
ಬಿಸಿ ಟೀ ಡೆಲಿವರಿ ವೇಳೆ ಮೈ ಮೇಲೆ ಟೀ ಚೆಲ್ಲಿ ಗಂಭೀರ ಗಾಯಗೊಂಡಿದ್ದ ಡೆಲಿವರಿ ಬಾಯ್‌ಗೆ ಬರೋಬ್ಬರಿ 50 ಮಿಲಿಯನ್ ಡಾಲರ್ ಎಂದರೆ ಬರೋಬ್ಬರಿ 434 ಕೋಟಿ ಪರಿಹಾರ ನೀಡುವಂತೆ ಸ್ಟಾರ್‌ಬಕ್ಸ್‌ಗೆ ಆದೇಶ ನೀಡಲಾಗಿದೆ. ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ 2020ರಲ್ಲಿ ಘಟನೆ ನಡೆದಿತ್ತು. ಟೀ ತೆಗೆದುಕೊಂಡು ಹೋಗುತ್ತಿದ್ದ ಪಾತ್ರೆಯ ಮುಚ್ಚಳ ಸಡಿಲವಾಗಿದ್ದ ಪರಿಣಾಮ ಟೀ ಚೆಲ್ಲಿ ಡೆಲಿವರಿ ಬಾಯ್ ಗಂಭೀರ ಗಾಯಗೊಂಡಿದ್ದ, ಘಟನೆಯಲ್ಲಿ ನರಕ್ಕೆ ಹಾನಿಯಾಗಿದ್ದಲ್ಲದೇ ಅವನನ್ನು ಶಾಶ್ವತವಾಗಿ ವಿರೂಪಗೊಳ್ಳುವಂತೆ ಮಾಡಿತ್ತು. ಹೀಗಾಗಿ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ನ್ಯಾಯಾಧೀಶರು ಸಂತ್ರಸ್ತ ಯುವಕನಿಗೆ ಈ ಭಾರಿ ಮೊತ್ತದ ಪರಿಹಾರ ನೀಡುವಂತೆ ಆದೇಶ ನೀಡಿದೆ.
ಮುಚ್ಚಳ ಸಡಿಲಗೊಂಡು ಮೈಮೇಲೆ ಚೆಲ್ಲಿದ್ದ ಟೀ
ಮೈಕೆಲ್ ಗಾರ್ಸಿಯಾ ಎಂಬುವವರೇ 2020ರ ಘಟನೆಯಲ್ಲಿ ಗಾಯಗೊಂಡಿದ್ದ ಡೆಲಿವರಿ ಬಾಯ್. ಚಹಾ ಡೆಲಿವರಿ ಪಡೆದು ಗ್ರಾಹಕರಿಗೆ ತಲುಪಿಸುವುದಕ್ಕೆ ಸ್ಟಾರ್‌ಬಕ್ಸ್ ಔಟ್‌ಲೆಟ್‌ಗೆ ಬಂದಿದ್ದ ಅವರ ಮೇಲೆ ಟೀ ತುಂಬಿದ್ದ ಪಾತ್ರೆಯ ಮುಚ್ಚಳ ಸಡಿಲವಾಗಿದ್ದರಿಂದ ಟೀ ಅವರ ತೊಡೆಯ ಮೇಲೆ ಬಿದ್ದು ಗಂಭೀರ ಗಾಯಗಳಾಗಿದ್ದವು. ಸ್ಟಾರ್‌ಬಕ್ಸ್ ಬರಿಸ್ಟಾ ಚಹಾವನ್ನು ಸರಿಯಾಗಿ ಭದ್ರಪಡಿಸಿ ನಿಡಲು ವಿಫಲವಾಗಿದೆ ಇದರಿಂದ ಆತನಿಗೆ ಗಂಭೀರ ಗಾಯಗಳಾಯ್ತು ಇದರಿಂದ ಆತನ ಜೀವನವೇ ಬದಲಾಗಿ ಹೋಯ್ತು ಎಂದು ನ್ಯಾಯಾಧೀಶರು ಹೇಳಿದ್ದರು.
