ಕೊರೋನಾ ಹೋರಾಟ: ಭಾರತಕ್ಕೆ ವಿಶ್ವಬ್ಯಾಂಕ್‌ 7600 ಕೋಟಿ ರೂ. ನೆರವು!

By Kannadaprabha NewsFirst Published May 16, 2020, 11:48 AM IST
Highlights

ಕೊರೋನಾ ವಿರುದ್ಧದ ಭಾರತದ ಹೋರಾಟ| ಭಾರತಕ್ಕೆ 7500 ಕೋಟಿ ರು. ನೀಡಲು ವಿಶ್ವ ಬ್ಯಾಂಕ್‌ ಅನುಮೋದನೆ| ಕಳೆದ ತಿಂಗಳು ಆರೋಗ್ಯ ವಲಯಕ್ಕೆ ವಿಶ್ವಬ್ಯಾಂಕ್‌ 7600 ಕೋಟಿ ರು. ಸಹಾಯ ನೀಡಿತ್ತು

ನವದೆಹಲಿ(ಮೇ.16): ಕೊರೋನಾ ವಿರುದ್ಧದ ಹೋರಾಟಕ್ಕೆಂದು ಭಾರತಕ್ಕೆ 7500 ಕೋಟಿ ರು. ನೀಡಲು ವಿಶ್ವ ಬ್ಯಾಂಕ್‌ ಅನುಮೋದನೆ ನೀಡಿದೆ. ಕೊರೋನಾದಿಂದ ಬಡವರು, ಜನಸಾಮಾನ್ಯರು ಬಾಧಿತರಾಗಿದ್ದು, ಅವರ ನೆರವಿಗೆ ಸರ್ಕಾರ ನೆರವು ನೀಡುತ್ತಿದೆ. ಇದಕ್ಕೆ ಸಹಾಯ ಮಾಡಲೆಂದು ವಿಶ್ವಬ್ಯಾಂಕ್‌ ನೆರವು ನೀಡಿದೆ.

ಕಳೆದ ತಿಂಗಳು ಆರೋಗ್ಯ ವಲಯಕ್ಕೆ ವಿಶ್ವಬ್ಯಾಂಕ್‌ 7600 ಕೋಟಿ ರು. ಸಹಾಯ ನೀಡಿತ್ತು. ಇದರೊಂದಿಗೆ ಭಾರತಕ್ಕೆ ಬ್ಯಾಂಕ್‌ ನೀಡಿದ ನೆರವಿನ ಪ್ರಮಾಣ ಈಗ 15 ಸಾವಿರ ಕೋಟಿ ರು.ಗೆ ಏರಿದಂತಾಗಿದೆ. ‘ಕಂಡು ಕೇಳರಿಯದ ಲಾಕ್‌ಡೌನ್‌ ಅನ್ನು ಭಾರತದಲ್ಲಿ ಹೇರಲಾಗಿತ್ತು. ಕೊರೋನಾ ತಡೆಗೆ ಇದು ಅತ್ಯಗತ್ಯವಾಗಿತ್ತು.

ಆದರೆ ಕೊರೋನಾದಿಂದ ಆರ್ಥಿಕತೆ ಹಾಗೂ ಉದ್ಯೋಗ ವಲಯಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಭಾರತದ ನೆರವಿಗೆ ವಿಶ್ವಬ್ಯಾಂಕ್‌ ಧಾವಿಸಿದೆ’ ಎಂಧು ಬ್ಯಾಂಕ್‌ನ ಭಾರತ ವಿಭಾಗದ ನಿರ್ದೇಶಕ ಜುನೈದ್‌ ಅಹ್ಮದ್‌ ಹೇಳಿದ್ದಾರೆ.

click me!