Haveri: ಕುರಿ ಸಾಕಿ ಆದಾಯ ಪಡೆಯುತ್ತಿರುವ ಮಹಿಳೆ: ಯುವ ಜನಾಂಗಕ್ಕೆ ಮಾದರಿ

By Kannadaprabha NewsFirst Published Jan 3, 2022, 11:10 AM IST
Highlights

*  ಹಾವೇರಿ ತಾಲೂಕು ಕನಕಾಪುರದ ರೈತ ಮಹಿಳೆ ಮಾದರಿ
*  6 ತಿಂಗಳಿಗೆ 1.20 ಲಕ್ಷ ಲಾಭ
*  25 ಕುರಿಗಳ ಒಡತಿ 
 

ಹಾವೇರಿ(ಡಿ.03):  ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು(NREGA) ಬಳಸಿಕೊಂಡು ಮಹಿಳೆಯೊಬ್ಬರು(Woman) ಕುರಿ ದೊಡ್ಡಿ ನಿರ್ಮಿಸಿ ಹತ್ತಾರು ಕುರಿ ಮರಿಗಳನ್ನು ಸಾಕುತ್ತಾ, ಅವುಗಳನ್ನು ಮಾರಾಟ ಮಾಡಿ ಅಧಿಕ ಲಾಭ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತಾಲೂಕು ಕನಕಾಪುರ ಗ್ರಾಮದ ಮಾದೇವಕ್ಕ ಹರಿಹರ(Madevakka Harihara) ಎಂಬ ರೈತ ಮಹಿಳೆ(Farmer Woman) ನರೇಗಾ ಯೋಜನೆಯ ಲಾಭ ಪಡೆದು ಕುರಿ ದೊಡ್ಡಿ ನಿರ್ಮಿಸಿಕೊಂಡು ಕುರಿ ಸಾಕಾಣಿಕೆಯಲ್ಲಿ(Sheep Farming) ಯಶಸ್ಸು ಕಂಡಿದ್ದಾರೆ.

ಈ ಗ್ರಾಮದ ಬಹುತೇಕ ರೈತರು ಕೃಷಿ(Agriculture) ಬದುಕಿನ ಜತೆಗೆ ಹಸು, ಎಮ್ಮೆ, ಎತ್ತು, ಮೇಕೆ, ಕುರಿಗಳನ್ನು ಸಾಕುವುದು ಉಪಕಸುಬಾಗಿದೆ. ಆದರೆ ಜಾನುವಾರುಗಳನ್ನು(Livestock) ಸಾಕಲು ಸರಿಯಾದ ವ್ಯವಸ್ಥೆ, ಸೂಕ್ತ ಆರೈಕೆ ಮಾಡದಿರುವುದರಿಂದ ಸಾವು ನೋವು ಸಹಜವಾಗಿತ್ತು. ಈ ಹಿನ್ನೆಲೆ ಬಹುತೇಕ ಜನರು ದನಕರುಗಳನ್ನು ಸಾಕುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಜನ ಜಾನುವಾರುಗಳು ಸಂಕಷ್ಟದಲ್ಲಿರುವ ಪರಿಸ್ಥಿತಿಯನ್ನು ಕಂಡು ಜನಪ್ರತಿನಿಧಿಗಳು ಗ್ರಾಪಂನೊಂದಿಗೆ ಕೈಜೋಡಿಸಿದಾಗ ನರೇಗಾ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಮುಂದಾದರು. ಈ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಪಡಿಸಿಕೊಂಡು ಮಾದೇವಕ್ಕ ಹರಿಹರ ಕುರಿ ಸಾಕಾಣಿಕೆಯಲ್ಲಿ ಲಾಭ ಕಂಡಿದ್ದಾರೆ.

Untimely Rain Effect: ಬೆಳೆ ಹಾನಿ ಹೆಚ್ಚಿನ ಪರಿಹಾರ ಶೀಘ್ರ ಕೊಡುವಂತೆ ರೈತರ ಪಟ್ಟು

ಕುರಿ ಸಾಕಾಣಿಕೆ ಲಾಭದಾಯಕ:

