ನೀವು ಕ್ರಾಸ್ ಬಾರ್ ಇಲ್ಲದೇ 60 ನಿಮಿಷ ನಿಮ್ಮ ಸಾಮಾರ್ಥ್ಯ ಪ್ರದರ್ಶಿಸಿದ್ರೆ ಲೈಂಗಿಕ ಚಟುವಟಿಕೆಯ ಪ್ರೇಮಿಯಾಗಿ 2.5 ಲಕ್ಷ ಡಾಲರ್ (ಅಂದಾಜು 2.09 ಕೋಟಿ ರೂ) ನೀಡಲು ಸಿದ್ಧನಿದ್ದೇನೆ.

ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅನರ್ಹಗೊಂಡಿರುವ ಫ್ರಾನ್ಸ್ ಅಥ್ಲೀಟ್ ಅಂಥೋನಿ ಅಮ್ಮಿರತಿ ಪೋರ್ನ್ ವೆಬ್‌ಸೈಟ್ 2.09 ಕೋಟಿ ರೂಪಾಯಿ ಬಿಗ್ ಆಫರ್ ನೀಡಿದೆ ಎಂದು ವರದಿಯಾಗಿದೆ. ಅಂಥೋನಿ ಅಮ್ಮಿರತಿ ಪೋಲ್‌ವಾಲ್ಟ್ ಅಥ್ಲೀಟ್‌ ಆಗಿದ್ದು, ಕ್ವಾಲಿಫೈರ್‌ ಆಟದಲ್ಲಿ ಅನರ್ಹಗೊಂಡಿದ್ದಾರೆ. ಅಮ್ಮಿರತಿ ಆಟ ಆಡುವಾಗ ಪೋಲ್‌ ಬಾರ್‌ಗೆ ಅವರ ಗುಪ್ತಾಂಗ ತಾಗಿದ್ದರಿಂದ ಆಟದಿಂದ ಅನರ್ಹಗೊಂಡಿದ್ದರು. ಅಂಥೋನಿ ಅಮ್ಮಿರತಿ ಅನರ್ಹಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಪೋರ್ನ್ ವೆಬ್‌ಸೈಟ್‌ನಿಂದ ಕೋಟಿ ಕೋಟಿಯ ಆಫರ್ ಬಂದಿದೆ ಎಂದು ಟಿಎಂಝಡ್‌ ಸ್ಪೋರ್ಟ್ಸ್ ವರದಿ ಮಾಡಿದೆ.

ಫ್ರಾನ್ಸ್ ಮೂಲದ 21 ವರ್ಷದ ಅಂಥೋನಿ ಅಮ್ಮಿರತಿ ಮಂಗಳವಾರ ಆಟದಿಂದ ಅನರ್ಹಗೊಂಡಿದ್ದರು. ಪೋಲ್‌ವಾಲ್ಟ್ ಮೊದಲೆರಡು ಜಿಗಿತಗಳನ್ನು ಕ್ರಮವಾಗಿ 5.40 ಮೀಟರ್ ಮತ್ತು 5.60 ಮೀಟರ್ ಎತ್ತರದಲ್ಲಿ ಜಿಗಿದಿದ್ದರು. ಮೂರನೇ ಪ್ರಯತ್ನದಲ್ಲಿ 5.70 ಮೀಟರ್ ಜಿಗಿದಿದ್ದರು. ಆದ್ರೆ ಈ ವೇಳೆ ಅಂಥೋನಿ ಅಮ್ಮಿರತಿ ಗುಪ್ತಾಂಗ ಪೋಲ್‌ಬಾರ್‌ಗೆ ತಾಗಿದ್ದರಿಂದ ಪದಕ ಗೆಲ್ಲುವ ಆಸೆಗೆ ಕಮರಿತ್ತು. 

ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಕಾಮ್‌ಸೊಡಾ ಜಾಲತಾಣದ ಉಪಾಧ್ಯಕ್ಷ ಡರೈನ್ ಪಾರ್ಕರ್, ಈಗಾಗಲೇ ಎಲ್ಲರೂ ನಿಮ್ಮ ಸೊಂಟದ ಕೆಳಗಿನ ಪ್ರದರ್ಶನವನ್ನು ನೋಡಿದ್ದಾರೆ. ನಾನು ನಿಮಗೆ ಸೊಂಟದ ಕೆಳಗಿನ ಪ್ರದರ್ಶನಕ್ಕೆ ಪ್ರಶ್ತಿ ನೀಡುವೆ. ನೀವು ಕ್ರಾಸ್ ಬಾರ್ ಇಲ್ಲದೇ 60 ನಿಮಿಷ ನಿಮ್ಮ ಸಾಮಾರ್ಥ್ಯ ಪ್ರದರ್ಶಿಸಿದ್ರೆ ಲೈಂಗಿಕ ಚಟುವಟಿಕೆಯ ಪ್ರೇಮಿಯಾಗಿ 2.5 ಲಕ್ಷ ಡಾಲರ್ (ಅಂದಾಜು 2.09 ಕೋಟಿ ರೂ) ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಜಪಾನ್ ಪೋಲ್‌ವಾಲ್ಟ್ ಅಥ್ಲೀಟ್‌ ಹಿರೊಕಿ ಒಗಟಾ ಸಹ ಇದೇ ರೀತಿಯಾಗಿ ಅನರ್ಹಗೊಂಡಿದ್ದರು.

