೀಸೆಲ್‌ನ ವಾಸ್ತವ ದರ, ಸಾಗಣೆ ಶುಲ್ಕ, ಡೀಲರ್‌ ಕಮೀಷನ್‌ ಸೇರಿ 34.52ರು.ನಷ್ಟು ಆಗುತ್ತದೆ.

click me!