ಸಿಕ್ಕಿಂ ರಾಜ್ಯದ ಜನರು ಎಂದಿಗೂ ನೀಡಲ್ಲ Income Tax..

Published : Mar 14, 2023, 03:59 PM IST
ಸಿಕ್ಕಿಂ ರಾಜ್ಯದ ಜನರು ಎಂದಿಗೂ ನೀಡಲ್ಲ Income Tax..

ಸಾರಾಂಶ

ತೆರಿಗೆ ಪಾವತಿ ಎಂಬ ವಿಷ್ಯ ಬಂದಾಗ ತಲೆ ಬಿಸಿಯಾಗುತ್ತೆ. ಅದೆಷ್ಟೋ ಮಂದಿ ತೆರಿಗೆ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡ್ತಾರೆ. ಆದ್ರೆ ಈ ರಾಜ್ಯದಲ್ಲಿ ಜನರಿಗೆ ತೆರಿಗೆ ಕಟ್ಟುವ ಕಷ್ಟವಿಲ್ಲ. ಅವರಿಗೆ ಎಷ್ಟೇ ಸಂಬಳ ಬಂದ್ರೂ ತೆರಿಗೆ ಪಾವತಿಸಬೇಕಾಗಿಲ್ಲ.  

ತೆರಿಗೆ ಉಳಿಸೋಕೆ ಜನರು ಏನೆಲ್ಲ ಪ್ರಯತ್ನ ಮಾಡ್ತಾರೆ. ಅಲ್ಲಿ, ಇಲ್ಲಿ ಅಂತ ಹೂಡಿಕೆ ಮಾಡ್ತಾರೆ. ತೆರಿಗೆ ವಿಧಿಸದ ಪ್ರದೇಶದಲ್ಲಿ ಹೂಡಿಕೆ ಮಾಡುವ ಪ್ರಯತ್ನ ಮಾಡ್ತಾರೆ. ಆದಷ್ಟು ಆದಾಯವನ್ನು ಮರೆಮಾಚುವ ಮೂಲಕ ತೆರಿಗೆ ಉಳಿಸುವ ಪ್ರಯತ್ನ ನಡೆಸ್ತಾರೆ. ಒಂದ್ವೇಳೆ ನೀವು ಎಷ್ಟೇ ಸಂಪಾದನೆ ಮಾಡಿ, ಅದಕ್ಕೆ ತೆರಿಗೆ ಪಾವತಿಸಬೇಕಾಗಿಲ್ಲ ಎನ್ನುವ ನಿಯಮ ಬಂದ್ರೆ ಎಷ್ಟು ಖುಷಿಯಾಗುತ್ತೆ ಅಲ್ವಾ?. ಇಂಥ ರಾಜ್ಯವೊಂದು ನಮ್ಮ ದೇಶದಲ್ಲಿದೆ. ಯಸ್. ಅಲ್ಲಿನ ಮೂಲ ನಿವಾಸಿಗಳು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ನಾವಿಂದು ಆ ರಾಜ್ಯ ಯಾವುದು, ಹಾಗೆ ಅಲ್ಲೇಕೆ ಈ ನಿಯಮ ಜಾರಿಯಲ್ಲಿದೆ ಎಂಬುದನ್ನು ನಿಮಗೆ ಹೇಳ್ತೇವೆ.

ಇಲ್ಲಿನ ಮೂಲ ನಿವಾಸಿಗಳಿಗಿಲ್ಲ ತೆರಿಗೆ (Tax) ಹೊರೆ : ತೆರಿಗೆ ಪಾವತಿ ಮಾಡದ ರಾಜ್ಯವೆಂದ್ರೆ ಸಿಕ್ಕಿಂ. ಈಶಾನ್ಯ (Northeast) ರಾಜ್ಯದಲ್ಲಿ ವಿಶೇಷ ನಿಯಮ ಜಾರಿಯಲ್ಲಿದೆ. ಇಲ್ಲಿನ ಸ್ಥಳೀಯರ ಸಂಬಳ ಎಷ್ಟೇ ಇರಲಿ, ಆದರೆ ತೆರಿಗೆ ಕಟ್ಟಬೇಕಿಲ್ಲ. ಇಲ್ಲಿ ಆದಾಯ (Income) ತೆರಿಗೆ ಮಾತ್ರವಲ್ಲದೆ ಯಾವುದೇ ರೀತಿಯ ನೇರ ತೆರಿಗೆಯನ್ನು ಪಾವತಿಸುವಂತಿಲ್ಲ. ಆದ್ರೆ ಅವರಿಗೆ ಸರ್ಕಾರದಿಂದ ಎಲ್ಲ ಸೇವೆ ಲಭ್ಯವಿದೆ. 

