Official Documents : ವ್ಯಕ್ತಿಯೊಬ್ಬನ ಸಾವಿನ ಬಳಿಕ ಆಧಾರ್, ಪಾನ್ ಕಾರ್ಡ್ ಏನಾಗುತ್ತೆ ಗೊತ್ತಾ?

By Suvarna News  |  First Published Jan 2, 2022, 12:32 PM IST

* ಮನುಷ್ಯ ಬದುಕಿದ್ದಾಗ ಅನೇಕ ದಾಖಲೆಗಳ ಅವಶ್ಯಕತೆಯಿರುತ್ತದೆ

* ಪಿಂಚಣಿ ಪಡೆಯುವ ವ್ಯಕ್ತಿ ನಾನು ಬದುಕಿದ್ದೇನೆ ಎಂಬ ದಾಖಲೆಯನ್ನು ಪ್ರತಿ ವರ್ಷ ನೀಡಬೇಕಾಗುತ್ತೆ

* ಆದೇ ಮನುಷ್ಯ ಸತ್ತ ಮೇಲೆ ದಾಖಲೆಗಳಿಗೆ ಬೆಲೆ ಇಲ್ಲ.


ಪಾನ್ ಕಾರ್ಡ್ (PAN Card), ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ (Aadhaar card) ಮತ್ತು ಪಾಸ್‌ಪೋರ್ಟ್ (Passport) ಪ್ರತಿ ಭಾರತೀಯ ನಾಗರಿಕರಿಗೆ ಅತ್ಯಗತ್ಯ ದಾಖಲೆ (Documentation)ಗಳಾಗಿವೆ. ಇವು ದಾಖಲೆಗಳು ಮಾತ್ರವಲ್ಲ, ಗುರುತಿನ ಚೀಟಿಗಳೂ ಆಗಿವೆ. ಯಾವುದೇ ಹಣಕಾಸಿನ ವಹಿವಾಟಿಗೆ ಮತ್ತು ಸರ್ಕಾರದ ಯೋಜನೆಗಳ ಲಾಭ ಪಡೆಯಲು ಇವು ಅತ್ಯಂತ ಪ್ರಮುಖವಾಗಿವೆ. ಈ ದಾಖಲೆಗಳು ಸರ್ಕಾರಿ ಗುರುತಿನ ರೂಪದಲ್ಲಿ ಕಾರ್ಯನಿರ್ವಹಿಸುತ್ತವೆ. ಸರ್ಕಾರಿ ಸೇವೆಗಳಿಗೆ ಮಾತ್ರವಲ್ಲ ಖಾಸಗಿ ಸೇವೆಗಳನ್ನು ಪಡೆಯಲು ಕೂಡ ಇವು ಅಗತ್ಯ. ಪ್ರತಿಯೊಬ್ಬ ನಾಗರಿಕನು ಪಾನ್,ಆಧಾರ್,ಮತದಾರರ ಗುರುತಿನ ಚೀಟಿ ಪಡೆಯುವುದು ಕಡ್ಡಾಯ. ಈ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಆದ್ರೆ ಸಾವಿನ (Death) ನಂತರ ಈ ದಾಖಲೆಗಳು ಏನಾಗುತ್ತವೆ ಎಂಬುದು ಅನೇಕ ಜನರ ಮನಸ್ಸಿನಲ್ಲಿರುವ ಪ್ರಶ್ನೆ. ಸರ್ಕಾರ (Government )ದಾಖಲೆಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸುತ್ತದೆಯೋ ಅಥವಾ ಕುಟುಂಬದ ಸದಸ್ಯರು ಅದನ್ನು ರದ್ದುಗೊಳಿಸಬೇಕೇ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. 

ಆಧಾರ್ ಕಾರ್ಡ್ : ಆಧಾರ್ ಕಾರ್ಡ್ ಭಾರತದ ಬಹುಮುಖ್ಯ ದಾಖಲೆಯಾಗಿದೆ. ನವಜಾತ ಶಿಶುಗಳಿಗೂ ಆಧಾರ್ ಕಾರ್ಡ್ ನೀಡಲಾಗ್ತಿದೆ. ಜನರು ಸತ್ತ ನಂತ್ರ ಆಧಾರ್ ಕಾರ್ಡ್ ಏನು ಮಾಡಬೇಕು ಎಂಬ ಪ್ರಶ್ನೆ (Question)ಕಾಡುತ್ತದೆ. ಹಲವು ಬಾರಿ ವಂಚಕರು ಆಧಾರ್ ಕಾರ್ಡ್‌ನಿಂದ ಅಗತ್ಯ ಮಾಹಿತಿಯನ್ನು ಕದಿಯುವ ಮೂಲಕ ವಂಚನೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮೃತರ ಆಧಾರ್ ಕಾರ್ಡ್ ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ಮೃತರ ಕುಟುಂಬದವರ ಜವಾಬ್ದಾರಿಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಆಧಾರ್ ಗೆ ಸಂಬಂಧಿತ ಸೇವೆಗಳನ್ನು ಮೇಲ್ವಿಚಾರಣೆ ಮಾಡುವ ಪ್ರಾಧಿಕಾರವಾಗಿದೆ. ಆಧಾರ್ ಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಈ ಪ್ರಾಧಿಕಾರ ತೆಗೆದುಕೊಂಡರೂ ಸತ್ತವರ ಆಧಾರ್ ಕಾರ್ಡ್ ಅನ್ನು ರದ್ದುಗೊಳಿಸುವ ಯಾವುದೇ ವಿಧಾನವನ್ನು ಪ್ರಾಧಿಕಾರ ಹೊಂದಿಲ್ಲ. ಆದರೆ ಮೃತರು ಯಾವುದೇ ಸರ್ಕಾರಿ ಯೋಜನೆಯನ್ನು ತೆಗೆದುಕೊಂಡಿದ್ದರೆ, ಅದನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದರೆ  ಕುಟುಂಬದವರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. 

