ಜೀನ್ಸ್‌ ಆರ್ಡರ್ ಮಾಡಿದ್ರೆ ಒಂದು ಬ್ಯಾಗ್ ಈರುಳ್ಳಿ ಕಳಿಸಿದ ಫ್ಯಾಷನ್ ಸೈಟ್

By Anusha Kb  |  First Published Nov 18, 2022, 8:22 PM IST

ಇಲ್ಲೊಂದು ಕಡೆ ಮಹಿಳೆ ಎರಡು ಜೊತೆ ಜೀನ್ಸ್ ಪ್ಯಾಂಟ್ ಆರ್ಡರ್ ಮಾಡಿದರೆ ಪ್ಯಾಂಟ್ ಬದಲು ಒಂದು ಚೀಲ ತುಂಬಾ ಈರುಳ್ಳಿ ಮನೆ ಸೇರಿದೆ. ಬ್ರಿಟನ್‌ನಲ್ಲಿ ಈ ಘಟನೆ ನಡೆದಿದೆ. 


ಆನ್‌ಲೈನ್‌ ಮಾರುಕಟ್ಟೆಯಿಂದ ಅನೇಕರ ಜೀವನ ಶೈಲಿ ಸರಳವಾಗಿದೆ. ಹಲವರ ಸಮಯವೂ ಉಳಿಯುತ್ತಿದೆ. ಸ್ಮಾರ್ಟ್‌ಫೋನ್ ಜೊತೆ ಕೈಯಲ್ಲಿ ಕಾಸಿದ್ದರೆ ಸಾಕು, ಎಲ್ಲವೂ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಆದರೆ ಇದರಲ್ಲೂ ಕೆಲವೊಮ್ಮೆ ಲೋಪದೋಷಗಳು ಸಂಭವಿಸುತ್ತವೆ. ಆರ್ಡರ್ ಮಾಡಿದ ವಸ್ತುವಿನ ಬದಲು ಬೇರೇನೋ ನಿಮ್ಮ ಕೈ ಸೇರಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಮಹಿಳೆ ಎರಡು ಜೊತೆ ಜೀನ್ಸ್ ಪ್ಯಾಂಟ್ ಆರ್ಡರ್ ಮಾಡಿದರೆ ಪ್ಯಾಂಟ್ ಬದಲು ಒಂದು ಚೀಲ ತುಂಬಾ ಈರುಳ್ಳಿ ಮನೆ ಸೇರಿದೆ. ಬ್ರಿಟನ್‌ನಲ್ಲಿ ಈ ಘಟನೆ ನಡೆದಿದೆ. 

ಮಹಿಳೆಯೊಬ್ಬರು ಬ್ರಿಟಿಷ್ ಸೆಕೆಂಡ್ ಹ್ಯಾಂಡ್ ಫ್ಯಾಷನ್ ಸೈಟ್ ಡೆಪಾಪ್‌ನಲ್ಲಿ(Depop) ಎರಡು ಜೊತೆ ಜೀನ್ಸ್ ಪ್ಯಾಂಟ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಜೀನ್ಸ್‌ ಪ್ಯಾಂಟ್ ಬದಲಿಗೆ ಬ್ಯಾಗ್ (Bag) ತುಂಬಾ ಈರುಳ್ಳಿ ಡೆಲಿವರಿ ಆಗಿದೆ. ಇದನ್ನು ನೋಡಿ ಮಹಿಳೆ ದಂಗಾಗಿದ್ದು, ಈ ಬಗ್ಗೆ ದೂರು ನೀಡಲು ಮಹಿಳೆ ಮಾರಾಟಗಾರರನ್ನು ಸಂಪರ್ಕಿಸಿದ್ದರು. ಆದರೆ ಮಾರಾಟಗಾರರು ನನ್ನಂತೆ ಗೊಂದಲಕ್ಕೊಳಗಾದರು. ಅಲ್ಲದೇ ಜೀನ್ಸ್ ಪ್ಯಾಂಟ್ ಬದಲು ಈರುಳ್ಳಿ ಹೇಗೆ ಬಂತು ಎಂದು ಅವರು ದಂಗಾದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಡೈಲಿ ಮೇಲ್ (Daily Mail) ವರದಿ ಮಾಡಿದೆ. ಮಹಿಳೆ ಸಾಮಾಜಿಕ ಜಾಲತಾಣದಲ್ಲಿ(Social Media) ಈ ವಿಚಾರದ ಬಗ್ಗೆ ಪೋಸ್ಟ್ ಮಾಡಿದ್ದಾಳೆ. ಮಾರಾಗಾರನೊಂದಿಗಿನ ತನ್ನ ಸಂವಹನ ಸಂದೇಶದ ಸ್ಕ್ರೀನ್ ಶಾಟ್‌ನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ.

