DMart Shopping: ಸಾವಿರ ರೂ. ಶಾಪಿಂಗ್‌ಗೆ ಹೋಗಿ 3,000 ಬಿಲ್ ಕೊಟ್ಟುವುದು ಏಕೆ? ಶಾಪಿಂಗ್ ಮಾರ್ಟ್‌ಗಳ ಸೀಕ್ರೆಟ್ ರಿವೀಲ್!

Published : Oct 06, 2026, 05:27 PM IST
DMart

ಸಾರಾಂಶ

ಡಿಮಾರ್ಟ್‌ನಂತಹ ಸೂಪರ್ ಮಾರ್ಕೆಟ್‌ಗಳು ರಿಯಾಯಿತಿ ಮತ್ತು ಆಕರ್ಷಕ ಜೋಡಣೆಯ ಮೂಲಕ ಗ್ರಾಹಕರು ಅನಗತ್ಯ ವಸ್ತುಗಳನ್ನು ಖರೀದಿಸುವಂತೆ ಮಾಡುತ್ತವೆ. ಶಾಪಿಂಗ್‌ಗೆ ಮುನ್ನ ಪಟ್ಟಿ ಸಿದ್ಧಪಡಿಸಿಕೊಳ್ಳುವ ಮೂಲಕ ಮತ್ತು ಕೇವಲ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸುವ ಮೂಲಕ ಹಣವನ್ನು ಉಳಿಸಬಹುದು.

ನೀವು ಡಿಮಾರ್ಟ್‌ನಂತಹ ದೊಡ್ಡ ದೊಡ್ಡ ಶಾಪಿಂಗ್ ಸ್ಥಳಗಳಿಗೆ ಹೋದ ಸಂದರ್ಭದಲ್ಲಿ ನಿಮಗೆ ಅರಿವಿಗೆ ಬಾರದೆ ನಿಮ್ಮ ಬಿಲ್ ಮೊತ್ತ ಹೆಚ್ಚಾಗುತ್ತಾ? ರಿಸ್ಕೋಂಟ್ ಹೆಸರಿನಲ್ಲಿ ಹಣ ಉಳಿಸುವ ಜಾಲಕ್ಕೆ ಬೀಳದೆ ಶಾಪಿಂಗ್ ಮಾಡುವ ಸೂಪರ್ ಐಡಿಯಾಗಳು ಮತ್ತು ಸಲಹೆಗಳು ಇಲ್ಲಿದೆ ನೋಡಿ.

ಬಿಲ್ ಮೊತ್ತ ಹೆಚ್ಚಾಗುವುದು ಏಕೆ?

ನಿಮ್ಮ ತಿಂಗಳ ಬಂದ ಕೂಡಲೇ ನೀವು ಮನೆಗೆ ಬೇಕಾಗಿರುವ ವಸ್ತುಗಳನ್ನು ಪಟ್ಟಿಕೊಂಡು ಶಾಪಿಂಗ್‌ಗೆ ಹೋಗುತ್ತೀರಿ. ನಿಮಗೆ ಬೇಕಾದ ವಸ್ತುಗಳನ್ನು ಮಾತ್ರ ಖರೀದಿ ಮಾಡಿ. ಆಗ ಒಂದು ಸಾವಿರದ ಒಳಗೆ ಮುಗಿಸುತ್ತೀರಿ ಎಂದುಕೊಳ್ಳುತ್ತೀರಿ. ಆದರೆ ನೀವು, ಶಾಪಿಂಗ್ ಮುಗಿಸುವ ಅಂತ್ಯದ ವೇಳೆಗೆ 2 ರಿಂದ 3 ಸಾವಿರ ರೂಪಾಯಿ ಆಗುತ್ತದೆ.

ಅನೇಕ ಕುಟುಂಬಗಳು ಇದೇ ರೀತಿಯ ಸಂದರ್ಭವನ್ನು ಎದುರಿಸುತ್ತಾರೆ. ಇದಕ್ಕೆ ನೀವು ಡಿಮಾರ್ಟ್‌ಯಿಂದ ಮಾತ್ರ ಆಗ್ತಿದೆ ಎಂದು ಹೇಳುವುದು ಸರಿಯಲ್ಲ. ಏಕೆಂದರೆ ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ಗಳಲ್ಲಿ ಬೆಲೆ, ಉತ್ಪನಗಳನ್ನು ಜೋಡಿಸುವುದು, ರಿಯಾಯಿತಿ ಪ್ರದರ್ಶನ ಮತ್ತು ನಮ್ಮದೇ ಆದ ಶಾಪಿಂಗ್ ಅಭ್ಯಾಸಗಳನ್ನು ಬಳಸಿಕೊಂಡು ನಮಗೆ ಅಗತ್ಯಕ್ಕಿಂತ ಹೆಚ್ಚಿನದನ್ನು ಖರೀದಿಸುವಂತೆ ಮಾಡುತ್ತವೆ.

