Petrol - Diesel Price Today: ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಡೀಸೆಲ್‌ ಬೆಲೆ ಇಲ್ಲಿದೆ

Published : Jul 20, 2022, 06:31 AM IST
Petrol - Diesel Price Today: ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಡೀಸೆಲ್‌ ಬೆಲೆ ಇಲ್ಲಿದೆ

ಸಾರಾಂಶ

Petrol Diesel Price in Karnataka Today: ಉಕ್ರೇನ್‌ ಮತ್ತು ರಷ್ಯಾ ಯುದ್ಧದಿಂದ ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಭಾರತದಲ್ಲಿ ಇಂಧನ ಬೆಲೆ ಗಗನಕ್ಕೇರಿತ್ತು. ಆದರೀಗ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಯ ಸುಂಕ ಕಡಿತಗೊಳಿಸಿದೆ. ಹಾಗಾದ್ರೆ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಎಂಬ ಪಟ್ಟಿ ಇಲ್ಲಿದೆ. 

ಬೆಂಗಳೂರು (ಜು.20): ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಗಗನಕ್ಕೇರಿದ್ದ ಇಂಧನ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಆದರೂ ಅಂತಾರಾಷ್ಟ್ರೀಯ ಕಚ್ಚಾತೈಲದ ಬೆಲೆಗೆ ಹೋಲಿಕೆ ಮಾಡಿದರೆ ಇನ್ನೂ ಕಡಿಮೆಯಾಗಬೇಕು ಎಂದೆನಿಸುವುದು ಸಹಜ. ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ ನಂತರ ರಷ್ಯಾ ವಿರುದ್ಧ ಪ್ರಪಂಚದ ಹಲವು ದೇಶಗಳು ಸ್ಯಾಂಕ್ಷನ್‌ಗಳನ್ನು ಹೇರಿಕೆ ಮಾಡಿವೆ. ಆದರೆ ಭಾರತ ರಷ್ಯಾದಿಂದ ಇಂಧನವನ್ನು ಖರೀದಿಸುತ್ತಿದೆ. ಇತ್ತೀಚೆಗೆ ಈ ಬಗ್ಗೆ ಹೇಳಿಕೆ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಸ್ಯಾಂಕ್ಷನ್‌ ತೆಗೆಯದಿದ್ದರೆ ತೈಲಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದಿದ್ದರು. 

ತೈಲ ಉತ್ಪಾದನಾ ದೇಶಗಳು ಬೆಲೆ ಏರಿಕೆ ಮಾಡಿದಾಗ ಆಮದು ಮಾಡಿಕೊಳ್ಳುವ ಭಾರತದಂತ ದೇಶಗಳ ಆರ್ಥಿಕತೆ ಮೇಲೆ ಪೆಟ್ಟು ಬೀಳುವುದು ಸಹಜ. ಅನಿವಾರ್ಯವಾಗಿ ಇಂಧನ ಬೆಲೆಯನ್ನು ಸರ್ಕಾರ ಹೆಚ್ಚಿಸಲೇಬೇಕಾಗುತ್ತದೆ. ಜತೆಗೆ ದೇಶದ ಹಣದುಬ್ಬರ ಕೂಡ ಏರಿಕೆಯಾಗಿದೆ. ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸುವ ನಿಟ್ಟಿನಲ್ಲೂ ಅಬಕಾರಿ ಸುಂಕ ಮುಖ್ಯವಾಗುತ್ತದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಇಂಧನ ಬೆಲೆ ಒಂದೇ ಇರುವುದಿಲ್ಲ, ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 102.27
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 101.58
ಬೆಳಗಾವಿ - ರೂ. 102.01
ಬಳ್ಳಾರಿ - ರೂ. 103.87
ಬೀದರ್ - ರೂ. 103.21
ವಿಜಯಪುರ - ರೂ. 102.51
ಚಾಮರಾಜನಗರ - ರೂ. 102.03
ಚಿಕ್ಕಬಳ್ಳಾಪುರ - ರೂ. 101.83
ಚಿಕ್ಕಮಗಳೂರು - ರೂ. 103.58
ಚಿತ್ರದುರ್ಗ - ರೂ. 103.82
ದಕ್ಷಿಣ ಕನ್ನಡ - ರೂ. 101.21
ದಾವಣಗೆರೆ - ರೂ. 104.17
ಧಾರವಾಡ - ರೂ. 101.80
ಗದಗ - ರೂ. 102.16
ಕಲಬುರಗಿ - ರೂ. 102.28
ಹಾಸನ - ರೂ. 102.09
ಹಾವೇರಿ - ರೂ. 102.45
ಕೊಡಗು - ರೂ. 103.42 
ಕೋಲಾರ - ರೂ. 101.81
ಕೊಪ್ಪಳ - ರೂ. 103.10
ಮಂಡ್ಯ - ರೂ. 101.84
ಮೈಸೂರು - ರೂ. 101.79
ರಾಯಚೂರು - ರೂ. 101.76
ರಾಮನಗರ - ರೂ. 102.25
ಶಿವಮೊಗ್ಗ - ರೂ. 103.47
ತುಮಕೂರು - ರೂ. 102.64
ಉಡುಪಿ - ರೂ. 101.92
ಉತ್ತರ ಕನ್ನಡ - ರೂ. 102.11
ಯಾದಗಿರಿ - ರೂ. 102.74

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.21
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 87.98
ಬಳ್ಳಾರಿ - ರೂ. 89.66
ಬೀದರ್ - ರೂ. 89.06
ವಿಜಯಪುರ - ರೂ. 88.43
ಚಾಮರಾಜನಗರ - ರೂ. 87.97
ಚಿಕ್ಕಬಳ್ಳಾಪುರ - ರೂ. 87.80 
ಚಿಕ್ಕಮಗಳೂರು - ರೂ. 89.19
ಚಿತ್ರದುರ್ಗ - ರೂ. 89.39 
ದಕ್ಷಿಣ ಕನ್ನಡ - ರೂ. 87.20
ದಾವಣಗೆರೆ - ರೂ. 89.70
ಧಾರವಾಡ - ರೂ. 87.79 
ಗದಗ - ರೂ. 88.11
ಕಲಬುರಗಿ - ರೂ. 88.22
ಹಾಸನ - ರೂ. 87.83
ಹಾವೇರಿ - ರೂ. 88.37
ಕೊಡಗು - ರೂ. 89.05
ಕೋಲಾರ - ರೂ. 87.77 
ಕೊಪ್ಪಳ - ರೂ. 88.96
ಮಂಡ್ಯ - ರೂ. 87.80
ಮೈಸೂರು - ರೂ. 87.75
ರಾಯಚೂರು - ರೂ. 87.76 
ರಾಮನಗರ - ರೂ. 88.17
ಶಿವಮೊಗ್ಗ - ರೂ. 89.17
ತುಮಕೂರು - ರೂ. 88.52
ಉಡುಪಿ - ರೂ. 87.84
ಉತ್ತರ ಕನ್ನಡ - ರೂ. 88.07
ಯಾದಗಿರಿ - ರೂ. 88.63 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!