ಕೆಲ ವರ್ಷದಲ್ಲಿ ಮಸ್ಕ್ ವಿಶ್ವದ ಮೊದಲ ಟ್ರಿಲೇನಿಯರ್, ಗೌತಮ್ ಅದಾನಿಗೆ 2ನೇ ಸ್ಥಾನ: ಅಧ್ಯಯನ ವರದಿ!

By Chethan Kumar  |  First Published Sep 8, 2024, 7:39 PM IST

ಕೆಲವೇ ಕೆಲವು ವರ್ಷದಲ್ಲಿ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಆದಾಯ ದುಪ್ಪಟ್ಟಾಗಲಿದೆ. ಈ ಮೂಕ ವಿಶ್ವದ ಮೊದಲ ಟ್ರಿಲೇನಿಯರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ವಿಶೇಷ ಅಂದರೆ ಈ ಟ್ರಿಲೇನಿಯರ್ ಪಟ್ಟಿಯಲ್ಲಿ 2ನೇ ಸ್ಥಾನ ಗೌತಮ್ ಅದಾನಿ ಅಲಂಕರಿಸಲಿದ್ದಾರೆ ಎಂದು ವರದಿ ಹೇಳಿದೆ.


ಲಂಡನ್(ಸೆ.08) ವಿಶ್ವದ ಶ್ರೀಮಂತ ವ್ಯಕ್ತಿಗಳ ಆದಾಯ ಪ್ರತಿ ವರ್ಷ ದುಪ್ಪಟ್ಟಾಗುತ್ತಲೇ ಹೋಗಿದೆ. ಸದ್ಯ ಟೆಸ್ಲಾ, ಸ್ಪೆಸ್ ಎಕ್ಸ್, ಎಕ್ಸ್ ಸೇರಿದಂತೆ ಹಲವು ಉದ್ಯಮಗಳ ಮಾಲೀಕ ಎಲಾನ್ ಮಸ್ಕ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಭಾರತದ ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಕೆಲ ವ್ಯಕ್ತಿಗಳು ಈ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಇನ್‌ಫೊರ್ಮಾ ಕನೆಕ್ಟ್ ಅಕಾಡೆಮಿ ವರದಿ ಕೆಲ ಸ್ಫೋಟಕ ಮಾಹಿತಿ ಪ್ರಕಟಿಸಿದೆ. ಈ ಅಕಾಡೆಮಿ ವರದಿ ಪ್ರಕಾರ ಎಲಾನ್ ಮಸ್ಕ್ ಆಸ್ತಿ ಕೆಲವೇ ವರ್ಷದಲ್ಲಿ ಊಹೆಗೂ ಮೀರಿ  ವೃದ್ಧಿಸಲಿದೆ. ಪರಿಣಾಮ ಎಲಾನ್ ಮಸ್ಕ್ ಜಗತ್ತಿನ ಮೊದಲ ಟ್ರಿಲೇನಿಯರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮತ್ತೊಂದು ವಿಶೇಷ ಅಂದರೆ ಈ ಟ್ರಿಲೇನಿಯರ್ ಪಟ್ಟಿಯಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ 2ನೇ ಸ್ಥಾನ ಅಲಂಕರಿಸಲಿದ್ದಾರೆ ಎಂದು ಇದೇ ಲಂಡನ್ ಮೂಲದ ಇನ್‍‌ಫೊರ್ಮಾ ಕೆನೆಕ್ಟ್ ಅಕಾಡೆಮಿ ಅಧ್ಯಯನ ವರದಿಯಲ್ಲಿ ಹೇಳಿದೆ.

