5 ವರ್ಷ ದಾಟಿದ ಮಕ್ಕಳ Aadhaar Card ಅಪ್​ಡೇಟ್​ ಮಾಡಿಲ್ವಾ? ಫ್ರೀ ಆಗಬೇಕಿದ್ರೆ ಕೂಡ್ಲೇ ಮಾಡಿಸಿ: ಮಾಹಿತಿ ಇಲ್ಲಿದೆ

Published : Jul 17, 2025, 01:26 PM ISTUpdated : Jul 17, 2025, 02:12 PM IST
Adhar Card Update

ಸಾರಾಂಶ

5 ವರ್ಷ ದಾಟಿದ ಮಕ್ಕಳಿಗೆ ಆಧಾರ್​ ಕಾರ್ಡ್​ ಅಪ್​ಡೇಟ್​ ಮಾಡುವುದು ಅತ್ಯಗತ್ಯವಾಗಿದೆ. ಬಯೋಮೆಟ್ರಿಕ್​ ವ್ಯವಸ್ಥೆ ಮೂಲಕ ಅಪ್​ಡೇಟ್​ ಮಾಡಲಾಗುತ್ತದೆ. ಉಚಿತವಾಗಿ ಬೇಕಿದ್ದರೆ ಕೂಡಲೇ ಮಾಡಿಸಬೇಕು. ಇದರ ವಿವರ ಇಲ್ಲಿದೆ... 

ಇದೀಗ ಸಾಮಾನ್ಯವಾಗಿ ಎಲ್ಲರ ಭಾರತೀಯರ ಬಳಿಯೂ ಆಧಾರ್​ ಕಾರ್ಡ್​ ಇದ್ದೇ ಇದೆ. ಆಧಾರ್​ ಕಾರ್ಡ್​ ಇಲ್ಲದಿದ್ದರೆ ಹಲವಾರು ಸೌಲಭ್ಯಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಇದನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿರುವ ಆಧಾರ್​ ಕಾರ್ಡ್​ ಇದ್ದರೆ ಈಗ ಹಲವಾರು ಕೆಲಸಗಳು ಸುಲಭ ಜೊತೆಗೆ ಸರ್ಕಾರಿ ಸೌಲಭ್ಯಗಳಿಗೆ ಇವು ಕಡ್ಡಾಯವಾಗಿ ಬೇಕು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅದೇ ರೀತಿ ಚಿಕ್ಕಮಕ್ಕಳಿಗೂ ಇದೀಗ ಆಧಾರ್​ ಕಾರ್ಡ್​ಗಳು ಇವೆ. ಆದರೆ, ಒಮ್ಮೆ ಆಧಾರ್​ ಕಾರ್ಡ್​ ಮಾಡಿಸಿ ಸುಮ್ಮನೇ ಇಟ್ಟುಬಿಟ್ಟಿದ್ದೀರಾ? ನಿಮ್ಮ ಮಕ್ಕಳಿಗೆ 5 ವರ್ಷ ದಾಟಿದ್ಯಾ? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ನೀವು ಓದಲೇ ಬೇಕು. ಏಕೆಂದರೆ, ಶಾಲಾ ದಾಖಲಾತಿ, ವಿದ್ಯಾರ್ಥಿವೇತನ, ನಗದು ವರ್ಗಾವಣೆ ಯೋಜನೆಗಳಂತಹ ಪ್ರಯೋಜನಗಳನ್ನು ಪಡೆಯಲು ಆಧಾರ್ ಬಯೋಮೆಟ್ರಿಕ್ ವಿವರಗಳು ಅಪ್‌ಡೇಟ್ ಆಗಿರುವುದು ಅವಶ್ಯಕವಾಗಿದೆ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್‌ ಕಾರ್ಡ್​ ಮಾಡಿಸುವಾಗ ಅವರ ಬಯೋಮೆಟ್ರಿಕ್ ವಿವರಗಳನ್ನು ತೆಗೆದುಕೊಂಡಿರುವುದಿಲ್ಲ. ಏಕೆಂದರೆ ಅವರ ಕೈರೇಖೆಗಳು ಅಷ್ಟಾಗಿ ಸ್ಪಷ್ಟವಾಗಿರುವುದಿಲ್ಲ. ಆದ್ದರಿಂದ ಒಮ್ಮೆ ಮಗುವಿಗೆ 5 ವರ್ಷ ದಾಟಿದರೆ ಆಧಾರ್‌ ಕಾರ್ಡ್​ ಅಪ್​ಡೇಟ್​ ಮಾಡಬೇಕಾಗುತ್ತದೆ. ಇದರ ಅರ್ಥ ಅವರ ಕಣ್ಣಿನ ಗುರುತು ಮತ್ತು ಬೆರಳಚ್ಚುಗಳನ್ನು ನೀಡುವ ಬಯೋಮೆಟ್ರಿಕ್‌ ಮೂಲಕ ಅಪ್​ಡೇಟ್​ ಮಾಡಬೇಕು. ಬಳಿಕ 15 ವರ್ಷವಾದ ಮೇಲೆ ಇನ್ನೊಮ್ಮೆ ಅಪ್​ಡೇಟ್​ ಮಾಡಿಸಬೇಕು. ಇಲ್ಲದಿದ್ದರೆ ಮುಂದೆ ಕೆಲವೊಂದು ಕೆಲಸಗಳಿಗೆ ತೊಂದರೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಗುವಿಗೆ 5 ರಿಂದ 7 ವರ್ಷವಾಗಿದ್ದರೆ ಉಚಿತವಾಗಿ ಕೂಡಲೇ ಇದನ್ನು ಸಮೀಪದ ಕೇಂದ್ರಗಳಿಗೆ ಹೋಗಿ ಅಪ್​ಡೇಟ್​ ಮಾಡಿಸಿಕೊಳ್ಳಬಹುದು. ಇದು ಬಯೋಮೆಟ್ರಿಕ್​ ಆಗಿರುವ ಕಾರಣ, ಮಗುವಿನ ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್​ ಮಾಡುವುದರಿಂದ ಆಧಾರ್​ ಕೇಂದ್ರಗಳಲ್ಲಿಯೇ ಹೋಗಿ ಮಾಡಿಸಬೇಕು.

