Money Making Tips: ಬೇಡಿಕೆಯಲ್ಲಿರೋ ಈ ವ್ಯವಹಾರ ಶುರು ಮಾಡಿ ಲಾಭ ಗಳಿಸಿ!

By Suvarna NewsFirst Published Mar 7, 2024, 5:04 PM IST
Highlights

ಬ್ಯುಸಿನೆಸ್ ಮಾಡ್ಬೇಕು ಆದ್ರೆ ಏನು ಮಾಡೋದು ಎನ್ನುವವರಿಗೆ ಇಲ್ಲೊಂದು ಒಳ್ಳೆ ಉಪಾಯವಿದೆ. ಹಳ್ಳಿ, ಪಟ್ಟಣ ಎಲ್ಲಾದ್ರೂ ಶುರು ಮಾಡಬಹುದಾದ ಒಂದು ಬ್ಯುಸಿನೆಸ್ ಇದೆ. ಈ ಉದ್ಯಮದಲ್ಲಿ ಕೆಲವೇ ವರ್ಷಗಳಲ್ಲಿ ಲಾಭದ ಮೇಲೆ ಲಾಭಗಳಿಸಬಹುದು.  

ಹಣ್ಣುಗಳಲ್ಲಿ ಬಾಳೆ ಹಣ್ಣು ದೊಡ್ಡ ಜಾಗವನ್ನು ಪಡೆದಿದೆ. ಎಲ್ಲ ಋತುವಿನಲ್ಲಿ ಸಿಗುವ ಈ ಬಾಳೆ ಹಣ್ಣಿಗೆ ಬೇಡಿಕೆ ಹೆಚ್ಚು. ದೇವರ ಪೂಜೆಯಲ್ಲಿ ಪ್ರಮುಖ ಸ್ಥಾನ ಪಡೆಯುವ ಬಾಳೆ ಹಣ್ಣು, ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿ. ಬಹುತೇಕ ಎಲ್ಲರೂ ಬಾಳೆ ಹಣ್ಣಿನ ಸೇವನೆ ಇಷ್ಟಪಡ್ತಾರೆ. ಬಾಳೆ ಹಣ್ಣು ತಿನ್ನೋಕೆ ರುಚಿ ಮಾತ್ರವಲ್ಲ ವ್ಯಾಪಾರಸ್ಥರಿಗೂ ಲಾಬ ತಂದುಕೊಂಡುವಂತಹದ್ದು. ಬಾಳೆ ಹಣ್ಣಿನ ಮಾರಾಟ, ಬಾಳೆ ಕಾಯಿ ಮಾರಾಟ, ಬಾಳೆ ಎಲೆ, ಬಾಳೆ ದಿಂಡು, ಬಾಳೆ ಕಾಯಿ ಚಿಪ್ಸ್ ಸೇರಿದಂತೆ ಇದನ್ನು ನಾನಾ ರೀತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಬ್ಯುಸಿನೆಸ್ ಶುರು ಮಾಡುವ ಮನಸ್ಸು ನಿಮಗಿದ್ದರೆ ನೀವು ಬಾಳೆ ಗಿಡದಿಂದ ಪೇಪರ್ ತಯಾರಿಸುವ ವ್ಯಾಪಾರ ಶುರು ಮಾಡಬಹುದು. ಇದು ಲಾಭದಾಯಕ ವ್ಯಾಪಾರವಾಗಿದೆ. ನೀವು ಹಳ್ಳಿ ಹಾಗೂ ಪಟ್ಟಣ ಎರಡೂ ಕಡೆ ಈ ವ್ಯವಹಾರ ಶುರು ಮಾಡಬಹುದು. ಇಡೀ ದೇಶದಲ್ಲಿ ಪೇಪರ್ ಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬಾಳೆ ನಾರಿನಿಂದ ಪೇಪರ್ ತಯಾರಿಸೋದು ಒಳ್ಳೆ ಬ್ಯುಸಿನೆಸ್ ಆಗಿದೆ.

ಬಾಳೆ (Banana) ನಾರಿನಿಂದ ತಯಾರಾಗುವ ಪೇಪರ್ (Paper), ಸಾಮಾನ್ಯ ಪೇಪರ್ ಗಿಂತ ಭಿನ್ನವಾಗಿದೆ. ಇದು ಕಡಿಮೆ ಸಾಂದ್ರತೆ ಮತ್ತು ಬಲವಾಗಿರುತ್ತದೆ. ಅತಿ ಬೇಗ ಈ ಪೇಪರ್ ಹರಿಯುವುದಿಲ್ಲ. ವಿಲೇವಾರಿ ಸಾಮರ್ಥ್ಯವೂ ಹೆಚ್ಚು.  ಈ ವ್ಯಾಪಾರ (Business) ಶುರು ಮಾಡೋದ್ರಿಂದ ಎಷ್ಟು ಲಾಭವಿದೆ, ಅಗತ್ಯವಿರುವ ವಸ್ತುಗಳು ಯಾವುದು ಎಂಬ ಮಾಹಿತಿ ಇಲ್ಲಿದೆ.

ಡಿಸ್ನಿಇಂಡಿಯಾ ಬಳಿಕ ಈಗ ಮತ್ತೊಂದು ಬೃಹತ್ ಮಾಧ್ಯಮ ಸಂಸ್ಥೆ ಖರೀದಿಸ್ತಾರಾ ಮುಖೇಶ್ ಅಂಬಾನಿ?