ಮೊದಲೆಲ್ಲಾ ಒಂದು ಎಕರೆ ಜಮೀನಿನಲ್ಲಿ(Land) ಸರಿಯಾದ ಬೆಳೆ ಬೆಳೆದರೂ ಕೂಡ 20ರಿಂದ 25 ಕ್ವಿಂಟಲ್‌ ಗೋವಿನಜೋಳ ಬೆಳೆಯಬಹುದಿತ್ತು. ಇದರಿಂದ ಬರುವ ಆದಾಯ ಕೇವಲ 20 ರಿಂದ 25 ಸಾವಿರ ಕೂಡ ಕೈಗೆ ಸಿಗುತ್ತಿರಲಿಲ್ಲ. ಈಗ ಪರ್ಯಾಯವಾಗಿ ಕುರಿದೊಡ್ಡಿ ನಿರ್ಮಾಣ ಮಾಡಿಕೊಂಡು ಕುರಿಮರಿಗಳನ್ನು ಸಾಕಿ, ಅವು ದೊಡ್ಡವಾದ ಮೇಲೆ ಮಾರಾಟ ಮಾಡುತ್ತಿರುವುದರಿಂದ 6 ತಿಂಗಳಿಗೆ 1.20 ಲಕ್ಷ ಲಾಭ ಪಡೆದು ಒಂದು ವರ್ಷಕ್ಕೆ 2.50 ರಿಂದ 3 ಲಕ್ಷಗಳವರೆಗೆ ಆದಾಯ ಪಡೆಯುತ್ತಿದ್ದಾರೆ.

25 ಕುರಿಗಳ ಒಡತಿ:

ಬೇಕಾದ ಸುಸಜ್ಜಿತ ಕುರಿದೊಡ್ಡಿಯನ್ನು ನಿರ್ಮಿಸಿಕೊಂಡಿದ್ದಾರೆ. ಆರಂಭಿಕ ಹಂತದಲ್ಲಿ ಖರೀದಿಸಿದ್ದ ಮರಿಗಳಿಗೆ ಚೆನ್ನಾಗಿ ಉಪಚಾರ ಮಾಡಿ, ಮೇಯಿಸಿ ದೊಡ್ಡದಾಗಿ ಮಾಡಿ ಆರು ತಿಂಗಳು ಬಳಿಕ ಮಾರಾಟ ಮಾಡಿದಾಗ ಲಕ್ಷಾಂತರ ರುಪಾಯಿಗಳ ಆದಾಯ(Revenue) ಪಡೆದಿದ್ದೇನೆ ಎಂದು ಮಾದೇವಕ್ಕ ಹೇಳುತ್ತಾರೆ.

Guddada Mallapura Mutt : ಶತಮಾನಗಳ ಇತಿಹಾಸವಿರುವ ಇಲ್ಲಿ ಬಸವಣ್ಣನೇ ಪೀಠಾಧಿಪತಿ

ಕೃಷಿಗೆ ತೊಡಗಿಸಿದ್ದ ಬಂಡವಾಳ ಸರಿಯಾಗಿ ಬಾರದೇ ಬದುಕಿನಲ್ಲಿ ತುಂಬಾ ನಷ್ಟ ಅನುಭವಿಸಲಾಗಿತ್ತು. ಮನರೇಗಾ ಯೋಜನೆಯಡಿ ನೀಡಲಾಗುವ ಸಹಾಯಧನ ಪಡೆದುಕೊಂಡು ಸುಸಜ್ಜಿತ ಕುರಿದೊಡ್ಡಿ ನಿರ್ಮಿಸಿಕೊಂಡು, 25ಕ್ಕೂ ಹೆಚ್ಚು ಕುರಿಮರಿಗಳನ್ನು ಸಾಕುತ್ತಾ ಉತ್ತಮ ಜೀವನ ಕಂಡುಕೊಂಡಿದ್ದೇವೆ. ಚೆನ್ನಾಗಿ ಮೇಯಿಸಿ ಮಾರಾಟ ಮಾಡುತ್ತಿರುವುದರಿಂದ ಒಳ್ಳೆಯ ಆದಾಯ ಗಳಿಸುತ್ತಿದ್ದೇವೆ. ಗ್ರಾಪಂ, ತಾಪಂ ಹಾಗೂ ಸಂಬಂಧಿಸಿದ ಅಧಿಕಾರಿಗಳು ನಮಗೆ ಹೆಚ್ಚಿನ ಸಹಕಾರ ನೀಡಿದ್ದಾರೆ ಅಂತ ಕುರಿ ಸಾಕಾಣಿಕೆ ಮಹಿಳೆ ಮಾದೇವಕ್ಕ ಹರಿಹರ ತಿಳಿಸಿದ್ದಾರೆ. 

ಮನರೇಗಾ ಯೋಜನೆಯಡಿ ಶ್ರಮಕ್ಕೆ ತಕ್ಕ ಪ್ರತಿಫಲವಿದೆ. ಗ್ರಾಮೀಣ ಭಾಗದ ಜನರ ಬದುಕಲ್ಲಿ ಈ ಯೋಜನೆ ಹೊಸ ಭರವಸೆ ಹುಟ್ಟಿಸಿದೆ. ತಾಲೂಕಿನ 33 ಗ್ರಾಮ ಪಂಚಾಯಿತಿಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆ ಲಾಭ ಪಡೆದುಕೊಳ್ಳಬೇಕು ಅಂತ ಹಾವೇರಿ ತಾಪಂ ಇಒ ಬಸವರಾಜ ಹೇಳಿದ್ದಾರೆ. 
 

click me!