Tap to resize

Latest Videos

ಪಾನ್ ಕಾರ್ಡ್ : ಆದಾಯ ತೆರಿಗೆ (Tax )ಸಲ್ಲಿಸಲು ಮತ್ತು ಹಲವು ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಪಾನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಪಾನ್ ಕಾರ್ಡ್ ನ್ನು ನಿಮ್ಮ ಖಾತೆಗಳಿಗೆ ಲಿಂಕ್ ಮಾಡಬೇಕಾಗುತ್ತದೆ. ಆದ್ದರಿಂದ, ವ್ಯಕ್ತಿಯ ಮರಣದ ನಂತರ, ಅವರ ಕುಟುಂಬವು ಆದಾಯ ತೆರಿಗೆ ಇಲಾಖೆಯನ್ನು ಸಂಪರ್ಕಿಸಬೇಕು. ತೆರಿಗೆ ಇಲಾಖೆಗೆ ಪಾನ್ ಕಾರ್ಡ್ ಅನ್ನು ಒಪ್ಪಿಸಬೇಕು. ಆದರೆ ಪಾನ್ ಕಾರ್ಡ್ ನೀಡುವ ಮೊದಲು, ಸತ್ತವರ ಎಲ್ಲಾ ಖಾತೆಗಳನ್ನು ಮುಚ್ಚಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಬ್ಯಾಂಕ್ ಖಾತೆಯನ್ನು ಮುಚ್ಚದೆ ಪಾನ್ ರದ್ದು ಮಾಡಿದ್ರೆ ಸಮಸ್ಯೆಯಾಗುತ್ತದೆ.

Locker Management Revised Instructions: ನಾಳೆಯಿಂದ ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆ

undefined

ಮತದಾರರ ಗುರುತಿನ ಚೀಟಿ (Voter ID Card): ಮತ ಚಲಾಯಿಸುವ ಪ್ರತಿಯೊಬ್ಬ ವ್ಯಕ್ತಿಯೂ ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರ್ಪಡೆಗೊಂಡಿರುವುದಕ್ಕೆ ಇದೇ ಸಾಕ್ಷಿ. ಸಾವಿನ ನಂತರ ಅದನ್ನು ರದ್ದುಗೊಳಿಸಬಹುದು. ನಿಮ್ಮ ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದ್ದರೆ, ಕುಟುಂಬದ ಯಾರಾದರೂ ಚುನಾವಣಾ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಜೊತೆ ಮರಣ ಪ್ರಮಾಣಪತ್ರದ ಅಗತ್ಯವಿರುತ್ತದೆ. ಈ ದಾಖಲೆಯನ್ನು ಚುನಾವಣಾ ಕಚೇರಿಗೆ ನೀಡುವ ಮೂಲಕ ಮತದಾರರ ಚೀಟಿಯನ್ನು ರದ್ದುಗೊಳಿಸಬಹುದು.

Own Business : ಮನೆ ಮೂಲೆ ಸೇರಿರೋ ವಸ್ತುಗಳು ನಿಮ್ಮನ್ನು ಲಕ್ಷಾಧಿಪತಿ ಮಾಡ್ಬಹುದು..! ಹೇಗೆ ಗೊತ್ತಾ?

ಪಾಸ್ಪೋರ್ಟ್ : ಭಾರತದ ಪ್ರತಿಯೊಬ್ಬ ನಾಗರಿಕನೂ ಪಾಸ್ಪೋರ್ಟ್ ಪಡೆಯಬೇಕೆಂದೇನಿಲ್ಲ. ವಿಮಾನದಲ್ಲಿ ಪ್ರಯಾಣ ಬೆಳೆಸುವವರಿಗೆ ಪಾಸ್ಪೋರ್ಟ್ ಅನಿವಾರ್ಯವಾಗುತ್ತದೆ. ಸಾವಿನ ಸಂದರ್ಭದಲ್ಲಿ ಪಾಸ್ಪೋರ್ಟನ್ನು ಸುಲಭವಾಗಿ ರದ್ದಗೊಳಿಸಬಹುದು. ಆದ್ರೆ ಸಾವಿನ ನಂತ್ರ ಪಾಸ್ಪೋರ್ಟ್ ರದ್ದುಗೊಳಿಸುವ ಅನಿವಾರ್ಯತೆಯಿಲ್ಲ. ಪಾಸ್ಪೋರ್ಟ್ ಅವಧಿ ಮುಗಿದಾಗ, ಅದು ಪೂರ್ವನಿಯೋಜಿತವಾಗಿ ಅಮಾನ್ಯವಾಗುತ್ತದೆ.
 

click me!