ಸರ್ಕಾರಿ ಕೆಲಸ ಬಿಟ್ಟು ಅಂಗಡಿ ತೆರೆದ ಮಹಿಳೆ… ಮೊದಲ ದಿನವೇ ಬಂಪರ್ ಗಳಿಕೆ

By Suvarna News  |  First Published Sep 14, 2023, 1:38 PM IST

ಸರ್ಕಾರಿ ಕೆಲಸ ಹಾಗೂ ಬ್ಯುಸಿನೆಸ್ ಇದ್ರಲ್ಲಿ ಯಾವುದು ಬೆಸ್ಟ್ ಅಂತಾ ಕೇಳಿದ್ರೆ, ಅದು ಕೆಲಸದ ಮೇಲಲ್ಲ ನಾವು ಹೇಗೆ ಕೆಲಸ ಮಾಡ್ತೇವೆ ಎನ್ನುವುದರ ಮೇಲೆ ನಿರ್ಧಾರವಾಗುತ್ತೆ. ಕಷ್ಟಪಟ್ಟು ದುಡಿಯುವ ಜೊತೆಗೆ ಗ್ರಾಹಕರ ಮನಸ್ಸು ಅರಿತಿದ್ರೆ ಸರ್ಕಾರಿ ಕೆಲಸ ಡಬಲ್ ಹಣವನ್ನು ಸಣ್ಣ ವ್ಯವಹಾರದಲ್ಲೂ ಗಳಿಸಬಹುದು. 
 


ಸರ್ಕಾರಿ ಕೆಲಸ ಪಡೆಯೋದು ಜನರ ಕನಸು. ಅದಕ್ಕಾಗಿ ವರ್ಷಾನುಗಟ್ಟಲೆ ಓದಿ, ಕಠಿಣ ಪರಿಶ್ರಮಪಟ್ಟು, ಕೆಲವು ಬಾರಿ ಹಣ ಖರ್ಚು ಮಾಡಿ ಕೆಲಸ ಪಡೆಯುತ್ತಾರೆ. ಒಮ್ಮೆ ಸಿಕ್ಕ ಸರ್ಕಾರಿ ಕೆಲಸವನ್ನು ಬಿಡುವವರ ಸಂಖ್ಯೆ ಬಹಳ ಅಪರೂಪ. ಸರ್ಕಾರಿ ಕೆಲಸ ಭದ್ರವಾಗಿರುತ್ತೆ, ಒಂದಿಷ್ಟು ಸಂಬಳ ಯಾವ ಚಿಂತೆಯಿಲ್ಲದೆ ತಿಂಗಳ ಆರಂಭದಲ್ಲಿ ಬರುತ್ತದೆ, ನಿಗದಿತ ಸಮಯದಲ್ಲಿ ಕೆಲಸ ಮಾಡಿದ್ರೆ ಸಾಕು, ನಿವೃತ್ತಿ, ಪಿಂಚಣಿ ಈ ಎಲ್ಲ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರಿ ಕೆಲಸಕ್ಕೆ ಜನರು ಪ್ರಯತ್ನ ನಡೆಸ್ತಾರೆ. ಆದ್ರೆ ಈ ಮಹಿಳೆ ಕೈನಲ್ಲಿದ್ದ ಸರ್ಕಾರಿ ಕೆಲಸ ಬಿಟ್ಟು ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾಳೆ.

ಸರ್ಕಾರಿ (Government) ಕೆಲಸ ಬಿಟ್ಟು ಹೊಸ ಉದ್ಯೋಗ ಶುರು ಮಾಡಿ ಯಶಸ್ವಿಯಾದ ಮಹಿಳೆ ಹೆಸರು ಸುಮಯಾ ಯಾಡಿ. ಬ್ರಿಟನ್‌ (Britain) ನ 23 ವರ್ಷದ ಮಹಿಳೆ ಸುಮಾಯಾ. ಕಷ್ಟಪಟ್ಟು ದುಡಿಯುವ ಮೂಲಕ ತಮ್ಮ ಕನಸನ್ನು ಈಡೇರಿಸುವ ದಾರಿಯಲ್ಲಿದ್ದಾರೆ ಸುಮಯಾ. 

