ಯಶಸ್ವಿ ಉದ್ಯಮಿಗಳೆಲ್ಲ ಗುಜರಾತಿಗಳೇ ಆಗಿರೋದೇಕೆ? ಇದಕ್ಕೇನು ಕಾರಣ?

By Suvarna NewsFirst Published Jan 6, 2023, 5:30 PM IST
Highlights

ಭಾರತದ ಉದ್ಯಮ ಜಗತ್ತಿನ ಜನಪ್ರಿಯ ಹೆಸರುಗಳೆಲ್ಲ ಗುಜರಾತ್ ಮೂಲದ್ದೇ ಆಗಿವೆ. ವ್ಯಾಪಾರ, ಉದ್ಯಮಕ್ಕೂ ಗುಜರಾತಿಗಳಿಗೂ ಬಿಡಿಸಲಾಗದ ನಂಟು. ಗುಜರಾತಿಗಳು ಯಾವ ಉದ್ಯಮಕ್ಕೆ ಕೈ ಹಾಕಿದ್ರೂ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ. 

Business Desk:ಭಾರತೀಯ ಉದ್ಯಮಿಗಳ ಬಗ್ಗೆ ಮಾತನಾಡುವಾಗ ನಮ್ಮ ಮನಸ್ಸಿಗೆ ಬರುವ ಮೊದಲ ಹೆಸರುಗಳೆಂದ್ರೆ ಮುಖೇಶ್ ಅಂಬಾನಿ ಹಾಗೂ  ಗೌತಮ್ ಅದಾನಿ.  ಈ ಇಬ್ಬರೂ ಉದ್ಯಮಿಗಳು ಕೂಡ ಗುಜರಾತ್ ಮೂಲದವರು. ಇವರಷ್ಟೇ ಅಲ್ಲ, ಪಂಕಜ್ ಪಟೇಲ್ ಸೇರಿದಂತೆ ಇನ್ನೂ ಅನೇಕ ಪ್ರಸಿದ್ಧ ಉದ್ಯಮಿಗಳು ಗುಜರಾತ್ ಮೂಲದವರಾಗಿದ್ದಾರೆ. ಗುಜರಾತಿ ಅಂದ ತಕ್ಷಣ ನೆನಪಾಗೋದೆ ಅವರ ಉದ್ಯಮಶೀಲತೆ, ವ್ಯಾಪಾರ ಕೌಶಲ್ಯ. ನೀವು ಭಾರತದ ಯಾವುದೇ ಪುಟ್ಟ ನಗರಕ್ಕೆ ಭೇಟಿ ನೀಡಿದ್ರೂ ಅಲ್ಲೊಬ್ಬ ಗುಜರಾತಿ ಮೂಲದ ವ್ಯಾಪಾರಿ ಇದ್ದೇ ಇರುತ್ತಾನೆ. ಎಲೆಕ್ಟ್ರಿಕ್ ಶಾಪ್ ನಿಂದ ಹಿಡಿದು ವಜ್ರದ ವ್ಯಾಪಾರದ ತನಕ ಗುಜರಾತಿನವರು ಕೈಯಾಡಿಸದ ಉದ್ಯಮ ಅಥವಾ ವ್ಯಾಪಾರ ಕ್ಷೇತ್ರವೇ ಇಲ್ಲ. ಇದೇ ಕಾರಣಕ್ಕೆ ಉದ್ಯಮ ಅಥವಾ ವ್ಯಾಪಾರ ಅಂದ ತಕ್ಷಣ ಮೊದಲು ನೆನಪಾಗೋದೇ ಗುಜಾರಾತಿನವರು. ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಹಲವಾರು ಅಂಶಗಳು ಕಾರಣವಾಗುತ್ತವೆ? ಹಾಗಾದ್ರೆ ಗುಜರಾತಿನವರು ವ್ಯಾಪಾರದಲ್ಲಿ ಇಷ್ಟೊಂದು ಯಶಸ್ಸು ಸಾಧಿಸಿದ್ದು ಹೇಗೆ? ಅವರ ಯಶಸ್ಸಿನ ಸೀಕ್ರೆಟ್ ಏನಿರಬಹುದು? ಈ ಗುಟ್ಟನ್ನು ಸ್ವತಃ ಗುಜರಾತ್ ಮೂಲದ ಉದ್ಯಮಿಗಳೇ ಬಿಚ್ಚಿಟ್ಟಿದ್ದಾರೆ.  ಹಾಗಾದ್ರೆ ಏನದು?

ತ್ವರಿತ ಪಾವತಿ
ಯಾವುದೇ ಸೇವೆ (Service) ಅಥವಾ ವಸ್ತುಗಳನ್ನು (materials) ಖರೀದಿಸಿದ ತಕ್ಷಣ ಪಾವತಿ (Payment) ಮಾಡುವ ವ್ಯವಸ್ಥೆಯನ್ನು ಗುಜರಾತಿ ಉದ್ಯಮಿಗಳು ಅನುಸರಿಸುತ್ತಾರೆ. ಹೀಗಾಗಿ ಹಣಕ್ಕಾಗಿ ಕಿತ್ತಾಟ ನಡೆಸುವ ಪ್ರಮೇಯವೇ ಎದುರಾಗೋದಿಲ್ಲ. ಯಾರ ಹಣವನ್ನು ಯಾರೂ ಹಿಡಿದಿಟ್ಟುಕೊಳ್ಳುವುದಿಲ್ಲ. ಇನ್ನು ಗುಜರಾತಿಗಳ ಜೀವನ ಶೈಲಿ ಅತ್ಯಂತ ಸರಳವಾಗಿರುತ್ತದೆ. ಅಡಂಬರ, ಅನಗತ್ಯ ವೆಚ್ಚ ಕಡಿಮೆ. ಇನ್ನು ಗುಜರಾತಿ ವ್ಯಾಪಾರಿಗಳು ಗ್ರಾಹಕರೊಂದಿಗೆ ನಗುಮೊಗ ಹಾಗೂ ಆತ್ಮೀಯತೆಯಿಂದ ವ್ಯವಹರಿಸುವ ಕಾರಣ ಬೇಗ ಇಷ್ಟವಾಗುತ್ತಾರೆ. ಹೀಗಾಗಿ ಗ್ರಾಹಕರು ಗುಜರಾತಿ ವ್ಯಾಪಾರಿಗಳ ಬಳಿ ವ್ಯವಹಾರ ನಡೆಸಲು ಹೆಚ್ಚು ಇಷ್ಟಪಡುತ್ತಾರೆ. 

