
ವಾಷಿಂಗ್ಟನ್(ಜ.19): ಅಮೆರಿಕನ್ನರೇನು ನೀರು ಕುಡಿದಂಗೆ ವೈನ್ ಕುಡಿತಾರೆ..ಅನ್ನೋದು ಸಾಮಾನ್ಯ ಅಭಿಪ್ರಾಯ. ಕೂತರೆ, ನಿಂತರೆ, ಎದ್ದರೆ, ಮಲಗಿದರೆ ಅಮೆರಿಕನ್ನರ ಕೈಯಲ್ಲಿ ವೈನ್ ಬಾಟಲ್ ಬೇಕು ಅನ್ನೋ ಜಮಾನಾ ಮುಗಿದಿದೆ.
ಹೌದು, ಕಳೆದ 25ವರ್ಷಗಳಲ್ಲೇ ಮೊದಲ ಬಾರಿ ಅಮೆರಿಕದಲ್ಲಿ ವೈನ್ ಬಳಕೆ ಪ್ರಮಾಣ ಕಡಿಮೆಯಾಗಿದ್ದು, ವೈನ್ ಉತ್ಪಾದಕರಲ್ಲಿ ಆತಂಕ ಮೂಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಇಂಡಸ್ಟ್ರಿ ಗ್ರೂಪ್ IWSR,ವೈನ್ ಬಳಕೆಯನ್ನು ಕಡಿಮೆ ಮಾಡಿರುವ ಅಮೆರಿಕನ್ನರು, ಸಿದ್ಧ ಕಾಕ್ಟೇಲ್ ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದೆ.
ಅದರಂತೆ ಬಿಯರ್ ಮಾರಾಟವೂ ಕುಂಠಿತಗೊಂಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಶೇ.2.3ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ ಎನ್ನಲಾಗಿದೆ.
ಪ್ರಮುಖ ಬಿಯರ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಬಡ್ವೈಸರ್ ಮಾರಾಟದಲ್ಲಿ ಶೇ.3.1ರಷ್ಟು ಕುಸಿತ ಕಂಡಿರುವುದು ಬಿಯರ್ ಕಂಪನಿಗಳಲ್ಲಿ ನಡುಕ ಹುಟ್ಟಿಸಿದೆ.
ಆದರೆ ಕ್ರಾಫ್ಟ್ ಬಿಯರ್ ಹಾಗೂ ನಾನ್ ಆಲ್ಕೋಹಾಲಿಕ್ ಬಿಯರ್ ಮಾರಾಟದಲ್ಲಿ ಕ್ರಮವಾಗಿ ಶೇ. 4.1 ಮತ್ತು ಶೇ.6.6ರಷ್ಟು ಹೆಚ್ಚಳವಾಗಿರುವುದು ಗಮನಾರ್ಹ.
ಬಿಯರ್ ಕುಡಿಯುವುದರಿಂದ ಕ್ರಿಯೆಟಿವಿಟಿ ಹೆಚ್ಚಾಗುತ್ತಂತೆ!
ಅದರಂತೆ ರೆಡಿ ಟು ಡ್ರಿಂಕ್ ಕ್ಯಾನ್‌ಗಳ ಮಾರಾಟದಲ್ಲಿ ಶೇ.50ರಷ್ಟು ಏರಿಕೆ ಕಂಡಿದ್ದು, ದೇಶದ ಯುವ ಪೀಳಿಗೆ ಸಾಂಪ್ರದಾಯಿಕ ಮದ್ಯ ಸೇವನೆಯಿಂದ ದೂರವಾಗುತ್ತಿರುವುದು ಸ್ಪಷ್ಟವಾಗಿ ಗೋಚರವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.