ಇಂದು ಭಾರತ ನಿಂತಿರೋ ಸ್ಥಾನದಲ್ಲಿ, ಚೀನಾ ಒಂದು ದಶಕದ ಹಿಂದೆಯೇ ಇತ್ತು: ಸ್ಮಾರ್ಟ್‌ಫೋನ್ CEO ಹೇಳಿಕೆ 

Published : Mar 19, 2025, 12:11 PM ISTUpdated : Mar 19, 2025, 12:22 PM IST
ಇಂದು ಭಾರತ ನಿಂತಿರೋ ಸ್ಥಾನದಲ್ಲಿ, ಚೀನಾ ಒಂದು ದಶಕದ ಹಿಂದೆಯೇ ಇತ್ತು: ಸ್ಮಾರ್ಟ್‌ಫೋನ್ CEO ಹೇಳಿಕೆ 

ಸಾರಾಂಶ

ಸ್ಮಾರ್ಟ್‌ಫೋನ್ ತಯಾರಿಕಾ ಘಟಕದ CEO, ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಬೆಳವಣಿಗೆಯ ಬಗ್ಗೆ ವಿಶ್ಲೇಷಿಸಿದ್ದಾರೆ. 10 ವರ್ಷಗಳ ಹಿಂದೆ ಚೀನಾ ಇದ್ದ ಸ್ಥಿತಿಯಲ್ಲಿ ಭಾರತವಿದೆ ಎಂದು ಹೇಳಿದ್ದಾರೆ, ಇದು ಭಾರತದ ಮಾರುಕಟ್ಟೆಯ ಸಾಮರ್ಥ್ಯವನ್ನು ತೋರಿಸುತ್ತದೆ.

ನವದೆಹಲಿ: ಭಾರತದಲ್ಲಿ ಒಳ್ಳೆಯ  ಮಾರುಕಟ್ಟೆ ಹೊಂದಿರುವ ಸ್ಮಾರ್ಟ್‌ಫೋನ್ ತಯಾರಿಕೆ ಘಟಕದ CEO ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಭಾರತೀಯರು ಸಹ ಇಂದು ಈ ಹೊಸ ಸ್ಮಾರ್ಟ್‌ಫೋನ್‌ಗೆ ಫಿದಾ ಆಗಿದ್ದು, ಹೆಚ್ಚು ಖರೀದಿಸುತ್ತಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಸ್ಮಾರ್ಟ್‌ಫೋನ್ ಇಂಡಸ್ಟ್ರಿಯ ಸದ್ಯದ ಸ್ಥಿತಿ ಮತ್ತು ಭವಿಷ್ಯದ ಬೆಳವಣಿಗೆ, ಉತ್ಪಾದನೆಯ ತಂತ್ರಜ್ಞಾನ, ಇದಕ್ಕೆ ಸಂಬಂಧಿಸಿದ ಸರ್ಕಾರದ ಬೆಳವಣಿಗೆ, ಟೆಕ್ ಇಕೋಸಿಸ್ಟಮ್ ಮತ್ತು ಗ್ರಾಹಕರ ಬೇಡಿಕೆ ಮತ್ತು ಮಾರುಕಟ್ಟೆಯ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.  Nothing ಸ್ಮಾರ್ಟ್‌ಫೋನ್ ಸ್ಥಾಪಕ ಮತ್ತು ಸಿಇಓ ಆಗಿರುವ ಕಾರ್ಲ್ ಪೆಯಿ ಅವರ ಈ ಎಕ್ಸ್ ಪೋಸ್ಟ್ ವೈರಲ್ ಆಗಿದೆ. 