Latest Videos

undefined

ನನಗೇಕೆ ನಾನು ಬುಕ್ ಮಾಡಿದ ಜೀನ್ಸ್ (Jeans) ಬದಲು ಬ್ಯಾಗ್ ಫುಲ್ ಈರುಳ್ಳಿ(Onion) ಬಂದಿದೆ ಎಂದು ಪ್ರಶ್ನಿಸಿದ್ದಾಳೆ. ಈ ವೇಳೆ ತಾವು ಗೊಂದಲಕ್ಕೀಡಾಗಿದ್ದು ಈ ರೀತಿಯ ಆಡಚಣೆಗಾಗಿ ತಾವು ವಿಷಾದಿಸುವುದಾಗಿ ಮಾರಾಟಗಾರ ಸಂಸ್ಥೆ ಹೇಳಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ಆದರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿ ಆರ್ಡರ್‌ಗೂ ಒಂದು ಕೇಜಿ ಈರುಳ್ಳಿ ಫ್ರೀ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. 

ಆನ್‌ಲೈನ್‌ನಲ್ಲಿ ಡ್ರೋನ್ ಆರ್ಡರ್ ಮಾಡಿದವನಿಗೆ ಬಂತು ಒಂದು ಕೆಜಿ ಆಲುಗಡ್ಡೆ

ಇ-ಕಾರ್ಮರ್ಸ್‌ ಪ್ಲಾಟ್‌ಫಾರ್ಮ್‌ಗಳಿಂದಾಗಿ (E-commerce platforms) ಪ್ರಪಂಚದಾದ್ಯಂತ ಶಾಪಿಂಗ್ (Shopping) ಕಲ್ಪನೆಯೇ ಬದಲಾಗಿದೆ. ಇಂದು ಸಣ್ಣ ಸೂಜಿಯಿಂದ ಹಿಡಿದು ವಾಷಿಂಗ್ ಮೆಷಿನ್, ಫ್ರಿಡ್ಜ್‌ವರೆಗೆ ಅಕ್ಕಿಯಿಂದ ಹಿಡಿದು ಬಿರಿಯಾನಿಯವರೆಗೆ (Biriyani) ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿವೆ. ಮೊಬೈಲ್‌ನಲ್ಲಿ ಮಾಡುವ ಕೆಲವು ಕ್ಲಿಕ್‌ಗಳು ನಿಮಗೆ ಎಲ್ಲವನ್ನು ಮನೆ ಬಾಗಿಲಿಗೆ ತಲುಪಿಸಬಲ್ಲದು. ಆದರೆ ಇದರಲ್ಲೂ ಎಲ್ಲವೂ ಸರಿ ಇರುತ್ತದೆ ಎಂದು ಹೇಳಲಾಗದು ಕೆಲವೊಮ್ಮೆ ನಾವು ನೋಡಿದ ಗುಣಮಟ್ಟ ಒಂದು ರೀತಿ ಇದ್ದರೆ ನಮ್ಮನ್ನು ತಲುಪಿದ ವಸ್ತುವಿನ ಗುಣಮಟ್ಟ ತೀರಾ ಕಳಪೆಯಾಗಿರುವುದು. ಕೆಲವೊಮ್ಮೆ ಆರ್ಡರ್ ಮಾಡಿದ ವಸ್ತು ಒಂದಾದರೆ ಕೈ ಸೇರಿದಾಗ ಇನ್ನೇನೋ ಅಲ್ಲಿರುವುದು. ಇದು ಆನ್‌ಲೈನ್ ಮಾರ್ಕೆಟಿಂಗ್‌ನ ಕೆಲ ಅವಾಂತರಗಳಾಗಿದ್ದು, ಈ ಬಗ್ಗೆ ಆಗಾಗ ವರದಿಗಳು ಬರುತ್ತಿರುತ್ತವೆ. 

