ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಖಾಸಗಿ ಕಂಪನಿಯ ಉದ್ಯೋಗಿ ಯಾರು?

By Mahmad Rafik  |  First Published Sep 9, 2024, 11:38 AM IST

ಭಾರತದಲ್ಲಿ ತನ್ನ ಉದ್ಯೋಗಿಗಳಿಗೆ ಲಕ್ಷಾಂತರ ರೂಪಾಯಿಕ ಸಂಬಳ ನೀಡುವ ಹಲವು ಕಂಪನಿಗಳಿವೆ. ಆದ್ರೆ ಇಲ್ಲೊಂದು ತನ್ನ ಉದ್ಯೋಗಿಗೆ ಕೋಟಿ ಲೆಕ್ಕದಲ್ಲಿ ತಿಂಗಳಿಗೆ ಸಂಬಳ ನೀಡುತ್ತಿದೆ.


ನವದೆಹಲಿ: ಭಾರತದಲ್ಲಿರುವ ಖಾಸಗಿ ಕಂಪನಿಗಳು ತಮ್ಮ ಮ್ಯಾನೇಜ್ಮೆಂಟ್ ಲೆವಲ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಸಂಬಳವನ್ನು ನೀಡುತ್ತಿವೆ. ಅದಾನಿ ಕಂಪನಿಯ ಕೆಲ ಉದ್ಯೋಗಿಗಳು ವಾರ್ಷಿಕ ಕೋಟಿ ಕೋಟಿ ಪ್ಯಾಕೇಜ್ ಪಡೆಯುತ್ತಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳ  ಹುದ್ದೆ ಮತ್ತು ಕೆಲಸ ಮಾಡುವ ಸಾಮಾರ್ಥ್ಯ ನಿಗಧಿಯಾಗುತ್ತದೆ. ಆದ್ದರಿಂದ ಸಂಬಳ ಹೆಚ್ಚಾಗಿಯೇ ಇರುತ್ತದೆ. ಹಾಗಾದ್ರೆ ಭಾರತದ ಖಾಸಗಿ ಕಂಪನಿಗಳಲ್ಲಿ ಅತ್ಯಧಿಕ ಸಂಬಳ ಪಡೆಯುವ ಉದ್ಯೋಗಿ ಯಾರು ಮತ್ತು ಆ ವ್ಯಕ್ತಿಗೆ ಸಿಗುವ ಹಣ ಎಷ್ಟು ಎಂಬುದರ ಕುರಿತು  ಮಾಹಿತಿ ಹೊರಬಂದಿದೆ. ಆ ಉದ್ಯೋಗಿ ಪಡೆಯುವ ಸಂಬಳ ಕೇಳಿದರೆ ಒಂದು ಕ್ಷಣ ಎಲ್ಲರೂ ಶಾಕ್ ಆಗುತ್ತಾರೆ. ಅಷ್ಟು ದೊಡ್ಡ ಮೊತ್ತದ ಸಂಬಳ ನೀಡುವ ಕಂಪನಿ ಯಾವುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ಟಾಟಾ ಸನ್ಸ್ ಚೇರ್‌ಮ್ಯಾನ್ ಎನ್.ಚಂದ್ರಶೇಖರನ್ ಅತಿ ಹೆಚ್ಚು ಸಂಬಳ ಪಡೆಯುವ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಎನ್.ಚಂದ್ರಶೇಖರನ್ ಅವರು ಟಾಟಾ ಸಂಸ್ಥೆಯ ಹೆಡ್ ಅಂತಾನೇ ಗುರುತಿಸಿಕೊಳ್ಳುತ್ತಾರೆ. ಟಾಟಾ ಸಂಸ್ಥೆಯ ಚೀಫ್ ಸ್ಥಾನದಲ್ಲಿರುವ ಎನ್.ಚಂದ್ರಶೇಖರನ್ ಸಂಬಳ ಕೇಳಿದ್ರೆ  ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಟಾಟಾ ಸನ್ಸ್‌, ಟಾಟಾ ಗ್ರೂಪ್‌ನ ಹೋಲ್ಡಿಂಗ್ ಕಂಪನಿಯಾಗಿದೆ.