BENGALURU: ಸಮೋಸಾ ಮಾರಿ ದಿನಕ್ಕೆ 12ಲಕ್ಷ ರೂ. ಗಳಿಸುತ್ತಿದ್ದಾರೆ ಈ ಮಹಿಳಾ ಉದ್ಯಮಿ!

ಯಾವ ಕಾಯ್ದೆಯಡಿ ಆದಾಯ ತೆರಿಗೆ ಪಾವತಿ ಮಾಡ್ಬೇಕು?  : ಭಾರತದಲ್ಲಿ ಆದಾಯ ತೆರಿಗೆ ಕಾಯಿದೆ 1961 ರ ಅಡಿಯಲ್ಲಿ, ಪ್ರತಿಯೊಬ್ಬ ನಾಗರಿಕನು ತನ್ನ ಆದಾಯಕ್ಕೆ ಅನುಗುಣವಾಗಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಸಿಕ್ಕಿಂನಲ್ಲಿ ಈ ಕಾಯ್ದೆ ಜಾರಿಯಾಗಿಲ್ಲ. ಭಾರತೀಯ ಸಂವಿಧಾನದ 372 (ಎಫ್) ಪ್ರಕಾರ, ಸಿಕ್ಕಿಂ ನಿವಾಸಿಗಳು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಸಿಕ್ಕಿಂನಲ್ಲಿ ವಾಸವಾಗಿರುವ ಎಲ್ಲರಿಗೂ ಈ ನಿಯಮ ಜಾರಿಯಾಗೋದಿಲ್ಲ. ಸಿಕ್ಕಿಂ ಮೂಲ ನಿವಾಸಿಗಳು ಮಾತ್ರ ತೆರಿಗೆಯಿಂದ ರಿಯಾಯಿತಿ ಪಡೆಯುತ್ತಾರೆ.  

ಸಿಕ್ಕಿಂ ಜನರಿಗೇಕೆ ತೆರಿಗೆ ಪಾವತಿ ಇಲ್ಲ : ಸಿಕ್ಕಿಂ ಮೊದಲು ಭಾರತದ ಭಾಗವಾಗಿರಲಿಲ್ಲ. ಭಾರತದ ಸ್ವಾತಂತ್ರ್ಯಕ್ಕೂ ಮುಂಚೆಯೇ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರು ಅವರು ಸಿಕ್ಕಿಂ ಮತ್ತು ಭೂತಾನ್ ಅನ್ನು ಹಿಮಾಲಯದ ರಾಜ್ಯಗಳನ್ನಾಗಿ ಮಾಡುವ ಬಗ್ಗೆ ಮಾತನಾಡಿದ್ದರು. 1950ರಲ್ಲಿ ಸಿಕ್ಕಿ – ಭಾರತ ಶಾಂತಿ ಮಾತುಕತೆ ನಡೆಯಿತು. ಸಿಕ್ಕಿಂ ಮೇಲೆ ಯಾವುದೇ ದಾಳಿ ನಡೆದ್ರೆ ಭಾರತ ಅದನ್ನು ರಕ್ಷಿಸುತ್ತದೆ ಎಂದು ಭರವಸೆ ನೀಡಲಾಯ್ತು. ಇದಕ್ಕೂ ಮುನ್ನ ಸಿಕ್ಕಿಂ ಕೂಡ ಭೂತಾನ್ ನಂತೆ ಪ್ರತ್ಯೇಕ ದೇಶವಾಗಿತ್ತು. ಸಿಕ್ಕಿಂಗೆ ಈ ಮೊದಲು ಸ್ವತಂತ್ರ್ಯ ಆಡಳಿತಗಾರರಿದ್ದರು. ಸಿಕ್ಕಿಂ 1975 ರಲ್ಲಿ ಭಾರತದ ಭಾಗವಾಯಿತು. ಭಾರತದಲ್ಲಿ 1949 ರಲ್ಲಿ ಮಾಡಿದ ತೆರಿಗೆ ನಿಯಂತ್ರಣ ನಿಯಮ ಅನ್ವಯವಾಗುತ್ತದೆ. ಆಗ ಸಿಕ್ಕಿಂ ಭಾರತಕ್ಕೆ ಸೇರಿರಲಿಲ್ಲ. 1975ರಲ್ಲಿ ಸಿಕ್ಕಿಂ ಭಾರತದ ಭಾಗವಾದ ಕಾರಣ ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ.