ಪ್ರತಿದಿನ 1600 ಕಿಲೋ ಮೀಟರ್ ಪ್ರಯಾಣಿಸಿ ಆಫೀಸ್‌ಗೆ ಹೋಗ್ತಾರೆ ಸ್ಟಾರ್‌ಬಕ್ಸ್ ಸಿಇಒ
ಸ್ಟಾರ್‌ಬಕ್ಸ್‌ನ ನಿರ್ಲಕ್ಷ್ಯದಿಂದಾಗಿ ಗಾರ್ಸಿಯಾ ಊಹಿಸಲಾಗದ ನೋವು ಅನುಭವಿಸಿದರು ಮತ್ತು ಶಾಶ್ವತವಾದ ಭಾವನಾತ್ಮಕ ಆಘಾತವನ್ನು ಸಹಿಸಿಕೊಂಡರು ಎಂದು ಅವರ ವಕೀಲ ಮೈಕೆಲ್ ಪಾರ್ಕರ್ ವಾದಿಸಿದರು. ಗಣನೀಯ ಪರಿಹಾರವನ್ನು ನೀಡುವ ನಿರ್ಧಾರದಲ್ಲಿ ದೀರ್ಘಕಾಲದ ವಿಳಂಬ ಮತ್ತು ಭಾವನಾತ್ಮಕ ಯಾತನೆಯನ್ನು ಉಲ್ಲೇಖಿಸಿ ನ್ಯಾಯಾಧೀಶರು ಗಾರ್ಸಿಯಾ ಪರವಾಗಿ ನಿಂತರು. ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಗಾರ್ಸಿಯಾ ಪರ ವಕೀಲರು 'ಸ್ಟಾರ್‌ಬಕ್ಸ್ ಕಾರ್ಪೊರೇಷನ್ ಐದು ವರ್ಷಗಳ ಕಾಲ, ವಿಚಾರಣೆಯವರೆಗೂ ಮತ್ತು ಅದರ ಉದ್ದಕ್ಕೂ ಜವಾಬ್ದಾರಿಯನ್ನು ನಿರಂತರವಾಗಿ ನಿರಾಕರಿಸಿತು ಮತ್ತು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿತು' ಎಂದು ದೂರಿದರು.
ದುಬಾರಿ ಪರಿಹಾರ ನೀಡಲು ಸ್ಟಾರ್‌ಬಕ್ಸ್ ವಿರೋಧ
ಆದರೆ ಸ್ಟಾರ್‌ಬಕ್ಸ್ ಈ ತೀರ್ಪಿನ ವಿರುದ್ಧ ವಾಗ್ದಾಳಿ ನಡೆಸಿದೆ. ನಾವು ಗಾರ್ಸಿಯಾ ಅವರ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ, ಆದರೆ ತೀರ್ಪುಗಾರರ ನಿರ್ಧಾರವನ್ನು ನಾವು ದೃಢವಾಗಿ ಒಪ್ಪುವುದಿಲ್ಲ. ಹಾನಿಗೆ ನಿಡಬೇಕಾದ ಪರಿಹಾರ ಬಹಳ ಹೆಚ್ಚಾಗಿದೆ ಎಂದು ನಾವು ನಂಬುತ್ತೇವೆ ಮತ್ತು ಮೇಲ್ಮನವಿ ಸಲ್ಲಿಸಲು ಯೋಜನೆ ರೂಪಿಸುತ್ತೇವೆ ಎಂದು ಕಂಪನಿಯ ವಕ್ತಾರೆ ಜೇಸಿ ಆಂಡರ್ಸನ್ ಹೇಳಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಸೂಪ್ ರುಚಿ ಹೆಚ್ಚಿಸಲು ಮೂತ್ರ ಮಾಡಿದ ರೆಸ್ಟೋರೆಂಟ್ ಸಿಬ್ಬಂದಿ; 4 ಸಾವಿರ ಗ್ರಾಹಕರಿಗೆ ಪರಿಹಾರ ಕೊಟ್ಟ ಮಾಲೀಕ!
ವಿಚಾರಣೆಗೆ ಮೊದಲೇ ಇದನ್ನು ತಮ್ಮಲ್ಲೇ ಇತ್ಯರ್ಥ ಮಾಡಿಕೊಳ್ಳಲು ಸ್ಟಾರ್‌ಬಕ್ಸ್‌ಗೆ ಹಲವು ಅವಕಾಶಗಳಿದ್ದವು ಎಂದು ಗಾರ್ಸಿಯಾ ಪರ ವಕೀಲರು ವಾದಿಸಿದ್ದರು. ಈ ವೇಳೆ ಕಂಪನಿಯು $30 ಮಿಲಿಯನ್ (ಸುಮಾರು ರೂ. 261 ಕೋಟಿ) ವರೆಗೆ ನೀಡಲು ಸಿದ್ಧವಿತ್ತು. ಆದರೆ ಗಾರ್ಸಿಯಾ ಅವರು ಸಂಸ್ಥೆಯೂ ಕ್ಷಮೆಯಾಚಿಸಬೇಕು ಹಾಗೂ ಕೆಲ ಕಠಿಣ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆದರೆ ಸ್ಟಾರ್‌ಬಕ್ಸ್ ಕ್ಷಮೆ ಕೇಳುವುದಕ್ಕೆ ನಿರಾಕರಿಸಿದೆ ಎಂದು ವಕೀಲರು ಆರೋಪಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.