ಭಾರತದ ಆರ್ಥಿಕತೆಯಲ್ಲಿ ಜಗತ್ತಿಗೆ ಆಶಾವಾದ, ಆತ್ಮವಿಶ್ವಾಸ ಕಾಣಿಸುತ್ತಿದೆ: ಪ್ರಧಾನಿ ಮೋದಿ

By Suvarna News  |  First Published Aug 25, 2023, 3:13 PM IST

ಬ್ರಿಕ್ಸ್ ಸಮ್ಮೇಳನದ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ, ಜೈಪುರದಲ್ಲಿ ನಡೆಯುತ್ತಿರುವ  ಜಿ20 ವ್ಯಾಪಾರ ಹಾಗೂ ಹೂಡಿಕೆ ಸಚಿವರ ಸಭೆಯನ್ನುದ್ದೇಶಿಸಿ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಇದರಲ್ಲಿ ಭಾರತದ ಆರ್ಥಿಕತೆ ಹೇಗೆ ಬೆಳವಣಿಗೆ ಹೊಂದಿದೆ ಎಂಬುದನ್ನು ವಿವರಿಸಿರುವ ಜೊತೆಗೆ ಭವಿಷ್ಯದ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. 
 


ಜೈಪುರ (ಆ.25): ಭಾರತವನ್ನು ಮುಕ್ತತೆ, ಅವಕಾಶಗಳು ಹಾಗೂ ಆಯ್ಕೆಗಳ ಸಂಯೋಜನೆಯಾಗಿ ನೋಡಲಾಗುತ್ತಿದೆ. ಇದೇ ಕಾರಣಕ್ಕೆ ಭಾರತದ ಆರ್ಥಿಕತೆಯಲ್ಲಿ ಜಗತ್ತು ಆಶಾವಾದ ಹಾಗೂ ಆತ್ಮವಿಶ್ವಾಸವನ್ನು ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗುರುವಾರ ಜೈಪುರದಲ್ಲಿ ನಡೆದ ಜಿ20 ವ್ಯಾಪಾರ ಹಾಗೂ ಹೂಡಿಕೆ ಸಚಿವರ ಸಭೆಯಲ್ಲಿ ವಿಡಿಯೋ ಸಂದೇಶವನ್ನು ನೀಡಿದ ಪ್ರಧಾನಿ, ಕಳೆದ 9 ವರ್ಷಗಳಲ್ಲಿ ಭಾರತ ಜಗತ್ತಿನ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಮೂಡಿಬಂದಿದೆ. ಅಲ್ಲದೆ, ಇದು ಭಾರತದ ಸ್ಪರ್ಧಾತ್ಮಕತೆ ಹಾಗೂ ಪ್ರಾಮಾಣಿಕತೆಯನ್ನು ಹೆಚ್ಚಿಸಿದೆ ಕೂಡ ಎಂದು ಅವರು ಹೇಳಿದ್ದಾರೆ. ಡಿಜಿಟಲೀಕರಣವನ್ನು ಭಾರತ ವಿಸ್ತರಿಸಿದೆ ಹಾಗೂ ಆವಿಷ್ಕಾರವನ್ನು ಉತ್ತೇಜಿಸಿದೆ. ಅಲ್ಲದೆ, ಹೂಡಿಕೆ ವಿಚಾರದಲ್ಲಿ ಭ್ರಷ್ಟಾಚಾರದಿಂದ (ರೇಡ್ ಟೇಪ್) ಮುಕ್ತವಾಗಿದ್ದು, ರತ್ನಗಂಬಳಿ (ರೆಡ್ ಕಾರ್ಪೆಟ್) ಹಾಸುವ ತನಕ ಬೆಳವಣಿಗೆ ಹೊಂದಿದೆ. ಹಾಗೆಯೇ ಮುಕ್ತವಾಗಿ ಎಫ್ ಡಿಐ ಹರಿವಿಗೆ ಉತ್ತೇಜನ ನೀಡಿದೆ ಎಂದು ಮೋದಿ ಹೇಳಿದ್ದಾರೆ. 

