ತೆಂಗಿನ ಚಿಪ್ಪಿನಿಂದ ಕೋಟಿ ಸಂಪಾದಿಸುತ್ತಿರುವ ಕೇರಳದ ಹುಡುಗಿ!

Published : Feb 17, 2024, 11:58 AM IST
ತೆಂಗಿನ ಚಿಪ್ಪಿನಿಂದ ಕೋಟಿ ಸಂಪಾದಿಸುತ್ತಿರುವ ಕೇರಳದ ಹುಡುಗಿ!

ಸಾರಾಂಶ

ಯಾವುದೇ ಬ್ಯುಸಿನೆಸ್ ಮಾಡೋದು ಸುಲಭವಲ್ಲ. ಒಳ್ಳೆ ಆಲೋಚನೆ ಜೊತೆ ಅದಕ್ಕೊಂದಿಷ್ಟು ಸಂಶೋಧನೆ ಅಗತ್ಯ. ಎಂಬಿಎ ಮುಗಿಸಿ ಲಕ್ಷಾಂತರ ರೂಪಾಯಿ ಸಂಬಳದ ಬ್ಯುಸಿನೆಸ್ ಮಾಡುವ ಬದಲು ಈ ಹುಡುಗಿ ವ್ಯಾಪಾರ ಶುರು ಮಾಡಿ ಯಶಸ್ವಿಯಾಗಿದ್ದಾಳೆ.    

ಪ್ರತಿಯೊಬ್ಬ ವ್ಯಕ್ತಿ ಬಾಲ್ಯದಲ್ಲೇ ಕೆಲ ಕನಸುಗಳನ್ನು ಕಂಡಿರುತ್ತಾರೆ. ದೊಡ್ಡವರಾಗ್ತಿದ್ದಂತೆ ಇದಕ್ಕೆ ಪ್ರಯತ್ನ ನಡೆಸುತ್ತಾರೆ. ಅದೃಷ್ಟ ಮೂಲಕ ಕೆಲವರು ತಮ್ಮ ಕನಸನ್ನು ಪೂರ್ಣಗೊಳಿಸುತ್ತಾರೆ. ಇನ್ನು ಕೆಲವರಿಗೆ ಅದೃಷ್ಟ ಕೈ ಹಿಡಿಯೋದಿಲ್ಲ. ಅವರು ಬೇರೆ ದಾರಿ ನೋಡಿಕೊಳ್ತಾರೆ. ಆದ್ರೆ ಇನ್ನು ಕೆಲವರು ಅದೃಷ್ಟವನ್ನು ನಂಬಿ ಕುಳಿತುಕೊಳ್ಳದೆ ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ತಾರೆ. ಇದಕ್ಕೆ ಮಾರಿಯಾ ಕುರಿಯಾಕೋಸ್ ಉತ್ತಮ ನಿದರ್ಶನ. 

ಮಾರಿಯಾ (Maria) ಕುರಿಯಾಕೋಸ್ ತಮ್ಮ ರಾಜ್ಯ ಕೇರಳ (Kerala) ಕ್ಕಾಗಿ ಏನಾದ್ರೂ ಮಾಡಬೇಕು ಎಂದು ಬಾಲ್ಯದಲ್ಲೇ ಬಯಸಿದ್ದರು. ಆದ್ರೆ ಏನು ಮಾಡ್ಬೇಕು ಎಂಬುದು ಅವರಿಗೆ ಗೊತ್ತಾಗಿರಲಿಲ್ಲ. ಏನಾದ್ರೂ ಮಾಡ್ಬೇಕು ಆದ್ರೆ ಏನು ಎಂಬ ಪ್ರಶ್ನೆ ಅವರನ್ನು ಕಾಡುತ್ತಿತ್ತು. ಕೊನೆಯಲ್ಲಿ ತಮ್ಮ ಕನಸುಗಳನ್ನು ನನಸಾಗಿಸಲು ಅವರು ಸತತ ಪ್ರಯತ್ನ ನಡೆಸಿ, ಯಶಸ್ವಿಯಾಗಿದ್ದಾರೆ. 

