ಭಾರತದಲ್ಲಿ 2024ನೇ ಸಾಲಿನಲ್ಲಿ ಇ-ಕಾಮರ್ಸ್ ವಲಯದ ಉದ್ಯೋಗಿಗಳಿಗೆ ಅತೀಹೆಚ್ಚಿನ ಪ್ರಮಾಣದಲ್ಲಿ ವೇತನ ಏರಿಕೆಯಾಗಲಿದೆ ಎಂದು ಇವೈ ''ಫ್ಯೂಚರ್ ಆಫ್ ಪೇ 2024' ವರದಿ ತಿಳಿಸಿದೆ.
ನವದೆಹಲಿ (ಮಾ.7): ಈ ವರ್ಷ ಯಾವ ವಲಯದ ಉದ್ಯೋಗಿಗಳಿಗೆ ಅತೀ ಹೆಚ್ಚಿನ ವೇತನ ಏರಿಕೆ ಭಾಗ್ಯವಿದೆ ಎಂದು ತಿಳಿಯುವ ಕುತೂಹಲ ನಿಮಗೂ ಇದೆಯಾ? ಹಾಗಾದ್ರೆ ಆ ಕುತೂಹಲಕ್ಕೆ ಉತ್ತರ ಇಲ್ಲಿದೆ. ಇವೈ ''ಫ್ಯೂಚರ್ ಆಫ್ ಪೇ 2024' ವರದಿ ಪ್ರಕಾರ ಇ-ಕಾಮರ್ಸ್ ವಲಯ 2024ನೇ ಸಾಲಿನಲ್ಲಿ ಅತೀಹೆಚ್ಚು ಅಂದ್ರೆ ಶೇ.10.9ರಷ್ಟು ವೇತನ ಏರಿಕೆ ಕಾಣುವ ನಿರೀಕ್ಷೆಯಿದೆ. ಇದರ ನಂತರದ ಸ್ಥಾನದಲ್ಲಿ ಹಣಕಾಸು ಸೇವೆಗಳಿದ್ದು, ಶೇ.10.1ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ. ಇನ್ನು ವೃತ್ತಿಪರ ಸೇವೆಗಳ ವೇತನ ಶೇ.10ರಷ್ಟು ಹೆಚ್ಚಳದ ನಿರೀಕ್ಷೆಯಲ್ಲಿದ್ದರೆ, ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯ ವಲಯ ಕೂಡ ಶೇ.10ರಷ್ಟು ವೇತನ ಹೆಚ್ಚಳ ಕಾಣಲಿದೆ ಎಂದು ಈ ವರದಿ ಹೇಳಿದೆ. ಒಟ್ಟಾರೆ 2024ನೇ ಸಾಲಿನಲ್ಲಿ ಭಾರತದಲ್ಲಿ ಸರಾಸರಿ ಶೇ. 9.6ರಷ್ಟು ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ. ಇದು ಕಳೆದ ಸಾಲಿನ ನೈಜ್ಯ ಏರಿಕೆಗೆ ಸರಿಸಮವಾಗಿದೆ ಎಂದು ವರದಿ ಹೇಳಿದೆ.
ಇನ್ನು ಒಟ್ಟು ವೇತನ ಹೆಚ್ಚಳದ ಪ್ರಮಾಣ 2023ರಲ್ಲಿ ಶೇ.18.3ಕ್ಕೆ ಕುಸಿದಿದೆ. 2022ರಲ್ಲಿ ಇದು ಶೇ.21.2ರಷ್ಟಿದೆ. ಇದು ಮುಂದಿನ ಕೆಲವು ವರ್ಷಗಳಲ್ಲಿ ನಿಧಾನವಾಗಿ ಇಳಿಕೆ ಕಾಣುವ ಸಾಧ್ಯತೆಯಿದೆ. ಏಕೆಂದ್ರೆ ಕಂಪನಿಗಳು ವೆಚ್ಚ ನಿರ್ವಹಣೆ ಹಾಗೂ ಉದ್ಯೋಗಿಗಳ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಪ್ರತಿಭೆಗೆ ಭಾರೀ ಬೇಡಿಕೆಯಿರುವ ಇಂದಿನ ಮಾರುಕಟ್ಟೆಯಲ್ಲಿ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಹೆಚ್ಚಿನ ಮಹತ್ವ ನೀಡಲಿವೆ ಎಂದು ವರದಿ ಹೇಳಿದೆ.
ಲಕ್ಷಾಂತರ ರೂಪಾಯಿ ಸಂಬಳದ ಕೆಲಸ ಬಿಟ್ಟು, ತನ್ನ ಫೋಟೋ ಮಾರಿ ಕೊಟ್ಯಾಧಿಪತಿಯಾದ ಮಹಿಳೆ
ಈ ವರದಿ ಅನ್ವಯ ಶೇ.35-40ರಷ್ಟು ತಂತ್ರಜ್ಞಾನ ವಲಯದ ಉದ್ಯೋಗಿಗಳು ಡಿಜಿಟಲ್ ಕೌಶಲ್ಯ ಹೊಂದಿದ್ದಾರೆ. ಇವರ ಸಂಖ್ಯೆ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಲಿದೆ. ಡಿಜಿಟಲ್ ಕೌಶಲ್ಯದಲ್ಲಿ ಕೃತಕ ಬುದ್ಧಿಮತ್ತೆ (AI),ಮಷಿನ್ ಲರ್ನಿಂಗ್ (ML) ಹಾಗೂ ಬ್ಲಾಕ್ ಚೈನ್ ಗೆ ಭಾರೀ ಬೇಡಿಕೆಯಿದೆ.