ಇವೆಲ್ಲಕ್ಕಿಂತ ಹೆಚ್ಚಾಗಿ ನಾವು ನೀತಿಗಳಲ್ಲಿ ಸ್ಥಿರತೆ ತಂದಿದ್ದೇವೆ. ಅಲ್ಲದೆ, ಮುಂದಿನ ಕೆಲವು ವರ್ಷಗಳಲ್ಲಿ ಭಾರತವನ್ನು ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ' ಎಂದು ಅವರು ತಿಳಿಸಿದ್ದಾರೆ.ಇನ್ನು ಜಾಗತಿಕ ಅನಿಶ್ಚತೆಗಳು ವಿಶ್ವದ ಆರ್ಥಿಕತೆಯನ್ನು ಅಲ್ಲಾಡಿಸಿವೆ. ಹೀಗಿರುವಾಗ ಜಿ20 ಸದಸ್ಯರಾಗಿ ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಹೂಡಿಕೆಗಳಲ್ಲಿ ಆತ್ಮವಿಶ್ವಾಸ ಮರುನಿರ್ಮಾಣ ಮಾಡುವುದು ರಾಷ್ಟ್ರಗಳ ಜವಾಬ್ದಾರಿಯಾಗಿದೆ ಎಂದು ಮೋದಿ ಹೇಳಿದ್ದಾರೆ. ಯಾವುದೇ ಆಘಾತ ಎದುರಾಗದರೂ ಅದನ್ನು ಸಹಿಸಿಕೊಂಡುಮತ್ತೆ ಪುಟಿದೇಳಬಲ್ಲ ಹಾಗೂ ಎಲ್ಲರನ್ನೊಳಗೊಂಡ ಜಾಗತಿಕ ಮೌಲ್ಯ ಸರಪಳಿಗಳನ್ನು ನಾವು ನಿರ್ಮಿಸಬೇಕಾದ ಅಗತ್ಯವಿದೆ. ಇದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಆಘಾತಗಳನ್ನು ಅದು ತಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮೌಲ್ಯ ಸರಪಳಿಗಳನ್ನು ನಿರ್ಮಿಸಬೇಕು ಎಂಬ ಭಾರತದ ಪ್ರಸ್ತಾವನೆ ಮುಖ್ಯವಾಗುತ್ತದೆ' ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಈ ಮಾದರಿ ದುರ್ಬಲತೆಗಳನ್ನು ಗುರುತಿಸಲು, ಅಪಾಯಗಳನ್ನು ತಗ್ಗಿಸಲು ಹಾಗೂ ಸ್ಥಿರತೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಮೋದಿ ಹೇಳಿದ್ದಾರೆ.

Tap to resize

Latest Videos

ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ: ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ

ಇ-ಕಾಮರ್ಸ್ ಬೆಳವಣಿಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಹಾಗೂ ಸಣ್ಣ ವ್ಯಾಪಾರಿಗಳ ನಡುವೆ ಸಮನವಾದ ಸ್ಪರ್ಧೆ ಏರ್ಪಡುವಂತೆ ಸಮಗ್ರವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಹಾಗೆಯೇ ನ್ಯಾಯಯುತ ಬೆಲೆ ಅನ್ವೇಷಣೆ ಹಾಗೂ ಕುಂದುಕೊರತೆ ನಿರ್ವಹಣೆ ಪ್ರಕ್ರಿಯೆಯಲ್ಲಿ ಗ್ರಾಹಕರು ಎದುರಿಸುವ ಸಮಸ್ಯೆಗಳನ್ನು ಕೂಡ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಎಂಎಸ್ ಎಂಇಗಳಿಗೆ ವಿಶೇಷ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ. ಏಕೆಂದರೆ ಇವು ಒಟ್ಟು ಉದ್ಯೋಗದ ಶೇ.60-70ರಷ್ಟನ್ನು ಹೊಂದಿವೆ. ಹಾಗೆಯೇ ಜಾಗತಿಕ ಜಿಡಿಪಿಗೆ ಶೇ50ರಷ್ಟು ಕೊಡುಗೆ ನೀಡುತ್ತಿವೆ ಎಂಬ ಮಾಹಿತಿಯನ್ನು ಕೂಡ ಪ್ರಧಾನಿ ಈ ಸಂದರ್ಭದಲ್ಲಿ ನೀಡಿದರು. 

'ಎಂಎಸ್ ಎಂಇಗಳಿಗೆ ನಮ್ಮ ನಿರಂತರ ಬೆಂಬಲದ ಅಗತ್ಯವಿದೆ. ನಮಗೆ ಎಂಎಸ್ ಎಂಇ ಅಂದ್ರೆ ಕಿರು, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಗರಿಷ್ಠ ಬೆಂಬಲ' ಎಂದು ಮೋದಿ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಈ ಜೈಪುರ ಕಾರ್ಯಕ್ರಮ ಎಂಎಸ್ ಎಂಇಗಳಿಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಲಿದೆ. ಹಾಗೆಯೇ ಮಾರುಕಟ್ಟೆಗೆ ಸಮರ್ಪಕವಾದ ಪ್ರವೇಶ ಸಿಗದಿರೋದು ಹಾಗೂ ಉದ್ಯಮ ಸಂಬಂಧಿ ಸಮಸ್ಯೆಗಳನ್ನು ಇದು ನಿವಾರಿಸಲಿದೆ ಎಂದು ಅವರು ಹೇಳಿದರು. 

ಗಡಿಯಲ್ಲಿ ಸೇನೆ ಹಿಂಪಡೆಯಲು ಚೀನಾ ಭಾರತ ಎರಡು ರಾಷ್ಟ್ರಗಳ ಒಪ್ಪಿಗೆ

ಈ ವಾರದಲ್ಲೇ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತ ಜಗತ್ತಿನ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿದ್ದು, ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಮೂಡಿಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.


 

click me!