EPFO:ನಿವೃತ್ತಿ ಬಳಿಕ ಪ್ರತಿ ತಿಂಗಳು 7071ರೂ. ಪಿಂಚಣಿ ಪಡೆಯೋದು ಹೇಗೆ? ಇಪಿಎಫ್ ಕ್ಯಾಲ್ಕುಲೇಟರ್ ಬಳಕೆ ಹೇಗೆ?

ಸಿಕ್ಕಿಂನಲ್ಲಿ ಯಾವ ಆದಾಯ ತೆರಿಗೆ ನಿಯಮ ಜಾರಿಯಲ್ಲಿದೆ?: ಸಿಕ್ಕಿಂ ಭಾರತದ ರಾಜ್ಯವಾದ ಸಂದರ್ಭದಲ್ಲಿ ಸಿಕ್ಕಿಂ ಮೂಲ ನಿವಾಸಿಗಳು ಕೆಲ ನಿಯಮ ವಿಧಿಸಿದ್ದರು. ಅದ್ರಲ್ಲಿ ತೆರಿಗೆ ವಿನಾಯಿತಿ ಕೂಡ ಸೇರಿತ್ತು. ಸಿಕ್ಕಿಂನಲ್ಲಿ ವಿಭಾಗ 10 (26AAA) ಜಾರಿಯಲ್ಲಿದೆ. ಇಲ್ಲಿನ ನಿವಾಸಿಗಳು ತೆರಿಗೆ ಅಡಿಯಲ್ಲಿ ಬರೋದಿಲ್ಲ. 2008ರವರೆಗೆ ವಿಶೇಷ ನಾಗರಿಕ ಎಂಬ ಪ್ರಮಾಣಪತ್ರವನ್ನು ಹೊಂದಿರುವ ನಿವಾಸಿಗಳಿಗೆ ಮಾತ್ರ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಆದರೆ 2008 ರ ನಂತರ  ಸಿಕ್ಕಿಂನ ಎಲ್ಲಾ ಮೂಲ ನಿವಾಸಿಗಳನ್ನು ಅದರಲ್ಲಿ ಸೇರಿಸಲಾಯಿತು. 1975ರ ಮೊದಲಿನಿಂದಲೂ ಸಿಕ್ಕಿಂನಲ್ಲಿ ನೆಲೆಸಿರುವ ಕುಟುಂಬಸ್ಥರು ತೆರಿಗೆ ವಿನಾಯಿತಿ ಪಡೆಯುತ್ತಾರೆ. ಆದ್ರೆ ಸಿಕ್ಕಿಂ ಮೂಲ ನಿವಾಸಿ ಮಹಿಳೆ ಸಿಕ್ಕಿಂ ಮೂಲ ನಿವಾಸಿಯಲ್ಲದ ವ್ಯಕ್ತಿ ಜೊತೆ ಮದುವೆಯಾಗಿದ್ರೆ ತೆರಿಗೆ ವಿನಾಯಿತಿ ಸಿಗೋದಿಲ್ಲ. ಎಲ್ಲ ಈಶಾನ್ಯ ರಾಜ್ಯಗಳಿಗೂ ಆರ್ಟಿಕಲ್ 371A ಅಡಿಯಲ್ಲಿ ವಿಶೇಷ ಸ್ಥಾನಮಾನ ಸಿಕ್ಕಿದೆ. ಆದ್ರೆ ತೆರಿಗೆ ವಿನಾಯಿತಿ ಪಡೆದಿರುವ ಏಕೈಕ ರಾಜ್ಯವೆಂದ್ರೆ ಅದು ಸಿಕ್ಕಿಂ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