Business : ಸಾಲ ಕ್ಷೇತ್ರದಲ್ಲೂ ಹೆಚ್ಚಾಗ್ತಿದೆ ಮಹಿಳೆ ಪಾಲು…. ಈ ಕ್ಷೇತ್ರದಲ್ಲಿ ಮೇಲುಗೈ

By Suvarna News  |  First Published Mar 8, 2024, 2:50 PM IST

ಹಿಂದೆ ಸಾಲ ಪಡೆಯಲು ಹೆದರುತ್ತಿದ್ದ ಮಹಿಳೆಗೆ ಈಗ ಧೈರ್ಯ ಬಂದಂತಿದೆ. ಸಾಲದ ವಿಷ್ಯದಲ್ಲಿ ಮಹಿಳೆಗೆ ಅನೇಕ ಸೌಲಭ್ಯ ಸಿಗ್ತಿದೆ. ಮಹಿಳೆ ಸಾಲದ ಬಗ್ಗೆ ಬಂದ ವರದಿಯೊಂದು ಅನೇಕ ಕುತೂಹಲ ವಿಷ್ಯವನ್ನು ಬಿಚ್ಚಿಟ್ಟಿದೆ. 
 


ಮಹಿಳೆ ಎಲ್ಲ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾಳೆ ಎಂಬುದು ನಮಗೆಲ್ಲ ಗೊತ್ತು. ಸಾಲದ ವಿಷ್ಯದಲ್ಲೂ ಮಹಿಳೆ ಪಾಲು ಹೆಚ್ಚಾಗಿದೆ. ಹಿಂದೆ ಹಣಕಾಸು, ಹೂಡಿಕೆ, ಉಳಿತಾಯದ ವಿಷ್ಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು. ಉಳಿತಾಯ ಎಂದಾಗ ಮಹಿಳೆ ಬಂಗಾರದ ಬಗ್ಗೆ ಮಾತ್ರ ಆಲೋಚನೆ ಮಾಡುತ್ತಿದ್ದ ಕಾಲ ಈಗಿಲ್ಲ. ಷೇರು ಮಾರುಕಟ್ಟೆ, ಮ್ಯುಚುವಲ್ ಫಂಡ್ ಸೇರಿದಂತೆ ಅನೇಕ ಕಡೆ ಮಹಿಳೆ ಹೂಡಿಕೆ ಬಗ್ಗೆ ಜ್ಞಾನ ಪಡೆಯುತ್ತಿದ್ದಾಳೆ. ಇನ್ನೊಂದು ಕಡೆ ಸಾಲದ ವಿಷ್ಯದಲ್ಲೂ ಹೆಚ್ಚು ಜ್ಞಾನ ಪಡೆಯುತ್ತಿರುವ ಮಹಿಳೆಯರು ತಮಗೆ ಅಗತ್ಯವಿರುವ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುತ್ತಿದ್ದಾರೆ.

ಮಹಿಳೆಯರಿಗೆ ಅನೇಕ ಬ್ಯಾಂಕ್ (Bank), ಸಂಘ ಸಂಸ್ಥೆಗಳು ಕಡಿಮೆ ಬಡ್ಡಿ (Interest) ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತವೆ. ಸರ್ಕಾರ ಕೂಡ ಮಹಿಳೆ (Women) ಯರ ಸಾಲದಲ್ಲಿ ಸಾಕಷ್ಟು ರಿಯಾಯಿತಿ ನೀಡುತ್ತದೆ. ಮಹಿಳೆಯರ ಸಾಲ (loan) ಹೆಚ್ಚಾಗಲು ಇದು ಮುಖ್ಯ ಕಾರಣವಾಗಿದೆ ಎನ್ನಬಹುದು. ಚಿನ್ನದ ಸಾಲ ಅಥವಾ ವೈಯಕ್ತಿಕ ಸಾಲ ಅಥವಾ ಗೃಹ ಸಾಲ, ಚಿಲ್ಲರೆ ಸಾಲಗಳಲ್ಲಿ ಮಹಿಳೆಯರ ಪಾಲು ನಿರಂತರವಾಗಿ ಹೆಚ್ಚುತ್ತಿದೆ. 

Tap to resize

Latest Videos

ಮಹಿಳೆಯ ಕಣ್ಣಿನ ಮೂಲಕವೇ ಈ ಕ್ಯಾನ್ಸರ್ ಮತ್ತೆ ಮಾಡಬಹುದು!

ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕ್ರೆಡಿಟ್ ಬ್ಯೂರೋ CIRF ಹೈ ಮಾರ್ಕ್ ವರದಿಯೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಹಿಳಾ ಸಾಲಗಾರರ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯ ಹೊರಬಿದ್ದಿದೆ. ಈ ಕ್ಷೇತ್ರದಲ್ಲಿ ಹೆಚ್ಚಿದೆ ಮಹಿಳೆಯರ ಸಾಲ : ಚಿನ್ನ ಖರೀದಿಗೆ ಆಸಕ್ತಿ ತೋರಿದಂತೆ ಚಿನ್ನದ ಸಾಲದಲ್ಲಿ ಮಹಿಳೆಯರು ಆಸಕ್ತಿ ತೋರುತ್ತಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಒಟ್ಟೂ ಮಹಿಳಾ ಸಾಲಗಾರರಲ್ಲಿ ಶೇಕಡಾ 44ರಷ್ಟು ಮಹಿಳೆಯರು ಚಿನ್ನದ ಮೇಲೆ ಸಾಲ ಪಡೆಯುತ್ತಿದ್ದಾರೆ. 