ಎಸ್ ಬಿಐ, ಪಿಎನ್ ಬಿ ಖಾಸಗೀಕರಣಕ್ಕೆ ಸರ್ಕಾರದ ಸಿದ್ಧತೆ?

ಸಮುದಾಯ ಭಾವನೆ
ಗುಜರಾತಿ ಜನರು ತಮ್ಮವರನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ. ಹೊಸ ಉದ್ಯಮ ಪ್ರಾರಂಭಿಸುವಾಗ ಒಬ್ಬರಿಗೊಬ್ಬರು ನೆರವು ನೀಡುತ್ತಾರೆ. ಪರಸ್ಪರ ನಂಬಿಕೆಯನ್ನು ಮುರಿಯೋದಿಲ್ಲ. ಉದ್ಯಮದ ವಿಚಾರದಲ್ಲಿ ಈ ಸಂಪ್ರದಾಯ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ. 

ತಂತ್ರಜ್ಞಾನ ಬದಲಾವಣೆಯನ್ನು ತ್ವರಿತವಾಗಿ ಒಪ್ಪಿಕೊಳ್ಳುವುದು
ಬದಲಾವಣೆಗೆ ನಾವು ಹೊಂದಿಕೊಳ್ಳುವುದು ಅಗತ್ಯ. ಅದರಲ್ಲೂ ತಂತ್ರಜ್ಞಾನದ (Technology) ವಿಚಾರದಲ್ಲಿ ಇದು ಹೆಚ್ಚು ಪ್ರಸ್ತುತ. ಗುಜರಾತಿ ವ್ಯಾಪಾರಿಗಳು ತಂತ್ರಜ್ಞಾನದ ಬದಲಾವಣೆಗೆ ಬಹುಬೇಗ ಹೊಂದಿಕೊಳ್ಳುತ್ತಾರೆ. ಇದರಿಂದ ಸಮಯಕ್ಕೆ ತಕ್ಕಂತೆ ವ್ಯವಹಾರ (Business) ನಡೆಸಲು ಸಾಧ್ಯವಾಗಿದೆ.

ಕುಟುಂಬ ವ್ಯವಸ್ಥೆ
ಗುಜರಾತಿ (Gujarati) ಉದ್ಯಮಿಗಳ ಯಶಸ್ಸಿನಲ್ಲಿ ಕುಟುಂಬ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಇಡೀ ಕುಟುಂಬ ಉದ್ಯಮ ಮುನ್ನಡೆಸಲು ನೆರವು ನೀಡುತ್ತದೆ. ಅದು ತಂದೆ, ತಾಯಿ, ಮಗ ಅಥವಾ ಮಗಳು ಯಾರೇ ಆಗಿರಲಿ, ಪ್ರತಿಯೊಬ್ಬರೂ ಕುಟುಂಬ ಉದ್ಯಮ ಮುನ್ನಡೆಸಲು ಶೇ.100ರಷ್ಟು ಕೊಡುಗೆ ನೀಡುತ್ತಾರೆ. ಇದರಿಂದ ಸಾಕಷ್ಟು ಹಣ ಕೂಡ ಉಳಿತಾಯವಾಗುತ್ತದೆ.

Business Idea: ಹತ್ತನೆ ಕ್ಲಾಸ್ ಪಾಸ್ ಆದ್ರೂ ಸಾಕು, ಹಳ್ಳಿಯಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಸಂಪರ್ಕ ಜಾಲ
ಗುಜರಾತಿಗಳ ಸಂಪರ್ಕ ಜಾಲ ಪ್ರಬಲವಾಗಿರುತ್ತದೆ. ಸಂಪರ್ಕ ಜಾಲ ವಿಸ್ತರಣೆ ಹಾಗೂ ಮಾಹಿತಿ ಹಂಚಿಕೆಯಿಂದ ಉದ್ಯಮ ಇನ್ನಷ್ಟು ಬೆಳೆಯುತ್ತದೆ ಎಂಬ ಪ್ರಬಲ ನಂಬಿಕೆ ಅವರಲ್ಲಿದೆ. ಈ ಒಂದು ಕಾರಣದಿಂದ ಅವರು ಹಬ್ಬ (Festival), ಧಾರ್ಮಿಕ ಕಾರ್ಯಕ್ರಮಗಳು, ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಅಗತ್ಯ ಸಮಯದಲ್ಲಿ ಯಾರಾದರೂ ನೆರವಿಗೆ ಬರುತ್ತಾರೆ ಎಂಬ ನಂಬಿಕೆ ಅವರಿಗಿರುತ್ತದೆ. ಅಲ್ಪ ಕಾಲಿಕ ಲಾಭಾಂಶಗಳು ಅಥವಾ ಗುರಿಗಳು ಹಾಗೂ ರಿಟರ್ನ್ಸ್ (Returns) ಬಗ್ಗೆ ನಾವು ಯೋಚಿಸೋದಿಲ್ಲ. 


 

click me!