ಎಲ್‌ಐಸಿಯಲ್ಲಿ ವಿಲೀನವಾಗಲಿದೆ ಈ ಬ್ಯಾಂಕ್..?

First Published Jun 27, 2018, 11:49 AM IST
Highlights

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್‌ನಲ್ಲಿನ ಬಹುಪಾಲು ಷೇರುಗಳನ್ನು ಖರೀದಿಸುವ ಮೂಲಕ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಬ್ಯಾಂಕಿಂಗ್‌ ವಲಯವನ್ನು ಪ್ರವೇಶಿಸುವ ಎಲ್ಲ ಸಾಧ್ಯತೆಗಳೂ ಇವೆ.
 

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್‌ನಲ್ಲಿನ ಬಹುಪಾಲು ಷೇರುಗಳನ್ನು ಖರೀದಿಸುವ ಮೂಲಕ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಬ್ಯಾಂಕಿಂಗ್‌ ವಲಯವನ್ನು ಪ್ರವೇಶಿಸುವ ಎಲ್ಲ ಸಾಧ್ಯತೆಗಳೂ ಇವೆ.

55,600 ಕೋಟಿ ರು. ವಸೂಲಾಗದ ಸಾಲದ ಹೊರೆ ಹೊತ್ತಿರುವ ಐಡಿಬಿಐ, ಕಳೆದ ಮೂರು ತಿಂಗಳಲ್ಲಿ 5663 ಕೋಟಿ ರು. ನಷ್ಟಅನುಭವಿಸಿದೆ. ಈ ಬ್ಯಾಂಕಿನಲ್ಲಿ ಈಗಾಗಲೇ ಎಲ್‌ಐಸಿ ಅತಿದೊಡ್ಡ ಷೇರುದಾರನಾಗಿದೆ. ಒಟ್ಟು ಷೇರುಗಳ ಪೈಕಿ ಶೇ.50ಕ್ಕಿಂತ ಅಧಿಕ ಪಾಲನ್ನು ಎಲ್‌ಐಸಿಗೆ ವಹಿಸುವ ಕುರಿತು ಮಾತುಕತೆ ಆರಂಭವಾಗಿದೆ.

ಒಂದು ವೇಳೆ ಈ ವ್ಯವಹಾರ ಕುದುರಿದರೆ, ಹೌಸಿಂಗ್‌ ಫೈನಾನ್ಸ್‌ ಹಾಗೂ ಮ್ಯೂಚುವಲ್‌ ಫಂಡ್‌ ವ್ಯವಹಾರದ ರೀತಿ ಐಡಿಬಿಐ ಬ್ಯಾಂಕ್‌ ಅನ್ನು ಎಲ್‌ಐಸಿ ತನ್ನ ಅಂಗ ಸಂಸ್ಥೆಯಾಗಿ ಇಟ್ಟುಕೊಳ್ಳಲಿದೆ. 23 ಸಾವಿರ ಕೋಟಿ ರು. ಮಾರುಕಟ್ಟೆಬಂಡವಾಳ ಹೊಂದಿರುವ ಐಡಿಬಿಐ ಬ್ಯಾಂಕ್‌, 20 ಸಾವಿರ ಕೋಟಿ ರು. ಮೌಲ್ಯದ ರಿಯಲ್‌ ಎಸ್ಟೇಟ್‌ ಆಸ್ತಿ ಹೊಂದಿದೆ. ವರ್ಷಾರಂಭದಲ್ಲಿ ಬ್ಯಾಂಕಿನ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ 10610 ಕೋಟಿ ರು. ನೀಡಿತ್ತು.

ಈ ನಡುವೆ, ಲಾಭದಲ್ಲಿರುವ ಎಲ್‌ಐಸಿಗೆ ನಷ್ಟದಲ್ಲಿರುವ ಐಡಿಬಿಐ ಬ್ಯಾಂಕ್‌ ಮಾಲೀಕತ್ವ ವಹಿಸುತ್ತಿರುವುದಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

click me!