Chitra Ramkrishna Case : ಯಾರೀಕೆ ಚಿತ್ರಾ ರಾಮಕೃಷ್ಣ ಅವರ ಹಿಂದಿದ್ದ ನಿಗೂಢ ಬಾಬಾ ಯಾರು?

By Suvarna NewsFirst Published Feb 20, 2022, 8:37 PM IST
Highlights

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಈವರೆಗಿನ ದೊಡ್ಡ ಹಗರಣ?
ನಿಗೂಢ ಬಾಬಾನ ಅಣತಿಯಂತೆ ನಡೆಯುತ್ತಿತ್ತು ಎನ್ಎಸ್ಇ ಕಾರ್ಯ
ಯಾರೀಕೆ ಚಿತ್ರಾ ರಾಮಕೃಷ್ಣ, ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು (ಫೆ.20): ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (National Stock Exchange) ಅಥವಾ ಜನಪ್ರಿಯವಾಗಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಎಂದು ಕರೆಯಲ್ಪಡುವ ಎನ್ಎಸ್ಇಯಲ್ಲಿ ಇತಿಹಾಸದ ಈವರೆಗಿನ ಅತೀದೊಡ್ಡ ಹಗರಣಕ್ಕೆ ಸಾಕ್ಷಿಯಾಗಿದೆ. ಮೇಲ್ನೋಟಕ್ಕೆ ಈವರೆಗೂ ಹಣಕಾಸಿನ ವಿವರಗಳು ದಾಖಲಾಗಿಲ್ಲವಾದರೂ, ಒಬ್ಬ ನಿಗೂಢ ಹಿಮಾಲಯದ ಬಾಬಾ ಅಣತಿಯಂತೆ ಎನ್ಎಸ್ಇಯಲ್ಲಿ ಎಲ್ಲಾ ನಿರ್ಧಾರಗಳು ಆಗುತ್ತಿದ್ದವು ಎನ್ನುವ ಅಂಶ ಬೆಳಕಿಗೆ ಬಂದಿದೆ. ಎನ್ಎಸ್ಇ ಮಾಜಿ ಮುಖ್ಯಸ್ಥೆ ಹಾಗೂ ಸಿಇಒ ಚಿತ್ರಾ ರಾಮಕೃಷ್ಣ(Chitra Ramkrishna) ನೇರವಾಗಿ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಅವರೊಂದಿಗೆ ಇನ್ನೂ ಕೆಲ ಅಧಿಕಾರಿಗಳು ಇದರ ಹಿಂದಿದ್ದಿದ್ದಾರೆ ಎನ್ನಲಾಗಿದೆ. ಈ ಎಲ್ಲರ ವಿರುದ್ಧ ಭಾರತದ ಮಾರುಕಟ್ಟೆ ನಿಯಂತ್ರಕರಾದ ಸೆಕ್ಯುರಿಟಿ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities Exchange Board of India) ಅಥವಾ ಸೆಬಿ 193 ಪುಟಗಳ ದೊಡ್ಡ ವರದಿಯನ್ನು ನೀಡಿದ್ದು, ಅದರ ಆಧಾರದಲ್ಲಿ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಈ ಪ್ರಕರಣದ ಆಳವೆಷ್ಟು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ, ಈ ದೊಡ್ಡ ಹಗರಣದ ಹಿಂದಿರುವ ಚಿತ್ರಾ ರಾಮಕೃಷ್ಣ ಬಗ್ಗೆ ಕುತೂಹಲ ಇಮ್ಮಡಿಯಾಗಿದೆ.


ಎನ್ಎಸ್ಇ ಭಾರತ ಅತೀದೊಡ್ಡ ಷೇರು ವಿನಿಮಯ ಕೇಂದ್ರ, ಅದರ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಚಿತ್ರಾ ರಾಮಕೃಷ್ಣ ಅವರನ್ನು "ಸ್ಟಾಕ್ ಮಾರ್ಕೆಟ್ ರಾಣಿ' ಎನ್ನುವ ಹೆಸರಿನಿಂದಲೇ ಕರೆಯಲಾಗುತ್ತಿತ್ತು. ಆದರೆ, ಕಳೆದ 20 ವರ್ಷಗಳ ಹಿಂದೆ ಪರಿಚಯವಾಗಿದ್ದ ಹಿಮಾಲಯದ ಬಾಬಾ ಅವರ ಅಣತಿಯಂತೆ ಎನ್ಎಸ್ಇಯಲ್ಲಿ ನಿರ್ಧಾರಗಳನ್ನು ಅವರು ತೆಗೆದುಕೊಳ್ಳುತ್ತಿದ್ದರು. ಈ-ಮೇಲ್ ಮೂಲಕ ಅವರ ಸಂಪರ್ಕ ಪಡೆಯುತ್ತಿದ್ದರು ಎನ್ನುವ ಅಘಾತಕಾರಿ ಮಾಹಿತಿಗಳು ಬಹಿರಂಗಗೊಂಡಿವೆ.

