ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಹಲವು ಕಂಪನಿಗಳು ಉದ್ಯೋಗ ಕಡಿತ, ವೇತನ ಕಡಿತ ಮಾಡುತ್ತಿದೆ. ಇದೀಗ ಉಬರ್ ಟ್ಯಾಕ್ಸಿ ಕಂಪನಿ ಕೂಡ ಉದ್ಯೋಗ ಕಡಿತ ಮಾಡಿದೆ. ಆದರೆ ಉಬರ್ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ
ಕ್ಯಾಲಿಫೋರ್ನಿಯಾ(ಮೇ.14): ಕೊರೋನಾ ವೈರಸ್ ಕಾರಣ ಬಹುತೇಕ ಎಲ್ಲಾ ಕಂಪನಿಗಳು ನಷ್ಟದಲ್ಲಿದೆ. ಹೀಗಾಗಿ ವೇತನ ಕಡಿತ, ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಸುದೀರ್ಘ ವರ್ಷಗಳ ಕಾಲ ಕಂಪನಿಗೆ ಸೇವೆ ಸಲ್ಲಿಸಿದವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಇದೀಗ ಉಬರ್ ಕೂಡ ಇದೇ ಆರೋಪಕ್ಕೆ ಗುರಿಯಾಗಿದೆ. ಟ್ಯಾಕ್ಸಿ ಸೇವೆ ನೀಡುತ್ತಿರುವ ಉಬರ್ ಕಂಪನಿ, 3,700 ಮಂದಿಯ ಉದ್ಯೋಗ ಕಡಿತ ಮಾಡಿದೆ.
ಆತ್ಮನಿರ್ಭರ ಭಾರತ, ಚೀನಾಗೆ ಬೀಳಲಿದೆ ಗುನ್ನಾ..!
ಉಬರ್ ಗ್ರಾಹಕರ ವಿಭಾಗದ ಮುಖ್ಯಸ್ಥ ರಫೀನ್ ಚಾವ್ಲು ವಿಡಿಯೋ ಕಾಲ್ ಮೂಲಕ ಉದ್ಯೋಗಿಗಳಿಕೆ ಕರೆ ಮಾಡಿ ಇವತ್ತು ನಿಮ್ಮ ಕೊನೆಯ ದಿನ. ನಿಮ್ಮ ಸೇವೆ ಸಾಕು ಎಂದು ಉದ್ಯೋಗದಿಂದ ತೆಗೆದಹಾಕಿದ್ದಾರೆ. ಈ ರೀತಿ 3700 ಮಂದಿಯನ್ನು ವಿಡಿಯೋ ಕಾಲ್ ಮೂಲಕ ಉದ್ಯೋಗದಿಂದ ತೆಗೆದುಹಾಕಿದೆ. ಉದ್ಯೋಗ ಕಡಿತ ಬಹುತೇಕ ಎಲ್ಲಾ ಕಂಪನಿಗಳಲ್ಲಿ ಈಗ ಸಾಮಾನ್ಯವಾಗಿದೆ. ಆದರೆ ಉಬರ್ ಕಂಪನಿ ನಡೆಸಿಕೊಂಡ ರೀತಿಗೆ ಆಕ್ರೋಶ ವ್ಯಕ್ತವಾಗಿದೆ.
ಉದ್ಯೋಗ ಕಳೆದುಕೊಳ್ಳುವ ಭಯವೇ? ಈಗಿಂದಲೇ ತಯಾರಿ ಮಾಡಿಕೊಳ್ಳಿ
ಗ್ರಾಹಕರ ಸೇವೆ ವಿಭಾಗ ಹಾಗೂ ಇತರ ಕೆಲ ವಿಭಾಗ ಸೇರಿದಂತೆ 3,700 ನೌಕರರನ್ನು ಉಬರ್ ಕಂಪನಿ ತೆಗೆದುಹಾಕಿದೆ. ಕಂಪನಿ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೊಟೀಸ್ ನೀಡಿಲ್ಲ, ಮಾಹಿತಿ ರವಾನಿಸಿಲ್ಲ. ಇಷ್ಟೇ ಅಲ್ಲ ಈಗಾಗಲೇ ವೇತನ ಕಡಿತ ಕೂಡ ಮಾಡಲಾಗಿದೆ. ಆದರೆ ದಿಢೀರ್ ಆಗಿ ವಿಡಿಯೋ ಕಾಲ್ ಮೂಲಕ ತೆಗೆದು ಹಾಕಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.