
ಬೆಂಗಳೂರು(ಅ.25): ವಿಪ್ರೋ ಸಂಸ್ಥೆ ಹೊಸದಾಗಿ ತನ್ನ ಕಂಪನಿ ಸೇರುವ ಉದ್ಯೋಗಿಗಳ ವೇತನವನ್ನು ವಾರ್ಷಿಕ 3.5 ಲಕ್ಷ ರೂ. ನಿಗದಿ ಮಾಡಿದೆ. ಈ ಮೊದಲು ಇದು 3.2 ಲಕ್ಷ ರೂ. ಇತ್ತು.
ಅದರಂತೆ ವಿಪ್ರೋ ಫ್ರೆಶರ್ಸ್ ವೇತನ ಇದೀಗ ತಿಂಗಳಿಗೆ 30 ಸಾವಿರ ರೂ. ಆಗಲಿದ್ದು, ಶಿಕ್ಷಣ ಮುಗಿಸಿ ಈಗಷ್ಟೇ ಇಂಡಸ್ಟ್ರಿಗೆ ಕಾಲಿಡುವವರಿಗೆ ಸಿಹಿ ಸುದ್ದಿಯಾಗಿ ಪರಿಣಮಿಸಿದೆ.
ಇದೇ ವೇಳೆ ಸಂಸ್ಥೆಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೊಸ ಕೋಡಿಂಗ್ ವ್ಯವಸ್ಥೆಯನ್ನು ಕೂಡ ವಿಪ್ರೋ ಜಾರಿಗೆ ತರಲಿದೆ. ಅಲ್ಲದೇ ಶೇ. 30 ರಷ್ಟು ಹೆಚ್ಚು ನೇಮಕಾತಿ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವಿಪ್ರೋ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್, ಪ್ರತಿಸ್ಪರ್ಧಿ ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್ ಕೂಡ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದ್ದು, ಅದರಂತೆ ರಾಷ್ಟ್ರೀಯ ಮಟ್ಟದ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಳ್ಳಲುಸಂಸ್ಥೆ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.