ಸೂಪರ್ ಮಾರ್ಕೆಟ್‌ಗಳು ಅನುಸರಿಸುವ ತಂತ್ರಗಳೇನು?

ಡಿಮಾರ್ಟ್ ಸೇರಿದಂತೆ ಹಲವು ಸೂಪರ್ ಮಾರ್ಕೆಟ್‌ಗಳು ಎವ್ರಿಡೇ ಲೋ ಪ್ರೈಸ್ ಎಂಬ ತಂತ್ರವನ್ನು ಅನುಸರಿಸುತ್ತವೆ. ಈ ಕಂಪನಿಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಶಾಪಿಂಕ್ ಮಾರ್ಟ್‌ಗಳಲ್ಲಿ ಹೊಸ ಆಫರ್, ರಿಯಾಯಿತಿ ನೀಡುವುದನ್ನ ಕಂಡ ಕೂಡಲೇ ಆ ವಸ್ತು ಸದ್ಯಕ್ಕೆ ಬೇಡ ಅಂದರೂ ಖರೀದಿ ಮಾಡುತ್ತೀರಿ. ಉದಾಹರಣೆ ನಿಮ್ಮ ಮನೆಯಲ್ಲಿ ಈಗಾಗಲೇ ಎರಡು ಸೋಪ್‌ಗಳು ಇದ್ದರೂ ಬೆಲೆ ಕಡಿಮೆ ಆಗಿದೆ ಅಂತ ಅಗತ್ಯವಿಲ್ಲ ಎಂದರೂ ಮತ್ತೆರಡು ಸೋಪ್ ಖರೀದಿ ಮಾಡುವುದು. ಈ ರೀತಿ ಮಾಡುವುದರಿಂದ ನಿಮ್ಮ ಬಿಲ್ ಮೊತ್ತ ಹೆಚ್ಚಾಗುತ್ತದೆ.

ಏಕೆಂದರೆ ನೀವು ಸೋಪ್ ಖರೀದಿ ಮಾಡುವ ವೇಳೆ 10 ರೂಪಾಯಿ ಉಳಿಸುವ ಭರದಲ್ಲಿ ಅನಗತ್ಯವಾಗಿ 100 ರೂಪಾಯಿ ಖರ್ಚು ಮಾಡುತ್ತೀರಿ. ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ನಿತ್ಯದ ವಸ್ತುಗಳನ್ನು ಖರೀದಿಸಲು ಹೋಗುತ್ತೀರಿ. ಆದರೆ ಜೊತೆಗೆ ಬಿಸ್ಕತ್, ಚಾಕೋಲೆಟ್, ಶಾಂಪು ಅಥವಾ ಬಟ್ಟೆ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಒಂದೇ ಸ್ಥಳದಲ್ಲಿ ನೋಡುತ್ತೀರಿ. ಇಷ್ಟು ವಸ್ತುಗಳನ್ನು ನೋಡಿದಾಗ ನಿಮಗೆ ಅಗತ್ಯವಿಲ್ಲ ಎಂದರೂ, ಹೆಚ್ಚುವರಿಯಾಗಿ ಒಂದು ವಸ್ತುವನ್ನು ಆದರೂ ಖರೀದಿ ಮಾಡುತ್ತೀರಿ. ಆದ ಬಿಲ್ ಹೆಚ್ಚಾಗುತ್ತದೆ.

ಶಾಪಿಂಗ್ ಮಾಡುವ ಮುನ್ನ ಪ್ಲ್ಯಾನ್ ಮಾಡಿ?

ನಿಮ್ಮ ಕೈಯಿಂದ ಹೆಚ್ಚು ವಸ್ತುಗಳನ್ನು ಖರೀದಿಸಿಲು ಸೂಪರ್ ಮಾರ್ಕೆಟ್ ಗಳು ಕೂಡ ಅದೇ ರೀತಿ ಜೋಡಿಸುತ್ತವೆ. ಏಕೆಂದರೆ ಅಂಗತಿ ವಿನ್ಯಾಸ ಹಾಗೂ ಪ್ರದರ್ಶನ ಗ್ರಾಹಕಾರ ಮೇಲೆ ನೇರವಾಗಿ ಬೀಳುತ್ತದೆ. ನೀವು ಆಫರ್, ಹೊಸ ವಸ್ತು ಮತ್ತು ರಿಯಾಯಿತಿಗಳನ್ನು ನೋಡಿದ ತಕ್ಷಣ ಖರೀದಿ ಮಾಡುತ್ತೀರಿ. ಇದನ್ನು ತಜ್ಞರು ಇಂಪಲ್ಸ್ ಬೈಯಿಂಗ್ ಎಂದು ಕರೆಯುತ್ತಾರೆ.