ಮುಂಬೈನಲ್ಲಿ 1963ರಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಚಿತ್ರಾ ರಾಮಕೃಷ್ಣ, ಮುಂಬೈನಲ್ಲೇ ಶಿಕ್ಷಣ ಪಡೆದಿದ್ದಾರೆ. ಬಳಿಕ ಇಂಗ್ಲೆಂಡ್ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣವನ್ನು ಪದವಿಯನ್ನು ಗಳಿಸಿದ್ದಾರೆ., ಚಾರ್ಟರ್ಡ್ ಸಂಸ್ಥೆಯಲ್ಲಿ ಮ್ಯಾನೆಜ್ ಮೇಂಟ್ ಅಕೌಂಟೆಂಟ್ ಪದವಿಯನ್ನು ಮುಗಿಸಿ, ದೆಹಲಿಯಲ್ಲಿ ಐಸಿಎಐ ಪದವಿಯನ್ನು ಪಡೆದು. ಮುಂಬೈನಲ್ಲಿ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಪದವಿಯನ್ನು ಪಡೆದರು.  ಕಾಂಜೀವರಂ ಸೀರೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಚಿತ್ರಾ ಅವರ ಪತಿಯ ಹೆಸರು ರಾಮಕೃಷ್ಣ

ಚಿತ್ರಾ ರಾಮಕೃಷ್ಣ ಕುರಿತಾಗಿ ಇನ್ನಷ್ಟು ಮಾಹಿತಿ
* ಚಿತ್ರಾ ರಾಮಕೃಷ್ಣ ಅವರು ಭಾರತೀಯ ಷೇರು ವಿನಿಮಯ ಕೇಂದ್ರದ ಮುಖ್ಯಸ್ಥರಾದ ಮೊದಲ ಮಹಿಳೆ.

* ತಮ್ಮ 21ನೇ ವಯಸ್ಸಿನಲ್ಲಿ ಚಾರ್ಟೆಡ್ ಅಕೌಂಟೆನ್ಸಿ ಪೂರ್ಣಗೊಳಿಸಿದ ಚಿತ್ರಾ ರಾಮಕೃಷ್ಣ, 1985ರಲ್ಲಿ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬಂಡವಾಳ ಮಾರುಕಟ್ಟೆಗಳ ಉಸ್ತುವಾರಿ ಸಹಾಯಕ ವ್ಯವಸ್ಥಾಪಕರಾಗಿ ಸೇರಿದ್ದರು.

* 1980 ರ ದಶಕದಲ್ಲಿ, ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಶಾಸಕಾಂಗ ಚೌಕಟ್ಟಿನ ಕರಡು ರಚನೆಯಲ್ಲಿ ರಾಮಕೃಷ್ಣ ತೊಡಗಿಸಿಕೊಂಡಿದ್ದರು.

* ಅವರು 2009 ರಲ್ಲಿ NSE ಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು ಮತ್ತು 2013 ರಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಬಡ್ತಿ ಪಡೆದರು.

* 1991 ರಲ್ಲಿ ಪ್ರಾರಂಭವಾದಾಗಿನಿಂದ ರಾಮಕೃಷ್ಣ ನಾಯಕತ್ವದ ಸ್ಥಾನದಲ್ಲಿ NSE ಯೊಂದಿಗೆ ಸಂಬಂಧ ಹೊಂದಿದ್ದರು.

* ಅವರು ಪ್ಯಾನ್-ಇಂಡಿಯಾ VSAT ನೆಟ್‌ವರ್ಕ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಭಾರತದ ಮೊದಲ ಡೆಪಾಸಿಟರ್ ಗೆ ಮೂಲಸೌಕರ್ಯ ಮತ್ತು ಶಾಸಕಾಂಗ ಚೌಕಟ್ಟನ್ನು ನಿರ್ಮಿಸಿದರು.

Chitra Ramkrishna Case : ಚಿತ್ರಾ ಅವರ ಅಕ್ರಮ ಗೊತ್ತಿದ್ದರೂ ಸುಮ್ಮನಿದ್ದ NSE ಮಂಡಳಿ!
* ಕಂಪ್ಯೂಟರ್ ಮೂಲಕ ಟ್ರೇಡಿಂಗ್ ನಡೆಸುವ ಮೂಲಕ ಪ್ರಕ್ರಿಯೆಯನ್ನು ಸುಗಮಗೊಳಿಸಿದ ಕೀರ್ತಿಯೂ ಆಕೆಗೆ ಸಲ್ಲುತ್ತದೆ.

Latest Videos

* ಈಕೆಯ ಮೇಲ್ವಿಚಾರಣೆಯಲ್ಲಿ, NSE ಫ್ಯೂಚರ್ಸ್ ಮತ್ತು ಆಪ್ಷನ್ಸ್,  ಎಕ್ಸ್ ಚೇಂಜ್ ಟ್ರೇಡೆಡ್ ನಿಧಿಗಳು, S&P 500 ನಂತಹ ಜಾಗತಿಕ ಸೂಚ್ಯಂಕಗಳು ಸೇರಿದಂತೆ ಹಲವಾರು ಉತ್ಪನ್ನಗಳನ್ನು ಬಿಡುಗಡೆ ಮಾಡಿತು.

Chitra Ramakrishna Case : ಯೋಗಿಗಳಿಗೆ ಈಮೇಲ್ ಬಳಸಲು, ಇಂಟರ್ನೆಟ್ ಬೇಕಿಲ್ಲ ಎಂದ NSE ಮಾಜಿ ಮುಖ್ಯಸ್ಥೆ!
* ಚಿತ್ರಾ ರಾಮಕೃಷ್ಣ ಅವರಿಗೆ 2013 ರಲ್ಲಿ 'ಫೋರ್ಬ್ಸ್ ಮಹಿಳಾ ನಾಯಕಿ' ಪ್ರಶಸ್ತಿ ನೀಡಲಾಗಿತ್ತು.

* ಫಾರ್ಚೂನ್ ಇಂಡಿಯಾ ರಾಮಕೃಷ್ಣರನ್ನು "ಭಾರತದ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ" ಎಂದು ಬಣ್ಣಿಸಿತ್ತು.

click me!