ಇನ್ನು ಶೇ.80ರಷ್ಟು ಸಂಸ್ಥೆಗಳು ಉದ್ಯೋಗಿಗಳ 'ವೇತನ ಹಾಗೂ ಸೌಲಭ್ಯಗಳ' ಮಹತ್ವಕ್ಕೆ ಹೆಚ್ಚಿನ ಮತ್ವ ನೀಡುತ್ತಿವೆ. ಈ ಮೂಲಕ ಸಾಂಪ್ರದಾಯಿಕ ಉದ್ಯೋಗಿಗಳ ಪ್ರಯೋಜನ ಯೋಜನೆಗಳಿಂದ ದೂರ ಸರಿಯುಬ ಅಗತ್ಯವನ್ನು ಮನಗಂಡಿವೆ ಎಂದು ವರದಿ ತಿಳಿಸಿದೆ.
ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಅಂದರೆ ಎಕ್ಸಿಕ್ಯುಟಿವ್ ಹಂತದ ಉದ್ಯೋಗಿಗಳು ಹೆಚ್ಚಿನ ವೇರಿಯೇಬಲ್ ಪೇ ಸಿಗಲಿದೆ. ಆದರೆ, 2024ನೇ ಸಾಲಿಗೆ ಅವರ ನಿರೀಕ್ಷಿತ ವೇತನ ಹೆಚ್ಚಳ 2023ಕ್ಕೆ ಹೋಲಿಸಿದರೆ ಕಡಿಮೆ ಇರಲಿದೆ ಎಂದು ವರದಿ ಹೇಳಿದೆ. 2024ನೇ ಸಾಲಿನಲ್ಲಿ ಬಹುತೇಕ ಉದ್ಯೋಗಿಗಳು ಕಡಿಮೆಯಾಗಿರುವ ವೇರಿಯೇಬಲ್ ಪೇ ಪಡೆಯಲಿದ್ದಾರೆ. ಆದರೆ. ಇದು ಅತೀಕಡಿಮೆ ವೇತನ ಹೊಂದಿರುವ ವಲಯಕ್ಕೆ ಅನ್ವಯಿಸೋದಿಲ್ಲ. ಅತೀ ಕಡಿಮೆ ವೇತನ ಶ್ರೇಣಿ ಹೊಂದಿರುವ ವಲಯದ ಉದ್ಯೋಗಿಗಳಿಗೆ ವೇರಿಯೇಬಲ್ ಪೇಯಲ್ಲಿ ಸ್ವಲ್ಪ ಮಟ್ಟಿನ ಹೆಚ್ಚಳವಾಗುವ ಸಾಧ್ಯತೆಯಿದೆ.
ಐಟಿ ಕೆಲಸ ಬಿಟ್ಟು ಉದ್ಯಮ ಶುರು ಮಾಡಿ, ಯಶಸ್ವಿಯಾದ ಮಹಿಳೆ
ಇನ್ನು ಕೋವಿಡ್ ಬಳಿಕ ಜನಪ್ರಿಯತೆ ಗಳಿಸಿರುವ ಹೈಬ್ರೀಡ್ ವರ್ಕ್ ಕಲ್ಚರ್ ಈ ವರ್ಷ ಮಹತ್ವ ಪಡೆದುಕೊಳ್ಳಲಿದೆ. ಇದು ಉದ್ಯೋಗ-ವೈಯಕ್ತಿಕ ಬದುಕು ಎರಡನ್ನೂ ಸರಿದೂಗಿಸಿಕೊಂಡು ಹೋಗಲು ನೆರವು ನೀಡುವ ಜೊತೆಗೆ ಉತ್ಪಾದಕತೆ ಹಾಗೂ ಸಂತೃಪ್ತಿ ಹೆಚ್ಚಿಸಲಿದೆ. ಹೀಗಾಗಿ ಕಂಪನಿಗಳು ಕೂಡ ಹೈಬ್ರೀಡ್ ವರ್ಕ್ ಕಲ್ಚರ್ ಗೆ ಈ ವರ್ಷ ಆದ್ಯತೆ ನೀಡುವ ಸಾಧ್ಯತೆಯಿದೆ. ಇನ್ನು ಉದ್ಯೋಗಿಗಳ ನೇಮಕಕ್ಕೆ ಸಂಬಂಧಿಸಿ ವಿವಿಧ ವಲಯಗಳಲ್ಲಿ ವಿಭಿನ್ನ ಟ್ರೆಂಡ್ಸ್ ಕಾಣಿಸಲಿದೆ.
ಇತ್ತೀಚಿನ ದಿನಗಳಲ್ಲಿ ಕಂಪನಿಗಳು ಉದ್ಯೋಗಿಗಳಿಗೆ ನೀಡುತ್ತಿರುವ ಪ್ರೋತ್ಸಾಹಧನ ವಿಧಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪ್ರೋತ್ಸಾಹಧನವನ್ನು ನಗದಿನ ಬದಲು ಷೇರುಗಳ ರೂಪದಲ್ಲಿ ನೀಡುವ ಟ್ರೆಂಡ್ ಹೆಚ್ಚಿದೆ. 2023ನೇ ಹಣಕಾಸು ಸಾಲಿನಲ್ಲಿ ಶೇ.26ರಷ್ಟು ಕಂಪನಿಗಳು ಈ ಮಾದರಿ ಬಗ್ಗೆ ಆಸಕ್ತಿ ತೋರಿವೆ. ಈ ಟ್ರೆಂಡ್ ಈ ವರ್ಷ ಕೂಡ ಮುಂದುವರಿಯಲಿದೆ ಎಂದು ವರದಿ ಹೇಳಿದೆ.