Tap to resize

Latest Videos

ಸುಮಯಾಗೆ ಆರಂಭದಲ್ಲಿ ರಾಜಕೀಯದ ಮೇಲೆ ಹೆಚ್ಚಿನ ಉತ್ಸಾಹವಿತ್ತು. ಯುವ ಸಂಸದರಾಗಿ ಮತ್ತು ಮ್ಯಾಂಚೆಸ್ಟರ್ ಯೂತ್ ಕೌನ್ಸಿಲ್‌ನ ಸದಸ್ಯರಾಗಿ ಅವರು ಆಯ್ಕೆಯಾದರು. ಅಲ್ಲಿಯೇ ಅವರು ತಮ್ಮ ಸೇವೆ ಮುಂದುವರೆದಿದ್ದರು. ಆದ್ರೆ ಅದ್ಯಾಕೋ ಸುಮಯಾಗೆ ತಮ್ಮ ಕೆಲಸ ತಮ್ಮದಲ್ಲ ಎನ್ನಿಸಲು ಶುರುವಾಗಿತ್ತು. ಅದಾದ ನಂತ್ರ ಸುಮಯಾ ತೆಗೆದುಕೊಂಡ ದೊಡ್ಡ ನಿರ್ಧಾರ ಎಲ್ಲರ ಚರ್ಚೆಗೆ ಕಾರಣವಾಗಿದೆ. ಸುಮಯಾ ಪ್ರಸಿದ್ಧಿ ಪಡೆಯಲು ಕಾರಣವಾಗಿದೆ.  

ಯೂತ್ ಕೌನ್ಸಿಲ್ ಸದಸ್ಯತ್ವ (Youth Counsil Memebership) ಬಿಟ್ಟು ಸುಮಯಾ, ಮ್ಯಾಂಚೆಸ್ಟರ್‌ನ ಲೆವೆನ್‌ಶುಲ್ಮ್‌ನಲ್ಲಿ ಮುಸ್ಲಿಂ ಮಹಿಳೆಯರ ಉಡುಪುಗಳ ಸಣ್ಣ ಅಂಗಡಿಯನ್ನು ತೆರೆದಿದ್ದಾರೆ.  ಸುಮಯಾ ಹೆಸರಿನ ಒಂದು ಸಾಧಾರಣ ಫ್ಯಾಶನ್ ಬ್ರಾಂಡ್  ಶುರು ಮಾಡಿದ್ದಾರೆ.  ಇದು ಮುಖ್ಯವಾಗಿ ಅಬಯಾ   ಮುಸ್ಲಿಂ ಮಹಿಳೆಯರು ಧರಿಸುವ ಉಡುಗೆಯನ್ನು ಮಾರಾಟ ಮಾಡುವ ಬ್ರಾಂಡ್ ಆಗಿದೆ. 

ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್ ಹೊಂದಿರೋ ವ್ಯಕ್ತಿ ಇವ್ರೇ ನೋಡಿ; ಅಂಬಾನಿ, ಟಾಟಾ, ಬಿಲ್‌ಗೇಟ್ಸ್‌ ಅಲ್ಲ..

ಸುಮಯಾ ಬ್ರಾಂಡನ್ನು ಜನರು ಮೆಚ್ಚಿಕೊಂಡಿದ್ದಾರೆ. ಸುಮಯಾ ಅಂಗಡಿ ಆರಂಭಿಸಿದ ದಿನ ಸಿಕ್ಕ ಪ್ರತಿಕ್ರಿಯೆಯಿಂದಲೇ ಇದು ಸ್ಪಷ್ಟವಾಗುತ್ತದೆ. ಸುಮಯಾ ಅಂಗಡಿ ಉದ್ಘಾಟನೆ ದಿನ ಸಾವಿರಕ್ಕೂ ಹೆಚ್ಚು ಗ್ರಾಹಕರು ಅಂಗಡಿಗೆ ಬಂದಿದ್ದರು. ನಿರಂತರವಾಗಿ 7 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಬಟ್ಟೆ ಖರೀದಿ ಮಾಡಿದ್ದರು. 

ಕೊರೊನಾ ಕಾಲದಲ್ಲಿ ಬಂತು ಹೊಸ ಯೋಜನೆ : ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಸುಮಯಾ ಬೇಸರಗೊಂಡಿದ್ದರಂತೆ. ಅದನ್ನು ಹೋಗಲಾಡಿಸಲು ಬಟ್ಟೆ ಸ್ಟಿಚಿಂಗ್ ಪ್ರಾರಂಭಿಸಿದರಂತೆ. ಯುಟ್ಯೂಬ್ ನೋಡಿ ಅವರು ಬಟ್ಟೆ ಹೊಲಿಯುವುದನ್ನು ಕಲಿತಿದ್ದರಂತೆ. ಇದೇ ಮುಂದೆ ಅವರ ವೃತ್ತಿಯಾಗಿ ಬದಲಾಯ್ತು. 