ಕಾರ್ಲ್ ಪೆಯಿ ತಮ್ಮ ಪೋಸ್ಟ್‌ನಲ್ಲಿ 10  ವರ್ಷದ ಹಿಂದೆ ಸ್ಮಾರ್ಟ್‌ಫೋನ್ ಇಂಡಸ್ಟ್ರಿಯಲ್ಲಿ ಚೀನಾವಿದ್ಧ ಸ್ಥಾನದಲ್ಲಿ ಸದ್ಯ ಭಾರತ ನಿಂತಿದೆ ಎಂದು ಹೇಳಿದ್ದಾರೆ. ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಬಹುದೊಡ್ಡ ಕ್ರಾಂತಿಯಾಗಲಿದೆ ಎಂದು ಹೇಳಿರುವ ಕಾರ್ಲ್, ಸ್ಥಳೀಯ ಉತ್ಪಾದನೆಗೆ ಸರ್ಕಾರವು ಮೊದಲ ಆದ್ಯತೆಯನ್ನು ನೀಡುವ ಪ್ರಯತ್ನ ಮಾಡುತ್ತಿದೆ. ಟೆಕ್ ಇಕೋಸಿಸ್ಟಮ್ ಶ್ರೀಮಂತವಾಗಿದ್ದು, ಗ್ರಾಹಕರ ಬೇಡಿಕೆಯೂ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಗ್ಲೋಬಲ್ ಸ್ಮಾರ್ಟ್‌ಫೋನ್ ಪವರ್‌ಹೌಸ್ ಮಾಡಿಕೊಳ್ಳಲು ಎಲ್ಲಾ ಶಕ್ತಿ ಮತ್ತು ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಕಾರ್ಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಭಾರತ ಸರ್ಕಾರ ಸಹ ಮೊಬೈಲ್ ಬ್ರಾಂಡ್‌ಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಈ ಕಾರಣದಿಂದಾಗಿ ಗ್ಲೋಬಲ್ ಮಾರುಕಟ್ಟೆಯಲ್ಲಿ ಭಾರತದ ಸ್ಥಾನ ಮತ್ತಷ್ಟು ಬಲವಾಗಲಿದೆ ಎಂದು ಕಾರ್ಲ್ ಭವಿಷ್ಯ ನುಡಿದಿದ್ದಾರೆ. ಇಂದು ಭಾರತ  ನಥಿಂಗ್ ಸ್ಮಾರ್ಟ್‌ಫೋನ್‌ಗೆ ದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿ  ಭಾರತದ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ನಥಿಂಗ್ ಸ್ಮಾರ್ಟ್‌ಫೋನ್ ಕಂಪನಿ ಪ್ರಯತ್ನಿಸುತ್ತಿದೆ. 

2024ರ ಮೂರನೇ ತ್ರೈಮಾಸಿಕ ವರದಿ ಪ್ರಕಾರ, ನಥಿಂಗ್ ಶಿಪ್‌ಮೆಂಟ್‌ನಲ್ಲಿ ಶೇ.510ರಷ್ಟು ಬೆಳವಣಿಗೆ ಕಂಡು ಬಂದಿದೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ನಥಿಂಗ್ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ. ಸದ್ಯ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಶೇ.80ರಷ್ಟು ಭಾಗವನ್ನು ಚೀನಾ ಆವರಿಸಿಕೊಂಡಿದೆ. ಜನರು ಹೊಸತನದ ಹುಡುಕಾಟದಲ್ಲಿರುವ ಸಂದರ್ಭ ಇದಾಗಿದ್ದು, ನಥಿಂಗ್‌ ಎರಡನೇ ಆಯ್ಕೆಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ದೇಶದ ಮೂರು ಕಡೆ 3600 ಕೋಟಿ ವೆಚ್ಚದಲ್ಲಿ ಹೊಸ ಡೇಟಾ ಸೆಂಟರ್‌ ನಿರ್ಮಿಸಲಿದೆ L&T!

2014-15 ಸಾಲಿನಲ್ಲಿ ಭಾರತ ಕೇವಲ ಶೇ.25ರಷ್ಟು ಮಾತ್ರ ತನ್ನ ದೇಶಿಯ ಬೇಡಿಕೆಯನ್ನು ಪೂರೈಸಿಕೊಳ್ಳಲು ಶಕ್ತವಾಗಿತ್ತು. ಆದ್ರೆ 2018-19ರ ಸಾಲಿನಲ್ಲಿ ಭಾರತ ತನ್ನ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡಿಕೊಳ್ಳಲು ಶಕ್ತವಾಯ್ತು. 2015ರ ಆರ್ಥಿಕ ವರ್ಷದಲ್ಲಿ ಭಾರತದ ಮೊಬೈಲ್ ಉತ್ಪಾದನೆಯ ಮೌಲ್ಯ  US $ 3 ಬಿಲಿಯನ್ ಆಗಿತ್ತು. 2024ರಲ್ಲಿಈ ಮೌಲ್ಯ 3 ರಿಂದ  $ 50 ಶತಕೋಟಿಗೆ ಏರಿಕೆಯಾಯ್ತು. ಉತ್ಪಾದನೆಯ ಜೊತೆಗೆ ರಫ್ತಿನಲ್ಲೂ ಏರಿಕೆ ಕಂಡುಬಂದಿದೆ. 2022-23ರಲ್ಲಿ ವಾರ್ಷಿಕ ಆಧಾರದ ಮೇಲೆ ಮೊಬೈಲ್ ರಫ್ತುಗಳಲ್ಲಿ 91 ಪ್ರತಿಶತ ಹೆಚ್ಚಳ ಕಂಡುಬಂದಿದೆ.

ಇದನ್ನೂ ಓದಿ: ಕಳೆದ 10 ವರ್ಷಗಳಲ್ಲಿ ದೇಶದ ಬ್ಯಾಂಕ್‌ಗಳಿಂದ 16.35 ಲಕ್ಷ ಕೋಟಿ ಸಾಲ Write Off: ಸಂಸತ್ತಿಗೆ ಕೇಂದ್ರದ ಮಾಹಿತಿ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!