World Emoji Day: ಎಮೋಜಿ ರೂಪದಲ್ಲಿ ಬಂದ ಸೀರಿಯಲ್​​ ತಾರೆಯರು! ವಿಶೇಷ ವಿಡಿಯೋ ರಿಲೀಸ್​...

Published : Jul 17, 2025, 05:14 PM ISTUpdated : Jul 17, 2025, 05:15 PM IST
World Emoji Day

ಸಾರಾಂಶ

ಹತ್ತಾರು ಶಬ್ದಗಳಲ್ಲಿ ಹೇಳುವ ವಿಷಯಗಳನ್ನು ಒಂದೇ ಒಂದು ಎಮೋಜಿ ಹೇಳುವುದರಿಂದಲೇ ಇಂದು ಎಮೋಜಿ ಇಷ್ಟು ಫೇಮಸ್​ ಆಗಿದೆ. ಇದರ ಇತಿಹಾಸವೇನು? ಸೀರಿಯಲ್ ತಾರೆಯರು ಎಮೋಜಿ ಮೂಲಕ ಹೇಗೆ ಬಂದರು? ಇಲ್ಲಿದೆ ವಿವರ... 

ಇಂದು ಅರ್ಥಾತ್​ ಜುಲೈ 17 ವಿಶ್ವ ಎಮೋಜಿ ದಿನ. ಹತ್ತಾರು ಶಬ್ದಗಳಲ್ಲಿ ಹೇಳುವ ವಿಷಯಗಳನ್ನು ಒಂದೇ ಒಂದು ಎಮೋಜಿ ಹೇಳುವುದರಿಂದಲೇ ಇದು ಇಂದು ಅಷ್ಟು ಫೇಮಸ್​ ಆಗಿದೆ. ಸ್ಮಾರ್ಟ್​ಫೋನ್​ನ ಈ ಯುಗದಲ್ಲಿ ಎಮೋಜಿಗಳದ್ದೇ ಕಾರುಬಾರು. ಇಂಥ ಸಂದರ್ಭದಲ್ಲಿ ಕಿರುತೆರೆ ಕಲಾವಿದರು ಎಮೋಜಿಯಲ್ಲಿ ಹೇಗೆ ಕಾಣಿಸುತ್ತಿದ್ದಾರೆ ಎನ್ನುವ ಬಗ್ಗೆ ಜೀ ಕನ್ನಡ ವಾಹಿನಿ ವಿಡಿಯೋ ಒಂದನ್ನು ಶೇರ್​ ಮಾಡಿದೆ. ಇದರಲ್ಲಿ ಜೀ ವಾಹಿನಿಯಲ್ಲಿ ಬರುವ ಕಲಾವಿದರನ್ನು ಎಮೋಜಿ ರೂಪದಲ್ಲಿ ನೋಡಬಹುದಾಗಿದೆ. ವಿವಿಧ ಸೀರಿಯಲ್​ಗಳ ನಟನಟಿಯರನ್ನು ಇದರಲ್ಲಿ ನೋಡಬಹುದಾಗಿದೆ.

ಇನ್ನು ಎಮೋಜಿ ದಿನದ ಇತಿಹಾಸದ ಬಗ್ಗೆ ಹೇಳುವುದಾದರೆ, ಇದು ಆರಂಭವಾಗಿದ್ದು, 1980ರಲ್ಲಿ. ಇದಕ್ಕಿಂತಲೂ ಮುಂಚೆ ಎಮೋಟಿಕಾನ್‌ಗಳು ಪ್ರಾರಂಭವಾದವು. ಜಪಾನಿನ ವಿನ್ಯಾಸಕರು ಈ ಎಮೋಟಿಕಾನ್‌ಗಳನ್ನು ರಚಿಸಿದರು. ಎಮೋಜಿ ಎಂದರೇ ‘ಚಿತ್ರ ಪದ’. ಎಮೋಜಿಗಳನ್ನು 1999 ರಲ್ಲಿ ಜಪಾನಿನ ಟೆಲಿಕಾಂ ಕಂಪನಿ ಎನ್​ಟಿಟಿ ಡೊಕೊಮೊದಲ್ಲಿ ಕೆಲಸ ಮಾಡುವಾಗ ಶಿಗೆಟಕಾ ಕುರಿಟಾ ಎಂಬುವವರು ಅಭಿವೃದ್ಧಿಪಡಿಸಿದರು. ಸ್ಮಾರ್ಟ್ ಫೋನ್​ಗಳು ದೈನಂದಿನ ಜೀವನದ ಒಂದು ಭಾಗವಾದಾಗ 2010ರ ಆಸುಪಾಸಿನಲ್ಲಿ ಎಮೋಜಿಗಳು ಜನಪ್ರಿಯವಾದವು. ಆದರೆ, ಆಗ ಕೀಬೋರ್ಡ್‌ನಿಂದಲೇ ಈ ಎಮೋಟಿಕಾನ್‌ಗಳನ್ನು ರಚಿಸಲಾಗುತ್ತಿತ್ತು. ಕೋಲನ್​, ಸೆಮಿಕೋಲನ್​ ಇತ್ಯಾದಿಗಳನ್ನು ಬಳಸಿ ಇಮೋಜಿ ಮಾಡಲಾಗುತ್ತಿತ್ತು. ಕೊನೆಗೆ, 2011ರಲ್ಲಿ ಆಪಲ್ iOS ನಲ್ಲಿ ತನ್ನ ಕೀಬೋರ್ಟ್​ನಲ್ಲಿ ಎಮೋಜಿಯನ್ನು ಸೇರಿಸಿತು. ಬಳಿಕ ಅನೇಕ ದೇಶಗಳಲ್ಲಿ ಎಮೋಜಿಗಳನ್ನು ಬಳಸಲು ಆರಂಭಿಸಲಾಯಿತು. ಈಗ ಪ್ರತಿಯೊಂದು ಫೋನ್ ಎಮೋಜಿ ಕೀಬೋರ್ಡ್‌ನೊಂದಿಗೆ ಬರುತ್ತದೆ.