ಹೀಗೆಯೇ ಕೆಲದಿನ ಹಿಂದೆ ಆನ್‌ಲೈನ್‌ನಲ್ಲಿ ಲ್ಯಾಪ್‌ಟಾಪ್ (Laptop) ಆರ್ಡರ್ ಮಾಡಿದ ವ್ಯಕ್ತಿಗೆ ಡಿಟರ್ಜೆಂಟ್ ಬಾರ್‌ಗಳು ಬಂದಿತ್ತು. ಈ ವಿಚಾರ ಸಾಕಷ್ಟು ವೈರಲ್ ಆಗಿತ್ತು. ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್‌ ಡೇ ಸೇಲ್‌ನಲ್ಲಿ ಈ ಅವಾಂತರ ನಡೆದಿತ್ತು. ನಂತರ ಈ ಬಗ್ಗೆ ಕ್ಷಮೆಯಾಚಿಸಿದ ಸಂಸ್ಥೆ ಆ ವ್ಯಕ್ತಿಗೆ ಹಣ ರಿಫಂಡ್ ಮಾಡಿತ್ತು. ಹಾಗೆಯೇ ಅದಾದ ಬಳಿಕ ಬಿಹಾರದ ನಲಂದಾದ ವ್ಯಕ್ತಿಯೊಬ್ಬ ಆನ್‌ಲೈನ್‌ನಲ್ಲಿ ಡ್ರೋನ್ ಆರ್ಡರ್ ಮಾಡಿದ್ದರೆ, ಆತನಿಗೆ ಒಂದು ಕೇಜಿ ಆಲೂಗಡ್ಡೆ ಡೆಲಿವರಿಯಾಗಿತ್ತು.

Flipkart Big Billion Daysನಲ್ಲಿ ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್‌; ಬಂದಿದ್ದು ಡಿಟರ್ಜೆಂಟ್‌ ಸೋಪ್..!

ಬಿಹಾರದ ನಲಂದಾ ಜಿಲ್ಲೆಯ ಪರ್ವಾಲ್‌ಪುರದ ಚೇತನ್ ಕುಮಾರ್ ಎಂಬುವವರು ಹೀಗೆ ಆನ್‌ಲೈನ್‌ನಲ್ಲಿ ಡ್ರೋನ್ ಕ್ಯಾಮರಾ ಆರ್ಡರ್ ಮಾಡಿದ್ದರು. ಸಂಪೂರ್ಣ ನಗದನ್ನು ಆನ್‌ಲೈನ್‌ನಲ್ಲೇ ಪಾವತಿ ಮಾಡಿದ್ದರು. ನಂತರ ಡೆಲಿವರಿ ಏಜೆಂಟ್ (Delivery agent) ಇವರಿಗೆ ಕ್ಯಾಮರಾ ಪಾರ್ಸೆಲ್ ನೀಡಿದ್ದಾರೆ. ಆದರೆ ಈ ಪಾರ್ಸೆಲ್ ನೋಡಿದ ಕೂಡಲೇ ಚೇತನ್ ಅವರಿಗೆ ಸಂಶಯ ಬಂದಿದ್ದು, ಆತನ ಕೈಯಲ್ಲೇ ಈ ಪಾರ್ಸೆಲ್ ಬಾಕ್ಸ್ ಅನ್ನು ಒಪನ್ ಮಾಡಲು ಹೇಳಿದ್ದಾರೆ. ಅಲ್ಲದೇ ಡೆಲಿವರಿ ಬಾಯ್ ಪಾರ್ಸೆಲ್ ಒಪನ್ ಮಾಡುತ್ತಿರುವ ದೃಶ್ಯವನ್ನು ಅವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವೇಳೆ ಅವರಿಗೆ ಸೀಲ್‌ ಆಗಿದ್ದ ಬಾಕ್ಸ್ ಒಳಗೆ ಹತ್ತಿಪ್ಪತ್ತು ಬಾಟಾಟೆ ಇರುವುದು ಕಾಣಿಸಿದೆ. 
 

click me!