ಟ್ರಿಲೇನಿಯರ್ ಆಸ್ತಿ. ಅಂದರೆ ಭಾರತ 3 ಟ್ರಿಲಿಯನ್ ಆರ್ಥಿಕತೆಯಿಂದ ಇದೀಗ 5 ಟ್ರಿಲಿಯನ್ ಆರ್ಥಿಕತೆಯತ್ತ ದಾಪುಗಾಲಿಡುತ್ತಿದೆ. ಇದು ಭಾರತದ ಒಟ್ಟು ಆರ್ಥಿಕತೆ. ಆದರೆ 2027ರ ಹೊತ್ತಿಗೆ ಎಲಾನ್ ಮಸ್ಕ್ ಆಸ್ತಿ 1 ಟ್ರಿಲಿಯನ್. ಕಾರಣ ಎಲಾನ್ ಮಸ್ಕ್ ಆಸ್ತಿ ಪ್ರತಿ ವರ್ಷ ಶೇಕಡಾ 110ರಷ್ಟು ಹೆಚ್ಚಾಗುತ್ತಿದೆ. ಸದ್ಯ ಎಲಾನ್ ಮಸ್ಕ್ ಒಟ್ಟು ಆಸ್ತಿ ಬ್ಲೂಮ್‌ಬರ್ಗ್ ಇಂಡೆಕ್ಸ್ ಪ್ರಕರಾ 251 ಬಿಲಿಯನ್ ಅಮೆರಿಕನ್ ಡಾಲರ್. 

Tap to resize

Latest Videos

undefined

ಅಡ್ಮಿಷನ್ ನಿರಾಕರಿಸಿದ ಕಾಲೇಜಿನಲ್ಲೇ ಶಿಕ್ಷಕರ ದಿನಾಚರಣೆಗೆ ಉಪನ್ಯಾಸ ನೀಡಿದ್ದ ಗೌತಮ್ ಅದಾನಿ!

ಟ್ರಿಲಿಯನ್ ಡಾಲರ್ ಕ್ಲಬ್ ಅನ್ನೋ ವರದಿಯನ್ನು ಅಕಾಡೆಮಿ ಪ್ರಕಟಿಸಿದೆ. ಎಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನ್ ಆಸ್ತಿ ಹೊಂದಿದ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಎಂದಿದೆ. ಇನ್ನು ಈ ಪಟ್ಟಿಯಲ್ಲಿ ಗೌತಮ್ ಅದಾನಿ 2ನೇ ಸ್ಥಾನ ಪಡೆಯಲಿದ್ದಾರೆ ಎಂದಿದೆ. ಗೌತಮ್ ಅದಾನಿ 2028ರ ವೇಳೆ ಟ್ರಿಲಿಯನ್ ಆಸ್ತಿ ಹೊಂದಲಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಲಿದ್ದಾರೆ. ಇದಕ್ಕೆ ಅಕಾಡಮೆ ಅಧ್ಯಯನ ವರದಿ ಕಾರಣವನ್ನೂ ನೀಡಿದೆ. ಸದ್ಯ ಗೌತಮ್ ಅದಾನಿ ಆಸ್ತಿ ವರ್ಷದಲ್ಲಿ ಶೇಕಡಾ 123ರಷ್ಟು ಏರಿಕೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅದಾನಿ ಮಾಡಿರುವ ಸಾವಿರಾರೂ ಕೋಟಿ ರೂಪಾಯಿ ಹೂಡಿಕೆಯ ಪ್ರತಿಫಲ 2025ರಿಂದ ಆದಾಯದ ರೂಪದಲ್ಲಿ ಅದಾನಿ ಕೈಸೇರಲಿದೆ ಎಂದು ವರದಿ ಹೇಳುತ್ತಿದೆ.

2025ರಿಂದ 2028ರ ವೇಳೆಗೆ ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಲಿದ್ದಾರೆ ಎಂದಿದೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಇಂಡೋನೇಷಿಯಾದ ಉದ್ಯಮ ಸಾಮ್ರಾಟ ಜೆನ್ಸೆನ್ ಹ್ಯೂಯಾಂಗ್ ಅಲಂಕರಿಸಲಿದ್ದಾರೆ ಎಂದಿದೆ. ಇನ್ನು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ 2030ರ ವೇಳೆ ಟ್ರಿಲೇನಿಯರ್ ಆಗಿ ಹೊರಹೊಮ್ಮಲಿದ್ದಾರೆ ಎಂದಿದೆ.

ಹಲವರ ನಡುಗಿಸಿದ ಗೌತಮ್ ಅದಾನಿ ನಿರ್ಧಾರ, 8,388 ಕೋಟಿ ರೂಗೆ 3 ಕಂಪನಿ ಖರೀದಿಗೆ ತಯಾರಿ!
 

click me!