ನೀವು ಕಾಮ್‌ಸೊಡಾನಲ್ಲಿ ಸರಳವಾಗಿ ಚಿನ್ನ ಗೆಲ್ಲಬಹುದು. ನೀವು ಈ ಚಿನ್ನಕ್ಕಾಗಿ ಶಾರ್ಟ್ಸ್ ಸಹ ಧರಿಸಬೇಕಾಗಿಲ್ಲ. ನಿಮ್ಮಲ್ಲಿರುವ ಎಲ್ಲವನ್ನೂ ನಮಗೆ ತೋರಿಸಿದ್ರೆ ಸಾಕು. ಕ್ಯಾಮೆರಾ ಮುಂದೆ ನಿಮ್ಮ ಪುರುಷತ್ವವನ್ನು ಪ್ರದರ್ಶನ ಮಾಡಬೇಕು ಎಂದು ಕಾಮ್‌ಸೊಡಾ ಜಾಲತಾಣದ ಉಪಾಧ್ಯಕ್ಷ ಡರೈನ್ ಪಾರ್ಕರ್ ಹೇಳಿದ್ದಾರೆ. ಈ ಘಟನೆ ಬಳಿಕ ಅಂಥೋನಿ ಅಮ್ಮಿರತಿಗೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಗೂಗಲ್‌ನಲ್ಲಿಯೂ ಜನರು ಅಂಥೋನಿ ಅಮ್ಮಿರತಿನ್ನು ಹುಡುಕಾಡುತ್ತಿದ್ದಾರೆ.

ಕನಿಷ್ಠ ನಿಮ್ಮ ಸಂತೋಷವನ್ನು ಹಿಡಿದಿಟ್ಕೊಳ್ಳಿ: ಫೋಗಟ್ ಅನರ್ಹತೆ ಕುರಿತ ಹೇಮಾ ಮಾಲಿನಿ ಹೇಳಿಕೆಗೆ ಆಕ್ರೋಶ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂಥೋನಿ ಅಮ್ಮಿರತಿ, ಅನರ್ಹಗೊಂಡಿದ್ದಿರಂದ ತುಂಬಾ ನಿರಾಶೆಯಾಗಿದೆ. ನಾನು ದೈಹಿಕವಾಗಿ ಫಿಟ್ ಆಗಿದ್ದು, ಮುಂದಿನ ಪಂದ್ಯಗಳಿಗೆ ತಯಾರಿ ನಡೆಸುತ್ತೇನೆ. ಈ ರೀತಿಯಾಗಿ ಅನರ್ಹಗೊಂಡಿದ್ದು ನನಗೆ ವಿಚಿತ್ರ ಅನ್ನಿಸುತ್ತಿದೆ. ಮೊದಲೆರಡು ಪ್ರಯತ್ನದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದು, ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ಅಂಡರ್ 20, ವಿಶ್ವ ಚಾಂಪಿಯನ್‌ ಶಿಪ್ ವಿಜೇತರಾಗಿದ್ದ ಅಂಥೋನಿ ಅಮ್ಮಿರತಿ ಒಲಿಂಪಿಕ್ಸ್‌ 31 ಅಭ್ಯರ್ಥಿಗಳ ಪೈಕಿ 15ನೇ ಸ್ಥಾನ ಪಡೆದುಕೊಂಡಿದ್ದಾರೆ. ಅಂಥೋನಿ ಅಮ್ಮಿರತಿ ಯಾಕೆ ಅನರ್ಹಗೊಂಡರು ಎಂದು ಹೇಳಲು ಅಲ್ಲಿದ್ದ ತೀರ್ಪುಗಾರರು ಸಹ ಹಿಂಜರಿದರು. ಆನಂತರ ವೀಕ್ಷಕರು ವಿಡಿಯೋವನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಿದಾಗ ಒಂದು ಕ್ಷಣ ಶಾಕ್ ಆಗಿ ಹೀಗೂ ಆಗುತ್ತಾ ಎಂದಿದ್ದಾರೆ. ಈ ವಿಡಿಯೋ ಟ್ರೋಲ್ ಆಗಿದ್ದು, ಅಂಥೋನಿ ಅಮ್ಮಿರತಿಯ ಖಾಸಗಿ ಭಾಗವನ್ನು ಝೂಮ್ ಮಾಡಲಾಗಿ ತೋರಿಸಲಾಗುತ್ತಿದೆ. ಅತ್ಯತ್ತುಮ ಆಟಗಾರನಾಗಲು ನೀವು ಕ್ರೀಡೆಯನ್ನು ಪ್ರೀತಿಸಬೇಕೇ ಹೊರತು ಪೋಲ್ ಬಾರ್ ಅಲ್ಲ. ಅದಕ್ಕೂ ಸಹ ಸ್ವಲ್ಪ ಡಯಟ್ ಮಾಡಿಸಿ ಎಂದು ನೆಟ್ಟಿಗರು ನಗೆ ಚಟಾಕಿ ಹಾರಿಸಿದ್ದಾರೆ. ನೀವು ಯಾಕೆ ಆ ಸಿನಿಮಾಗಳಲ್ಲಿ ನಟಿಸಬಾರದು ಎಂದು ಕೆಲವರು ಸಲಹೆ ನೀಡಿದ್ದಾರೆ.

ವಿನೇಶ್ ಫೋಗಟ್ ಅನರ್ಹಗೊಂಡ ಬೆನ್ನಲ್ಲೇ ಮಹತ್ವದ ನಿರ್ಧಾರ ಪ್ರಕಟಿಸಿದ ಹರ್ಯಾಣ ಸರ್ಕಾರ!

Scroll to load tweet…
Scroll to load tweet…
Scroll to load tweet…