ಇದಕ್ಕೆ ಪರಿಹಾರ ಎಂದರೆ, ನೀವು ಮಾರ್ಟ್‌ಗೆ ಹೋಗುವ ಮುನ್ನ ನಿಮ್ಮ ಮೊಬೈಲ್‌ನಲ್ಲಿ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು. ತೀರ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪಟ್ಟಿಯಲ್ಲಿ ಇಲ್ಲದ ವಸ್ತುಗಳನ್ನು ಖರೀದಿ ಮಾಡಬೇಕು. ರಿಯಾಯಿತಿ ಇದೇ ಎಂಬ ಕಾರಣಕ್ಕೆ ಏನನ್ನು ಖರೀದಿಸಬೇಡಿ. ನಿಮ್ಮ ಮನೆಯಲ್ಲಿ ಮುಂದಿನ 30 ದಿನಗಳಲ್ಲಿ ಬಳಕೆ ಮಾಡದ ವಸ್ತುಗಳನ್ನು ಬಳಕೆ ಮಾಡದ ವಸ್ತುಗಳನ್ನು ಖರೀದಿ ಮಾಡಬೇಡಿ. ಅದರಲ್ಲೂ ಆಟಿಕೆ ಮತ್ತು ತಿಂಡಿಗಳನ್ನು, ವಿಶೇಷವಾಗಿ ಮಕ್ಕಳೊಂದಿಗೆ ಹೋದಾಗ ಖರೀದಿ ಮಾಡುವ ಮುನ್ನ ಯೋಚಿಸಿ.

ಹಣ ಉಳಿಸುವುದು ಎಂದರೆ, ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸುವುದು

ಮಾರ್ಟ್‌ಗಳಲ್ಲಿ ಖರೀದಿ ಮಾಡುವ ಸಂದರ್ಭದಲ್ಲಿ, ಡಿ ಮಾರ್ಟ್‌ನಲ್ಲಿ ನಿಜವಾದ ಉಳಿತಾಯ ಮಾಡಬೇಕು ಎಂದರೆ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿ ಮಾಡಿ. ಅನಗತ್ಯ ವಸ್ತುಗಳನ್ನು ಖರೀದಿ ಮಾಡುವುದನ್ನು ಬಿಟ್ಟು, ಕಡಿಮೆ ಬೆಲೆಗೆ ಸಿಗುತ್ತೆ ಅಂತ ಹೆಚ್ಚು ವಸ್ತುಗಳನ್ನು ಖರೀದಿಸಿ ಖರ್ಚು ಮಾಡಿ ಮಾಡಬೇಡಿ.

ಮಾರ್ಟ್‌ಗಳಿಗೆ ಹೋಗಿ ಖರೀದಿಸುವ ಮುನ್ನ ನಿಮ್ಮ ಸ್ಥಳೀಯ ಅಂಗಡಿ, ಆನ್ ಲೈನ್‌ನಲ್ಲಿ ನಿಜವಾದ ಬೆಲೆಯನ್ನು ತಿಳಿದು ಖರೀದಿ ಮಾಡಿ. 100 ರೂಪಾಯಿ ಖರ್ಚು ಮಾಡಿ 500 ರೂಪಾಯಿ ಹೆಚ್ಚುವರಿಯಗಿ ಖರ್ಚು ಮಾಡಿದರೆ ನೀವು ಏನು ಉಳಿತಾಯ ಮಾಡಲು ಸಾಧ್ಯವಿಲ್ಲ. ಮಾಸಿಕ ಬಜೆಟ್ ಮೀರದಂತೆ ಅಗತ್ಯ ವಸ್ತುಗಳನ್ನು ಖರೀದಿ ಮಾಡುವುದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಅನೇಕ ಲಾಭವನ್ನು ನೀಡುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಏರ್​ಟೆಲ್​ ಗ್ರಾಹಕರಿಗೆ ಗುಡ್​ನ್ಯೂಸ್​: Airtel IQ Gateway ಆರಂಭ- ಎಲ್ಲವೂ ಒಂದರಲ್ಲೇ; ಏನಿದು ಹೊಸತನ
ಕ್ರಿಕೆಟ್ ಪ್ರಿಯರಿಗೆ ಜಿಯೋ ಭರ್ಜರಿ ಆಫರ್, ಕೇವಲ 48 ರೂಪಾಯಿಗೆ ಪ್ರೀಮಿಯಂ ಗೇಮಿಂಗ್ ಪ್ಲಾನ್