
ಸ್ಯಾನ್‌ಫ್ರಾನ್ಸಿಸ್ಕೋ(ಅ.25): ವಿಶ್ವದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಲ್ಸಾದ ತ್ರೈಮಾಸಿಕ ಲಾಭ ದುಪ್ಪಟ್ಟಾಗಿದೆ. ಟೆಲ್ಸಾ ಬಿಡುಗಡೆ ಮಾಡಿರುವ ತ್ರೈಮಾಸಿಕ ವರದಿಯಲ್ಲಿ ಕಂಪನಿಯ ನಿವ್ವಳ ಲಾಭ ಬರೋಬ್ಬರಿ 311.5 ಮಿಲಿಯನ್ ಯುಎಸ್ ಡಾಲರ್‌ಗೆ ತಲುಪಿದೆ.
ಸದ್ಯ ಟೆಲ್ಸಾ ಕಂಪನಿ ಒಟ್ಟು 6.8 ಬಿಲಿಯನ್ ಯುಎಸ್ ಡಾಲರ್ ಲಾಭ ಪಡೆದಿದ್ದು, ಇದು ಮುಂದಿನ ವರ್ಷದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಎಲೆಕ್ಟ್ರಿಕ್ ಕಾರು ಜನಪ್ರಿಯಗೊಳ್ಳುತ್ತಿರುವುದನ್ನು ಮನಗಂಡಿರುವ ಟೆಲ್ಸಾ ಅಮೆರಿಕ ಹೊರತುಪಡಿಸಿ ಯೂರೋಪ್ ಮತ್ತು ಚೀನಾದಲ್ಲೂ ಹೂಡಿಕೆ ಮಾಡಲು ನಿರ್ಧರಿಸಿದೆ.
ಯೂರೋಪ್ ಮತ್ತು ಚೀನಾದಲ್ಲಿ ಟೆಲ್ಸಾ ತನ್ನ ಘಟಕಗಳನ್ನು ತೆರೆಯಲು ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿರುವ ಟೆಲ್ಸಾ ಸಿಇಒ ಎಲಾನ್ ಮಸ್ಕ್, ಕಂಪನಿ ತನ್ನ ಹೊಸ ಕಾರು ಮಾಡೆಲ್ 3ಯನ್ನು ಯೂರೋಪ್ ಮತ್ತು ಚೀನಾದಲ್ಲಿ ಬಿಡುಗಡೆ ಮಾಡಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.