ಆದರೆ ಇದಕ್ಕೂ ಮೊದಲು, ಫೇಸ್ಬುಕ್ ಮತ್ತು ಟ್ವಿಟರ್​ನಂತಹ ಜಾಗತಿಕ ಬ್ರ್ಯಾಂಡ್​ಗಳು ತಮ್ಮದೇ ಆದ ಎಮೋಜಿಗಳ ಆವೃತ್ತಿಗಳನ್ನು ರಚಿಸಲು ಪ್ರಾರಂಭಿಸಿದವು. ವಿಶ್ವ ಎಮೋಜಿ ದಿನವನ್ನು ಜೆರೆಮಿ ಬರ್ಜ್ ರಚಿಸಿದ ಕಾರಣ ಅವರನ್ನು ಎಮೋಜಿ ಪೀಡಿಯಾದ ಸ್ಥಾಪಕ ಎಂದೂ ಕರೆಯುತ್ತಾರೆ. ಇತ್ತೀಚಿಗೆ ಟ್ರಾನ್ಸ್ಜೆಂಡರ್ ಫ್ಲ್ಯಾಗ್, ಬಬಲ್ ಟೀ, ಮತ್ತು ಬಾಟಲ್-ಫೀಡಿಂಗ್ ಸೇರಿದಂತೆ 110 ಕ್ಕೂ ಹೆಚ್ಚು ಹೊಸ ಎಮೋಜಿಗಳನ್ನು ಎಮೋಜಿ 13.0 ರಲ್ಲಿ ಯೂನಿಕೋಡ್ ಕನ್ಸೋರ್ಟಿಯಂ ಸೇರಿಸಿದೆ. ಅಂದಹಾಗೆ, ಅತಿ ಹೆಚ್ಚು ಬಳಕೆಯಾಗುವ ಎಮೋಜಿ ಎಮೋಜಿಪೀಡಿಯಾ ಡಾಟ್ ಆರ್ಗ್ ಪ್ರಕಾರ, ಹೆಚ್ಚು ಬಳಕೆಯಾಗುವ ಎಮೋಜಿ ಎಂದರೆ ಹಾರ್ಟ್​ದು.

ಇದರ ನಂತರ ಹಸಿರು ಬಾಕ್ಸ್‌ನಲ್ಲಿ ಬಿಳಿ ಚೆಕ್ ಮಾರ್ಕ್ ಇರುವ ಎಮೋಜಿ ಬರುತ್ತದೆ. ನಂತರದ ಸ್ಥಾನ ಸ್ಪಾರ್ಕಲ್ ಎಮೋಜಿಗೆ ಮತ್ತು ಅದರ ನಂತರ ಫೈರ್ ಎಮೋಜಿಗೆ ಇದೆ. ಎಲ್ಲರ ನೆಚ್ಚಿನ ಜೋರಾಗಿ ಅಳುವ ಮುಖದ ಎಮೋಜಿ ಮತ್ತು ಸಂತೋಷದ ಕಣ್ಣೀರಿನಿಂದ ನಗುವ ಎಮೋಜಿ ಹತ್ತಿರದಲ್ಲೇ ಇವೆ. ಅಂದಹಾಗೆ ಮೊದಲೇ ಹೇಳಿದ ಹಾಗೆ ಶಿಗೇತಾಕ ಕುರಿಟಾ ಇದರ ಪಿತಾಮಹ. ಸದ್ಯ ಕಾಲಕಾಲಕ್ಕೆ ಹೊಸ ಹೊಸ ಎಮೋಜಿಗಳು ಅಭಿವೃದ್ಧಿ ಹೊಂದುತ್ತಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!