ಈ ವಿಮಾನ ನಿಲ್ದಾಣದಲ್ಲಿ 20ಕೆಜಿ ಚಿನ್ನ ಉಚಿತ!: ನೀವೇನು ಮಾಡ್ಬೇಕು?

Published : Mar 30, 2019, 04:33 PM IST
ಈ ವಿಮಾನ ನಿಲ್ದಾಣದಲ್ಲಿ 20ಕೆಜಿ ಚಿನ್ನ ಉಚಿತ!: ನೀವೇನು ಮಾಡ್ಬೇಕು?

ಸಾರಾಂಶ

ಈ ವಿಮಾನ ನಿಲ್ದಾಣದಲ್ಲಿ ಚಾಲೆಂಜ್ ಗೆದ್ದರೆ 20 ಕೆ. ಜಿ ಚಿನ್ನ ನಿಮ್ಮದು| ಸವಾಲು ಚಿಕ್ಕದು ಆದರೆ ಗೆಲ್ಲೋದು ಮಾತ್ರ ಕಷ್ಟ| ಆ ಚಾಲೆಂಜ್ ಏನು? ವಿಮಾನ ನಿಲ್ದಾಣ ಯಾವುದು? ಇಲ್ಲಿದೆ ವಿವರ

ದುಬೈ[ಮಾ.30]: ದುಬೈ ವಿಮಾನ ನಿಲ್ದಾಣದಲ್ಲಿ 'ಗೋಲ್ಡ್ ಬಾರ್ ಚಾಲೆಂಜ್[Gold Bar Challenge]' ಆರಂಭಿಸಲಾಗಿದೆ. ತಂತ್ರಗಾರಕೆಯ ಈ ಚಾಲೆಂಜ್ ನಲ್ಲಿ ಯಾವ ವ್ಯಕ್ತಿ ಬಾಕ್ಸ್ ನಲ್ಲಿರುವ 20ಕೆ. ಜಿ ಚಿನ್ನ ಹೊರ ತೆಗೆಯುತ್ತಾರೋ ಅದು ಅವರಿಗೆ ಸೇರುತ್ತದೆ. ಈ ಚಾಲೆಂಜ್ ನೋಡಲು ಬಹಳ ಸುಲಭವೆನಿಸುತ್ತದೆ. ಆದರೆ ಈವರೆಗೂ ಇದನ್ನು ಮಾಡಲು ಯಾರೊಬ್ಬರಿಂದಲೂ ಸಾಧ್ಯವಾಗಿಲ್ಲ. ವಿಮಾನ ನಿಲ್ದಾಣಕ್ಕೆ ಬಂದವರೆಲ್ಲಾ ಅವರೆಲ್ಲರೂ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈವರೆಗೆ ಒಬ್ಬರೂ ೀ ಚಾಲೆಂಜ್ ನಲ್ಲಿ ಯಶಸ್ವಿಯಾಗಿಲ್ಲ.

20 ಕೆ. ಜಿ ಚಿನ್ನ ಗೆಲ್ಲಲು ಹೀಗೆ ಮಾಡಬೇಕು

1. ಬಾಕ್ಸ್ ಒಂದರಲ್ಲಿ 20 ಕೆ. ಜಿ ಚಿನ್ನ ಇರಿಸಲಾಗಿದೆ. ಇದಕ್ಕೆ ಚಿಕ್ಕದೊಂದು ರಂಧ್ರ ಮಾಡಲಾಗಿದೆ. ಈ ಮೂಲಕ ಪೆಟ್ಟಿಗೆಯೊಳಗೆ ಕೈ ಹಾಕಿ ಚಿನ್ನದ ಬಿಸ್ಕೆಟ್ ಹೊರ ತೆಗೆಯಬೇಕು

2. ಒಂದು ವೇಳೆ ನೀವು ಈ ಚಿನ್ನದ ಗಟ್ಟಿಯನ್ನು ಹೊರ ತೆಗೆದರೆ ಅದು ನಿಮ್ಮದಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಹಲವಾರು ಮಂದಿ ಚಿನ್ನ ಹೊರತೆಗೆಯಲು ಯತ್ನಿಸುತ್ತಿರುವುದನ್ನು ನೋಡಬಹುದು. ಕೆಲವರು ಈ ಚಿನ್ನದ ಗಟ್ಟಿಯನ್ನು ಎತ್ತುವ ಪ್ರಯತ್ನ ಮಾಡಿದರೆ, ಮತ್ತೆ ಕೆಲವರು ಇದನ್ನೆತ್ತಲು ಯಶಸ್ವಿಯಾಗುತ್ತಾರೆ ಆದರೆ ರಂಧ್ರದಿಂದ ಹೊರ ತೆಗೆಯಲಾಗದೆ ಸೋಲೊಪ್ಪಿಕೊಳ್ಳುತ್ತಾರೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!