ಶಿಕ್ಷಣ ಸಾಲ : ಶಿಕ್ಷಣ ಸಾಲದಲ್ಲಿ ಮಹಿಳೆಯರ ಪಾಲು ಕಡಿಮೆ ಇದೆ ಎನ್ನಬಹುದು. ಒಟ್ಟು ಮಹಿಳಾ ಸಾಲಗಾರರಲ್ಲಿ ಶಿಕ್ಷಣ ಸಾಲದ ಪ್ರಮಾಣ ಶೇಕಡಾ 36ರಷ್ಟಿದೆ. 

ಹೆಚ್ಚಾದ ಗೃಹ ಸಾಲಗಾರರ ಸಂಖ್ಯೆ : ಇನ್ನು ಗೃಹ ಸಾಲದ ವಿಷ್ಯಕ್ಕೆ ಬರೋದಾದ್ರೆ ಗೃಹ ಸಾಲದಲ್ಲಿ ಮಹಿಳೆಯರ ಪಾಲು ಶೇಕಡಾ 33ರಷ್ಟಿದೆ.  ಗೃಹ ಸಾಲ ಕ್ಷೇತ್ರದಲ್ಲಿ ಮಹಿಳಾ ಸಾಲಗಾರರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದಕ್ಕೆ ಕಾರಣ  ಕಡಿಮೆ ಬಡ್ಡಿ ದರ ಎಂದು ವರದಿಯಲ್ಲಿ ಹೇಳಲಾಗಿದೆ. ಮೊದಲೇ ಹೇಳಿದಂತೆ ಅನೇಕ ಬ್ಯಾಂಕ್ ಗಳು ಪುರುಷರಿಗಿಂತ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಸೌಲಭ್ಯ ನೀಡುತ್ತಿವೆ. ಇದು ಈ ಕ್ಷೇತ್ರದಲ್ಲಿ ಮಹಿಳಾ ಸಾಲಗಾರರ ಸಂಖ್ಯೆ ಹೆಚ್ಚಿಸಿದೆ.

ವ್ಯಾಪಾರ ಕ್ಷೇತ್ರದಲ್ಲಿ ಕಡಿಮೆ ಸಾಲಗಾರರು : ಶೇಕಡಾ 30ರಷ್ಟು ಮಹಿಳೆಯರು ಆಸ್ತಿ ಸಾಲ ಪಡೆದ್ರೆ ವ್ಯಾಪಾರ ಸಾಲದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಶೇಕಡಾ 24 ಕ್ಕಿಂತ ಕಡಿಮೆ ಮಹಿಳೆಯರು ವ್ಯಾಪಾರ ಸಾಲ ಪಡೆಯುತ್ತಿದ್ದಾರೆ.

ಜೆಫ್ ಬಿಜೋಸ್ ಹಿಂದಿಕ್ಕಿ ವಿಶ್ವದ ಶ್ರೀಮಂತ ಪಟ್ಟಕ್ಕೇರಿದ ಅರ್ನಾಲ್ಟ್, 3ನೇ ಸ್ಥಾನಕ್ಕೆ ಕುಸಿದ ಮಸ್ಕ್ !

ಗೃಹ ಸಾಲ (Home Loan), ವೈಯಕ್ತಿಕ ಸಾಲ (Personal Loan), ಚಿನ್ನದ ಸಾಲ (Gold Loan) ಹಾಗೂ ಶಿಕ್ಷಣ ಸಾಲ (Education Loan) ಸೇರಿದಂತೆ ಎಲ್ಲ ಸಾಲದಲ್ಲಿ ಮಹಿಳೆಯರ ಪಾಲು ಹೆಚ್ಚಾಗ್ತಿರೋದನ್ನು ಇಲ್ಲಿ ಗಮನಿಸಬಹುದು. ಈ ಹಿಂದೆ ಎಲ್ಲ ಕ್ಷೇತ್ರದ ಸಾಲಗಾರರಲ್ಲಿ ಮಹಿಳೆಯರ ಪಾಲು ಶೇಕಡಾ 32 ರಷ್ಟಿತ್ತು. ಒಂದು ವರ್ಷದ ನಂತರ ಈಗ ಮಹಿಳೆಯರ ಪಾಲು ಶೇಕಡಾ 33ಕ್ಕೆ ಏರಿಕೆಯಾಗಿದೆ. ಕ್ಷೇತ್ರವಾರು ನೋಡೋದಾದ್ರೆ,  ವೈಯಕ್ತಿಕ ಸಾಲದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇಕಡಾ 15ರಿಂದ ಶೇಕಡಾ 16ಕ್ಕೆ ಏರಿದೆ. ಚಿನ್ನದ ಸಾಲ ಶೇಕಡಾ 41 ರಿಂದ ಶೇಕಡಾ 43 ಕ್ಕೆ ಏರಿದೆ. ಶಿಕ್ಷಣ ಸಾಲ ಶೇಕಡಾ 35 ರಿಂದ ಶೇಕಡಾ 36ಕ್ಕೆ ಹೆಚ್ಚಿದೆ.  

click me!