ಅಬ್ಬಬ್ಬಾ..ಒಂದು ಗಂಟೆಗೆ ಬರೋಬ್ಬರಿ 3 ಕೋಟಿ ಗಳಿಸೋ ವ್ಯಕ್ತಿ, ಅಂಬಾನಿ, ಅದಾನಿ ಅಲ್ಲ..ಮತ್ಯಾರು?

ಮಾರಿಯಾ ಕುರಿಯಾಕೋಸ್ ಪ್ರಯಾಣ ಸುಲಭವಾಗಿರಲಿಲ್ಲ.  ಮಾರಿಯಾ ತಮ್ಮ ರಾಜ್ಯದಲ್ಲಿರುವ ತೆಂಗಿನಕಾಯಿ (Coconut) ಕಾರ್ಖಾನೆಯನ್ನು ನೋಡಿದಾಗ ಅವರ ದಾರಿ ಬದಲಾಯ್ತು. ತೆಂಗಿನ ಕಾಯಿ ತುರಿದು ಚಿಪ್ಪು ರಾಶಿ ರಾಶಿ ಬಿದ್ದಿತ್ತು. ಈ ಚಿಪ್ಪಿನಿಂದ ಏನಾದ್ರೂ ಮಾಡಬಹುದು ಎಂದು ಅವರು ಆಲೋಚನೆ ಮಾಡಿದ್ರು.  

ಪೇಟಿಎಂಗೆ ಆರ್ ಬಿಐ ನಿರ್ಬಂಧ, ಈ ಮೂರು ಕಂಪನಿಗಳಿಗೆ ಭಾರೀ ಲಾಭ!

ಮರಿಯಾ ಕೇರಳದ ತ್ರಿಶೂರ್‌ನಲ್ಲಿ ಜನಿಸಿದ್ದಾರೆ. ಮರಿಯಾಳ ತಂದೆ ಕುರಿಯಾಕೋಸ್ ವರು ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ತಾಯಿ ಜಾಲಿ ಕುರಿಯಾಕೋಸ್ ಗೃಹಿಣಿ. 28 ವರ್ಷದ ಮಾರಿಯಾ, ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜ್ ನಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದರು. ನಂತ್ರ ಸ್ಪೇನ್‌ಗೆ ಹೋಗಿ 2017ರಲ್ಲಿ ಎಂಬಿಎ ಮುಗಿಸಿ ಬಂದಿದ್ದರು. ಎಂಬಿಎ ಮಾಡಿದ ನಂತರ ಮತ್ತೆ ಮುಂಬೈಗೆ ಬಂದ ಮರಿಯಾ ಅಲ್ಲಿನ ಕನ್ಸಲ್ಟೆನ್ಸಿಯಲ್ಲಿ ಕೆಲಸ ಮಾಡತೊಡಗಿದ್ದರು. ಆದ್ರೆ ಮಾರಿಯಾಗೆ ಈ ಕೆಲಸ ಮಾಡಲು ಇಷ್ಟವಿರಲಿಲ್ಲ.

2019ರಲ್ಲಿ ಮಾರಿಯಾ ಕೇರಳಕ್ಕೆ ವಾಪಸ್ ಬಂದರು. ಆಗ ಅವರು ತೆಂಗಿನ ಎಣ್ಣೆ ಕಾರ್ಖಾನೆಗೆ ಹೋಗಿದ್ದರು. ಅಲ್ಲಿ ಚಿಪ್ಪು ನೋಡಿದ ಅವರು, ತೆಂಗಿನ ಚಿಪ್ಪಿನಿಂದ ಏನು ಮಾಡಬಹುದು ಎಂದು ಸಂಶೋಧನೆ ನಡೆಸಿದರು. ಸೃಜನಾತ್ಮಕ ವಸ್ತುವನ್ನು ತಯಾರಿಸುವ ಆಲೋಚನೆ ಮಾಡಿದ ಮಾರಿಯಾ, ಅದ್ರಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ರು. 