Latest Videos

undefined

ಟಾಟಾ ಸನ್ಸ್  2023-24ನೇ ಆರ್ಥಿಕ ವರ್ಷದ ನಿವ್ವಳ ಲಾಭದ ಶೇ.74ರಷ್ಟು ಏರಿಕೆಯಾಗಿದೆ. ಕಳೆದ ಆರ್ಥಿಕ ವರ್ಷದ ನಿವ್ವಳ ಲಾಭ 49,000  ಕೋಟಿ ರೂಪಾಯಿ ಆಗಿದೆ. ಟಾಟಾ ಸನ್ಸ್ ಕಂಪನಿಯ ವಾರ್ಷಿಕ ವರದಿ ಪ್ರಕಾರ, 2023-24ನೇ ಸಾಲಿನಲ್ಲಿ ಎನ್.ಚಂದ್ರಶೇಖರನ್ ಅವರಿಗೆ ವಾರ್ಷಿಕ 135 ಕೋಟಿ ರೂಪಾಯಿಯ ಪ್ಯಾಕೇಜ್ ನೀಡಲಾಗಿದೆ. ಇದು 2022-23ಕ್ಕಿಂತ ಶೇ.20ರಷ್ಟು ಅಧಿಕವಾಗಿದೆ. ಎನ್‌.ಚಂದ್ರಶೇಖರನ್ ಭಾರತದ ಖಾಸಗಿ ಕಂಪನಿಯಲ್ಲಿ ಅತ್ಯಧಿಕ ಸಂಬಳ ಪಡೆಯುವ ಪ್ರೊಫೆಷನಲ್ ಚೀಫ್ ಆಗಿದ್ದಾರೆ.

ಗುಪ್ತಾಂಗದಿಂದ ಅನರ್ಹಗೊಂಡ ಅಥ್ಲೀಟ್‌ಗೆ ಪೋರ್ನ್ ವೆಬ್‌ಸೈಟ್‌ನಿಂದ ಬಿಗ್ ಆಫರ್!

ಟಾಟಾ ಸನ್ಸ್ ವರದಿ ಪ್ರಕಾರ, ಎನ್.ಚಂದ್ರಶೇಖರನ್ 121.5 ಕೋಟಿ ರೂಪಾಯಿ ಕಮಿಷನ್ ಗಳಿಸಿದ್ದಾರೆ. ಇನ್ನುಳಿದಿದ್ದು ಚಂದ್ರಶೇಖರನ್ ಪಡೆದ  ಸಂಬಳ ಮತ್ತು ಭತ್ಯೆ ಸೇರಿದೆ. ಆರ್ಥಿಕ ವರ್ಷ-2024ರಲ್ಲಿ ಎನ್.ಚಂದ್ರಶೇಖರನ್  ಮಾಸಿಕವಾಗಿ 11.2 ಕೋಟಿ ರೂಪಾಯಿಗೂ ಅಧಿಕ ಸಂಬಳ ಪಡೆಯುತ್ತಿದ್ದಾರೆ. ಇನ್ನೊಂದು ವಿಷಯ ಅಂದ್ರೆ ಈ ವರ್ಷ ಚಂದ್ರಶೇಖರನ್ ಸಂಬಳದಲ್ಲಿ ಶೇ.20ರಷ್ಟು ಏರಿಕೆಯಾಗಿದೆ.

ಯಾರು ಈ ಎನ್.ಚಂದ್ರಶೇಖರನ್?
ಎನ್ ಚಂದ್ರಶೇಖರನ್ ಅವರು 1987ರಲ್ಲಿ ಟಾಟಾ ಗ್ರೂಪ್ ಕಂಪನಿ ಟಿಸಿಎಸ್‌ಗೆ ಟ್ರೈನಿಯಾಗಿ ಸೇರಿದ್ದರು. ನಂತರ ಅಕ್ಟೋಬರ್ 2016 ರಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರ್ಪಡೆಗೊಂಡ ಎನ್.ಚಂದ್ರಶೇಖರನ್, ಜನವರಿ 2017ರಲ್ಲಿ ಅಧ್ಯಕ್ಷರಾದರು. ಚಂದ್ರಶೇಖರನ್ ಅವರು ಟಾಟಾ ಕುಟುಂಬೇತರ ಸದಸ್ಯರಾಗಿರುವ ಈ ಗುಂಪಿನ ಮೊದಲ ಅಧ್ಯಕ್ಷರಾಗಿದ್ದಾರೆ. ಅವರು 2027 ರವರೆಗೆ ಟಾಟಾ ಸನ್ಸ್ ಅಧ್ಯಕ್ಷರಾಗಿರಲಿದ್ದಾರೆ.

ಅದಾನಿ ಒಡೆತನದ ಈ ಕಂಪನಿಯ ನೌಕರನ ತಿಂಗಳ ಸಂಬಳ 10 ಲಕ್ಷ ರೂ: ಇಲ್ಲಿ ಕೆಲಸ ಸಿಕ್ರೆ ಸ್ವರ್ಗಕ್ಕೆ ಮೂರೇ ಗೇಣು!

click me!