ಒಂದು ವೇಳೆ ಮಗುವಿಗೆ ಏಳು ವರ್ಷ ದಾಟಿದರೆ, ಇದುವರೆಗೂ ನೀವು ಆಧಾರ್​ ಅಪ್​ಡೇಟ್​ ಮಾಡದೇ ಹೋದರೆ 100 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. 100 ರೂಪಾಯಿ ಹಣ ಕೊಟ್ಟು ನೀವು ಕೂಡಲೇ ಅಪ್​ಡೇಟ್​ ಮಾಡಿಸಬೇಕು. ಇದಾಗಲೇ 7 ವರ್ಷ ಕಳೆದರೂ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಮಾಡದ ಮಕ್ಕಳ ಆಧಾರ್ ಕಾರ್ಡ್‌ಗಳನ್ನು ಗುರುತಿಸಿ, ಅವರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಯುಐಡಿಎಐ ಸಂದೇಶಗಳನ್ನು ಕಳುಹಿಸುತ್ತಿದೆ. ಒಂದು ವೇಳೆ ಮೆಸೇಜ್​ ಬರದೇ ಹೋದರೂ ನೀವು ಕೂಡಲೇ ಹೀಗೆ ಮಾಡಿಸುವುದು ಒಳಿತು.

ಇನ್ನು ಐದು ವರ್ಷ ಒಳಗಿನ ಮಕ್ಕಳಿಗೆ ಕೊಟ್ಟಿರುವುದು ಬಾಲ್​ ಅಥವಾ ನೀಲಿ ಆಧಾರ್​ ಕಾರ್ಡ್​. ಮಗುವಿಗೆ ಐದು ವರ್ಷ ಭರ್ತಿಯಾದ ಬಳಿಕ ಈ ಬಾಲ್​ ಅಥವಾ ನೀಲಿ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ. ಆಗ ನೀವು ಅದನ್ನು ಅಪ್​ಡೇಟ್​ ಮಾಡಬೇಕಾಗುತ್ತದೆ. ಆಗ ಮಗುವಿನ ಬಯೋಮೆಟ್ರಿಕ್ಸ್ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಐದು ವರ್ಷದ ನಂತರ ಆಧಾರ್ ನವೀಕರಿಸಬೇಕಾಗುತ್ತದೆ. ಆಗ ಮಕ್ಕಳ ಹೆಬ್ಬೆಟ್ಟಿನ ಗುರುತು ಹಾಗೂ ಕಣ್ಣಿನ ರೆಪ್ಪೆ ಗುರುತನ್ನು ಪಡೆಯಲಾಗುತ್ತದೆ. ಆಗ ಸಮೀಪದ ಆಧಾರ್​ ಕೇಂದ್ರಕ್ಕೆ ಹೋಗಬಹುದು. ಸಾಮಾನ್ಯವಾಗಿ ಮಕ್ಕಳಿಗೆ 15 ವರ್ಷವಾಗ್ತಿದ್ದಂತೆ ಮತ್ತೆ ಆಧಾರ್ ಅಪ್​ಡೇಟ್​ಗೂ ಹೇಳಲಾಗುತ್ತದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