ಖಾದಿ ಗ್ರಾಮೋದ್ಯೋಗ ಆಯೋಗ ಈ ಬಗ್ಗೆ ವರದಿ ನೀಡಿದೆ. ಬಾಳೆ ನಾರಿನಿಂದ ಪೇಪರ್ ತಯಾರಿಸುವ ಉದ್ಯಮ ಶುರು ಮಾಡಲು ನಿಮಗೆ 16 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದಕ್ಕೆ ನೀವು ಹೆಚ್ಚಿನ ಹಣ ಖರ್ಚು ಮಾಡಬೇಕಾಗಿಲ್ಲ. ಕೇವಲ 4.65 ಲಕ್ಷ ರೂಪಾಯಿ ಹೊಂದಿಸಿದ್ರೆ ಸಾಕು. ಉಳಿದ ಹಣವನ್ನು ನೀವು ಸಾಲದ ರೂಪದಲ್ಲಿ ಪಡೆಯಬಹುದು. ಈ ಯೋಜನೆ ಶುರು ಮಾಡಲು ಸರ್ಕಾರ ನಿಮಗೆ ಸಹಾಯ ಮಾಡಲಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಿಂದ ನೀವು 10 ಲಕ್ಷ ರೂಪಾಯಿವರೆಗೆ ಅಗ್ಗದ ಬಡ್ಡಿಯಲ್ಲಿ ಸಾಲ ಪಡೆಯಬಹುದು. 

ಬಾಳೆ ಸಿಪ್ಪೆಯ ನಾರು ಅಥವಾ ಬಾಳೆ ಗಿಡದ ತೊಗಟೆಯನ್ನು ಬಳಸಲಾಗುತ್ತದೆ. ಬಾಳೆ ನಾರು ಸೆಲ್ಯುಲೋಸ್, ಹೆಮಿಸೆಲ್ಯುಲೋಸ್ ಮತ್ತು ಲಿಗ್ನಿನ್ ಅನ್ನು ಒಳಗೊಂಡಿರುತ್ತದೆ. ಸೆಲ್ಯುಲೋಸ್ ಫೈಬರ್‌ನ ಶಕ್ತಿ ಮತ್ತು ಬಾಳಿಕೆಯನ್ನು ಒದಗಿಸುತ್ತದೆ. ಮೊದಲು ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕು.   ಬಾಳೆ ಬೆಳೆಯುವ ಜಾಗದಲ್ಲೇ ನೀವು ಇದನ್ನು ಶುರು ಮಾಡಿದ್ರೆ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಈ ವ್ಯಾಪಾರ ಮಾಡಬಹುದು.  ಈ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಜಿಎಸ್‌ಟಿ ನೋಂದಣಿ, ಎಂಎಸ್‌ಎಂಇ ಉದ್ಯಮ ಆನ್‌ಲೈನ್ ನೋಂದಣಿ, ಬಿಐಎಸ್ ಪ್ರಮಾಣೀಕರಣ ಮತ್ತು ಮಾಲಿನ್ಯ ಇಲಾಖೆಯಿಂದ ಎನ್‌ಒಸಿ ಅಗತ್ಯವಿದೆ.

ಚಿನ್ನದೊಡವೆಗಳನ್ನು ಮನೆಯಲ್ಲಿಯೋ, ಲಾಕರಲ್ಲಿಯೋ ಇಡುವ ಬದಲು, ಹೀಗೆ ಮಾಡಿ ಕೈತುಂಬಾ ಹಣ ಗಳಿಸಿ!

ಬಾಳೆ ನಾರಿನ ಪೇಪರ್ ಉದ್ಯಮದಿಂದ ಆಗುವ ಲಾಭ : ಬಾಳೆಹಣ್ಣಿನ ನಾರಿನಿಂದ ಕಾಗದ ತಯಾರಿಕಾ ಘಟಕ ಸ್ಥಾಪಿಸಿದ್ರೆ ನೀವು ಸಾಕಷ್ಟು ಲಾಭವನ್ನು ಗಳಿಸಬಹುದು. ಈ ವ್ಯವಹಾರದಿಂದ ನೀವು ವಾರ್ಷಿಕವಾಗಿ   5 ಲಕ್ಷ ರೂಪಾಯಿಗಿಂತ ಹೆಚ್ಚು ಲಾಬ ಗಳಿಸಬಹುದು. ಮೊದಲ ವರ್ಷದಲ್ಲಿ ಈ ವ್ಯವಹಾರದಲ್ಲಿ ನೀವು ಸುಮಾರು 5.03 ಲಕ್ಷ ರೂಪಾಯಿಗಳ ಲಾಭವನ್ನು ಗಳಿಸುತ್ತೀರಿ. ಎರಡನೇ ವರ್ಷದಲ್ಲಿ 6.01 ಲಕ್ಷ ಮತ್ತು ಮೂರನೇ ವರ್ಷದಲ್ಲಿ 6.86 ಲಕ್ಷ ಲಾಭವನ್ನು ಪಡೆಯಬಹುದು.  ಈ ವ್ಯವಹಾರ ಲಾಭದಾಯಕವಾಗಿದೆ. ಆದಾಯವು ವೇಗವಾಗಿ ಹೆಚ್ಚಾಗುತ್ತದೆ. ಐದನೇ ವರ್ಷದಲ್ಲಿ ಸುಮಾರು 8 ಲಕ್ಷ 76 ಸಾವಿರ ರೂಪಾಯಿ ಲಾಭ ಗಳಿಸಬಹುದಾಗಿದೆ. 

click me!