ಭಾರತದಲ್ಲಿ ತೆಂಗಿನಕಾಯಿ ಉತ್ಪಾದನೆಯಲ್ಲಿ ಕೇರಳವು ಪ್ರಮುಖವಾಗಿದೆ. ಈ ಆಧಾರದ ಮೇಲೆ  ಮಾರಿಯಾ 2020 ರಲ್ಲಿ ತನ್ನ ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಿದರು. ತನ್ನ ಬ್ರ್ಯಾಂಡ್ ಗೆ ಥೇಂಗಾ ಎಂದು ನಾಮಕರಣ ಮಾಡಿದರು. ತೆಂಗಿನಕಾಯಿಯನ್ನು ಮಲಯಾಳಂನಲ್ಲಿ ಥೇಂಗಾ ಎಂದು ಕರೆಯಲಾಗುತ್ತದೆ. 

ಥೆಂಗಾ ಕೊಕೊವನ್ನು ಪ್ರಾರಂಭಿಸಿದ್ರೂ ಕೋವಿಡ್ 19 ಕಾರಣದಿಂದಾಗಿ ಕೆಲವು ಸಮಸ್ಯೆಗಳನ್ನು ಎದುರಿಸಿದರು. ಆದ್ರೆ ಇದ್ರಿಂದ ಮಾರಿಯಾ ಧೈರ್ಯಗೆಡಲಿಲ್ಲ. ಶೀಘ್ರದಲ್ಲೇ ಅವರ ಉತ್ಪನ್ನಗಳು ಜನರಲ್ಲಿ ಪ್ರಸಿದ್ಧವಾಗಲು ಪ್ರಾರಂಭಿಸಿದವು. ಈಗ ಅವರ ಸಂಸ್ಥೆ ವಾರ್ಷಿಕ 1 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ.

ಥೇಂಗಾ ಕೊಕೊ ಏನೆಲ್ಲ ತಯಾರಿಸುತ್ತಿದೆ? : ಮಾರಿಯಾ ಥೇಂಗಾ ಕೊಕೊ ಕಂಪನಿ ಮೂಲಕ ಅನೇಕ ವಸ್ತುಗಳನ್ನು ತಯಾರಿಸುತ್ತಿದೆ. ತೆಂಗಿನ ಚಿಪ್ಪಿನಿಂದ ಕಪ್‌ಗಳು, ಬಟ್ಟಲುಗಳು, ಚಾಕು, ಕತ್ತರಿಗಳು, ಕ್ಯಾಂಡಲ್ ಸ್ಟ್ಯಾಂಡ್‌ಗಳು, ಅಡುಗೆ ಚಮಚಗಳು ಸೇರಿದಂತೆ 23 ಬಗೆಯ ಸುಂದರ ಉತ್ಪನ್ನಗಳನ್ನು ಥೇಂಗಾ ಕೊಕೊ ಇಂದು ತಯಾರಿಸುತ್ತಿದೆ. 

ಮರಿಯಾಳ ತಂದೆ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ಥೇಂಗಾ ಕೊಕೊಗೆ ಬೇಕಾದ ಯಂತ್ರಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ಲಾಸ್ಟಿಕ್ ವಸ್ತುಗಳು ಪರಿಸರಕ್ಕೆ ವಿರೋಧವಾಗಿರುವ ಕಾರಣ ಜನರು ನೈಸರ್ಗಕ್ಕೆ ಹತ್ತಿರವಾದ ವಸ್ತುಗಳನ್ನು ಬಳಸಲು ಆಸಕ್ತಿ ತೋರುತ್ತಿದ್ದಾರೆ. ಇದೇ ಕಾರಣಕ್ಕೆ ತೆಂಗಿನ ಚಿಪ್ಪಿನ ಈ ವಸ್ತುಗಳು ಹೆಚ್ಚು ಪ್ರಸಿದ್ಧಿ ಆಗ್ತಿವೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!