ಈ ಟಾಪ್ 10 ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನವಿಲ್ಲ

First Published Jun 24, 2018, 8:30 PM IST
Highlights

ರಸ್ತೆ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಪ್ರತಿದಿನ ಸಾಮಾನ್ಯ. ಆದರೆ ವಿಮಾನ ಹಾರಾಟದಲ್ಲಿ ಅತಿ ಹೆಚ್ಚು ಟ್ರಾಫಿಕ್ ಇರುವ ರೂಟ್ ಯಾವುದು? ಉತ್ತರ ಗೊತ್ತಿಲ್ಲವೆ ಹಾಗಾದರೆ ಮುಂದೆ ಓದಿ..

ನವದೆಹಲಿ [ಜೂನ್.24] ರಸ್ತೆ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಪ್ರತಿದಿನ ಸಾಮಾನ್ಯ. ಆದರೆ ವಿಮಾನ ಹಾರಾಟದಲ್ಲಿ ಅತಿ ಹೆಚ್ಚು ಟ್ರಾಫಿಕ್ ಇರುವ ರೂಟ್ ಯಾವುದು? ಉತ್ತರ ಗೊತ್ತಿಲ್ಲವೆ ಹಾಗಾದರೆ ಮುಂದೆ ಓದಿ..

ಕೇಂದ್ರ ವಿಮಾನಯಾನ ಇಲಾಖೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು ಮುಂಬೈ-ದುಬೈ ಮಾರ್ಗದಲ್ಲಿ ಅತಿಹೆಚ್ಚು ವಿಮಾನ ಹಾರಾಟ ನಡೆಸಿದೆ ಎಂದು ತಿಳಿಸಿದೆ. ಬರೋಬ್ಬರಿ 2.5 ಮಿಲಿಯನ್ ಪ್ರಯಾಣಿಕರು 2017-18 ರ ಅವಧಿಯಲ್ಲಿ ಸಂಚಾರ ಮಾಡಿದ್ದಾರೆ. ಇವರಲ್ಲಿ ಹೆಚ್ಚಿನ ಪಾಲು ವಲಸೆ ಕಾರ್ಮಿಕರದ್ದು ಎಂಬ ಸತ್ಯವೂ ಗೊತ್ತಾಗಿದೆ.

10 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ಮುಂಬೈ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಯುಎಇ ಕಡೆಗೆ ಅತಿ  ಹೆಚ್ಚಿನ ಜನ ಸಂಚಾರ ಮಾಡಿದ್ದಾರೆ.

ಮುಂಬೈ-ದುಬೈ ನಂತರದ ಸ್ಥಾನವನ್ನು ದುಬೈ-ದೆಹಲಿ ಮಾರ್ಗ ಪಡೆದುಕೊಂಡಿದೆ. ನಂತರ ಕ್ರಮವಾಗಿ ದುಬೈ-ಕೊಚ್ಚಿ, ದೆಹಲಿ-ಬ್ಯಾಂಕಾಕ್, ದುಬೈ-ಹೈದರಾಬಾದ್ , ಲಂಡನ್ -ದೆಹಲಿ ಮಾರ್ಗ ಪಡೆದುಕೊಂಡಿದೆ. 7 ನೇ ಸ್ಥಾನದಲ್ಲಿ ಲಂಡನ್ -ಮುಂಬೈ ಇದ್ದರೆ ನಂತರ ದುಬೈ-ಚೆನ್ನೈ ಹಾಗೂ ಸಿಂಗಪುರ್-ಚೆನ್ನೈ ಮತ್ತು ಕೋಲಂಬೋ-ಚೆನ್ನೈ ಮಾರ್ಗಗಳಿವೆ

ಇನ್ನು ದೇಶಿಯ ಮಾರ್ಗದಲ್ಲಿ ಮುಂಬೈ-ದೆಹಲಿ ಮಾರ್ಗ ನಂಬರ್ 1 ಸ್ಥಾನ ಪಡೆದುಕೊಂಡಿದ್ದು 7 ಮಿಲಿಯನ್ ಪ್ರಯಾಣಿಕರ ಸಂಚಾರಕ್ಕೆ ಸಾಕ್ಷಿಯಾಗಿ ದಾಖಲೆ ಬರೆದಿದೆ.  ಬೆಂಗಳೂರು-ದೆಹಲಿ ಮತ್ತು ಬೆಂಗಳೂರು-ಮುಂಬೈ ನಂತರದ ಸ್ಥಾನ ಪಡೆದುಕೊಂಡಿವೆ.

click me!