ಸುಮಯಾ, ಯೂತ್ ಕೌನ್ಸಿಲ್ ಸದಸ್ಯೆ ಆಗ್ತಿದ್ದಂತೆ ನನ್ನ ಕನಸಿನ ಕೆಲಸ ಸಿಕ್ಕಿದೆ ಎಂದು ತೃಪ್ತರಾಗಿದ್ದರಂತೆ. ತಮ್ಮ 15ನೇ ವಯಸ್ಸಿನಲ್ಲಿಯೇ ಇದಕ್ಕೆ ಪ್ರಯತ್ನ ಶುರು ಮಾಡಿದ್ದ ಅವರು 18ನೇ ವಯಸ್ಸಿನಲ್ಲಿ ಯುವ ಸಂಸತ್ತಿಗೆ ಬಂದಿದ್ದರು. ಆದರೆ ಆ ಕೆಲಸ ಮಾಡುವಾಗ ಅವರಿಗೆ ಸಂತೋಷ ಸಿಗ್ತಿರಲಿಲ್ಲ. ಕೋವಿಡ್ ಕೊನೆಗೊಂಡಾಗ ಅವರ ಕೆಲಸದ ವಿಧಾನ ಬದಲಾಗಿತ್ತು. ಇದು ಕೂಡ ಸುಮಯಾ ಕೆಲಸ ಬದಲಿಸಲು ಕಾರಣವಾಯ್ತು.  

ಹೊಸದನ್ನು ಪ್ರಯತ್ನಿಸಬೇಕು, ಹೊಸ ಕೌಶಲ್ಯ ಕಲಿಯಬೇಕು ಎಂದು ಸುಮಯಾ ನಿರ್ಧರಿಸಿದ್ದರು. ಯುಟ್ಯೂಬ್ ನಲ್ಲಿ ಕಲಿತ ಹೊಲಿಕೆಯನ್ನು ಮುಂದುವರಿಸುವ ತೀರ್ಮಾನಕ್ಕೆ ಬಂದಿದ್ದರು. ನಂತ್ರ ಸುಮಯಾ  ಹೊಲಿಗೆ ಯಂತ್ರವನ್ನು ಖರೀದಿಸಿದರು. ಅಲ್ಲದೆ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ಬಟ್ಟೆಗಳನ್ನು ತಯಾರಿಸಲು ಪ್ರಾರಂಭಿಸಿದರು.

ಅರ್ಧ ಹಾಸಿಗೆ ಅಪರಿಚಿತರಿಗೆ ನೀಡಿ, ಈಕೆ ಗಳಿಸ್ತಿದ್ದಾಳೆ ಹಣ! ಏನಿದು ಹೊಸ ಬ್ಯುಸಿನೆಸ್?

ಬರೀ ಇಷ್ಟೇ ಮಾಡಿ ಸುಮಯಾ ಕುಳಿತುಕೊಳ್ಳಲಿಲ್ಲ. ಬಟ್ಟೆ ತಯಾರಿಸುವ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದರು. ಶೀಘ್ರದಲ್ಲೇ ಅವರ ಅನುಯಾಯಿಗಳ ಸಂಖ್ಯೆ ಹೆಚ್ಚಾಯ್ತು. ಬಟ್ಟೆಯನ್ನು ಮಾರಾಟ ಮಾಡ್ತೀರಾ ಎಂದು ಜನರು ಕೇಳಲು ಪ್ರಾರಂಭಿಸಿದ್ರು. ವ್ಯಾಪಾರ ಬೆಳೆದಂತೆ  ಸುಮಯಾ, ತಯಾರಕರನ್ನು ಸಂಪರ್ಕಿಸಿ ಲಂಡನ್‌ನಲ್ಲಿ ಅಂಗಡಿಯನ್ನು ತೆರೆದರು. ಈಗ ಲಂಡನ್ ನಲ್ಲಿರುವ ಅಂಗಡಿಯನ್ನು ಮುಚ್ಚಲಾಗಿದೆ. ಆದ್ರೆ ಲೆವೆನ್‌ಶುಲ್ಮ್‌ನಲ್ಲಿ ಅಂಗಡಿಯಿದೆ. 

ಸುಮಯಾ ಕಂಪನಿಗೆ ಈಗ ಎರಡು ವರ್ಷ ತುಂಬಿದೆ. ಟಿಕ್‌ಟಾಕ್‌ನಲ್ಲಿ ಪ್ರಸಿದ್ಧಿ ಪಡೆದಿರುವ ಸುಮಯಾ 145 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅವರು ಟಿಕ್ ಟಾಕ್ ಮೂಲಕವೇ ತಮ್ಮ ಬಟ್ಟೆಯನ್ನು ನಿಮಿಷದಲ್ಲಿ ಮಾರಾಟ ಮಾಡ್ತಿದ್ದಾರೆ. 

click me!