ಜೆಟ್‌ ಏರ್‌ವೇಸ್‌ನ 1000 ಮಂದಿ ಪೈಲಟ್‌ಗಳು ನಾಳೆಯಿಂದ ಗೈರು

Published : Mar 31, 2019, 10:25 AM IST
ಜೆಟ್‌ ಏರ್‌ವೇಸ್‌ನ 1000 ಮಂದಿ ಪೈಲಟ್‌ಗಳು ನಾಳೆಯಿಂದ ಗೈರು

ಸಾರಾಂಶ

ಜೆಟ್‌ ಏರ್‌ವೇಸ್‌ನ 1000 ಮಂದಿ ಪೈಲಟ್‌ಗಳು ಏ.1ರಿಂದ ಗೈರು| 4 ತಿಂಗಳಿನಿಂದ ಸಂಬಳ ಬಾರದ ಹಿನ್ನೆಲೆ ಮುಷ್ಕರ| ವಿಮಾನ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

ಮುಂಬೈ[ಮಾ.31]: ಖಾಸಗಿ ಸ್ವಾಮ್ಯದ ವಿಮಾನಯಾನ ಕಂಪನಿ ಜೆಟ್‌ ಏರ್‌ವೇಸ್‌ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗಲೇ, ಏ.1ರ ಸೋಮವಾರದಿಂದ ಕರ್ತವ್ಯದಿಂದ ದೂರ ಉಳಿಯಲು ಆ ಕಂಪನಿಯ ಬರೋಬ್ಬರಿ 1000 ಪೈಲಟ್‌ಗಳು ನಿರ್ಧರಿಸಿದ್ದಾರೆ. ಇದರಿಂದಾಗಿ ಜೆಟ್‌ ಏರ್‌ವೇಸ್‌ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯವಾಗುವ ಸಾಧ್ಯತೆ ಇದೆ.

ಪೈಲಟ್‌ಗಳು, ಎಂಜಿನಿಯರ್‌ಗಳು ಹಾಗೂ ಹಿರಿಯ ಮ್ಯಾನೇಜ್‌ಮೆಂಟ್‌ ಸಿಬ್ಬಂದಿಗೆ ಕಳೆದ 4 ತಿಂಗಳಿನಿಂದ ಸಂಬಳ ಪಾವತಿಯಾಗಿಲ್ಲ. ಮಾ.31ರೊಳಗೆ ಸಂಬಳ ಪಾವತಿಯಾಗದಿದ್ದರೆ ಹಾಗೂ ಪುನಶ್ಚೇತನ ಯೋಜನೆಯ ಕುರಿತು ಸ್ಪಷ್ಟತೆ ಸಿಗದಿದ್ದರೆ ಏ.1ರಿಂದ ಕರ್ತವ್ಯದಿಂದ ದೂರ ಉಳಿಯಲು ಜೆಟ್‌ ಏರ್‌ವೇಸ್‌ನ 1100 ಪೈಲಟ್‌ಗಳು ಸದಸ್ಯರಾಗಿರುವ ನ್ಯಾಷನಲ್‌ ಏವಿಯೇಟರ್ಸ್ ಗಿಲ್ಡ್‌ ನಿರ್ಧರಿಸಿತ್ತು. ಅದಾದ ಬಳಿಕ ಜೆಟ್‌ ಏರ್‌ವೇಸ್‌ ಆಡಳಿತ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಕೂಟದ ತೆಕ್ಕೆಗೆ ಹೋಗಿತ್ತು.

ಮಾ.29ರಂದು ಶುಕ್ರವಾರ ಬ್ಯಾಂಕುಗಳಿಂದ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿ ಪೈಲಟ್‌ಗಳು ಇದ್ದರು. ಬಾರದ ಕಾರಣ ಕರ್ತವ್ಯಕ್ಕೆ ಗೈರಾಗಲು ನಿರ್ಧರಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!