
ಬೆಂಗಳೂರು (ಅ.22): ಈ ವಾರ ದೇಶಾದ್ಯಂತ ದೀಪಾವಳಿ ಸಂಭ್ರಮ. ಹಬ್ಬವನ್ನು ಆಚರಣೆ ಮಾಡುವುದರೊಂದಿಗೆ ವಿವಿಧ ಕೆಲಸಗಳಿಗೆ ತಿರುಗಾಟ ಕೂಡ ಜಾಸ್ತಿ. ಅದಕ್ಕೂ ಮುನ್ನ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಮೇಲೆ ಒಂಚೂರು ಕಣ್ಣು ಹಾಯಿಸೋದು ಒಳ್ಳೆಯದು. ಎಲ್ಲಾ ದಿನ ಬಳಕೆಯ ವಸ್ತುಗಳ ದರ ಏರಿಕೆಯ ಮೇಲೆ ಮೂಲವಾಗಿ ಪರಿಣಾಮ ಬೀರುವುದು ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಆಗುವ ಏರಿಕೆ. ಯಾಕೆಂದರೆ, ಬಹುತೇಕ ದಿನನಿತ್ಯದ ವಸ್ತುಗಳ ಸರಕು ಸಾಗಣೆಗೆ ಇಂಧನ ಅಗತ್ಯ. ಹೀಗಾಗಿ ಪ್ರತಿದಿನ ಈ ಬೆಲೆಗಳಲ್ಲಿ ಆಗಲಿರುವ ಸಣ್ಣಪುಟ್ಟ ಬದಲಾವಣೆಗಳೇ ಒಂದು ತಿಂಗಳಲ್ಲಿ ನಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತದೆ. 80ರ ಆಸುಪಾಸಿನಲ್ಲಿದ್ದ ಪೆಟ್ರೋಲ್ ದರ ಶತಕದ ಗಡಿ ದಾಟಿ ಹಲವು ತಿಂಗಳುಗಳೇ ಕಳೆದಿವೆ. ಪುಣ್ಯಕ್ಕೆ 110ರ ಗಡಿ ದಾಟಿಲ್ಲ ಎನ್ನುವ ಸಮಾಧಾನ ಒಂದೆಡೆ. ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಮಾಡಲಾಗುತ್ತಿಲ್ಲ. ಮಾಡಿದ್ದರೂ, ಪೈಸೆಗಳ ಲೆಕ್ಕಾಚಾರದಲ್ಲಿ ಮಾತ್ರ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಕಚ್ಚಾತೈಲದ ದರದಲ್ಲಿ ಹಾವು ಏಣಿ ಆಟ ಕಂಡುಬರುತ್ತಿದೆ. ಒಂದು ವಾರ ಹೆಚ್ಚಾದರೆ, ಇನ್ನೊಂದು ವಾರ ಕಡಿಮೆ ಆಗುವ ಪರಿಪಾಠವಿದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್(Petrol rate), ಡೀಸೆಲ್ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
ದೀಪಾವಳಿ ಪ್ರಯುಕ್ತ ನಾಳೆಯಿಂದ 6 ದಿನ ಬ್ಯಾಂಕುಗಳಿಗೆ ರಜೆ
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ.102.50 ₹/L
ಬೆಂಗಳೂರು - ರೂ.101.94 ₹/L
ಬೆಂಗಳೂರು ಗ್ರಾಮಾಂತರ - ರೂ. 102.01 ₹/L
ಬೆಳಗಾವಿ - ರೂ.102.43 ₹/L
ಬಳ್ಳಾರಿ - ರೂ.103.54 ₹/L
ಬೀದರ್ - ರೂ. 102.86 ₹/L
ವಿಜಯಪುರ - ರೂ. 102.24 ₹/L
ಚಾಮರಾಜನಗರ - ರೂ.102.79 ₹/L
ಚಿಕ್ಕಬಳ್ಳಾಪುರ - ರೂ. 102.40 ₹/L
ಚಿಕ್ಕಮಗಳೂರು - 103.65 ₹/L
ಚಿತ್ರದುರ್ಗ - ರೂ.103.47 ₹/L
ದಕ್ಷಿಣ ಕನ್ನಡ - ರೂ.101.47 ₹/L
ದಾವಣಗೆರೆ - ರೂ.104.16 ₹/L
ಧಾರವಾಡ - ರೂ. 101.85 ₹/L
ಗದಗ - ರೂ.102.19 ₹/L
ಕಲಬುರಗಿ - 102.14 ₹/L
ಹಾಸನ - ರೂ. 101.88 ₹/L
ಹಾವೇರಿ - ರೂ.101.91 ₹/L
ಕೊಡಗು - ರೂ.103.56 ₹/L
ಕೋಲಾರ - ರೂ 102.14 ₹/L
ಕೊಪ್ಪಳ - ರೂ. 103.10 ₹/L
ಮಂಡ್ಯ - ರೂ. 102.05 ₹/L
ಮೈಸೂರು - ರೂ. 101.75 ₹/L
ರಾಯಚೂರು - ರೂ. 101.84 ₹/L
ರಾಮನಗರ - ರೂ. 102.25 ₹/L
ಶಿವಮೊಗ್ಗ - ರೂ. 103.43 ₹/L
ತುಮಕೂರು - ರೂ. 103.23 ₹/L
ಉಡುಪಿ - ರೂ. 101.39 ₹/L
ಉತ್ತರ ಕನ್ನಡ - ರೂ. 102.14 ₹/L
ಯಾದಗಿರಿ - ರೂ. 102.79 ₹/L
ದೀಪಾವಳಿಗೆ ಗೃಹಿಣಿಯರಿಗೆ ಶಾಕ್; ಅಡುಗೆ ಎಣ್ಣೆ ಬೆಲೆ ಹೆಚ್ಚಳ ಸಾಧ್ಯತೆ!
ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ
ಬಾಗಲಕೋಟೆ - 88.42 ₹/L
ಬೆಂಗಳೂರು - 87.89 ₹/L
ಬೆಂಗಳೂರು ಗ್ರಾಮಾಂತರ - 87.95 ₹/L
ಬೆಳಗಾವಿ - 88.36 ₹/L
ಬಳ್ಳಾರಿ - 89.36 ₹/L
ಬೀದರ್ - 88.75 ₹/L
ವಿಜಯಪುರ - 88.19 ₹/L
ಚಾಮರಾಜನಗರ - 88.66 ₹/L
ಚಿಕ್ಕಬಳ್ಳಾಪುರ - 88.31 ₹/L
ಚಿಕ್ಕಮಗಳೂರು - 89.33 ₹/L
ಚಿತ್ರದುರ್ಗ - 89.10 ₹/L
ದಕ್ಷಿಣ ಕನ್ನಡ - 87.43 ₹/L
ದಾವಣಗೆರೆ -89.73 ₹/L
ಧಾರವಾಡ - 87.83 ₹/L
ಗದಗ - 88.14 ₹/L
ಕಲಬುರಗಿ - 88.10 ₹/L
ಹಾಸನ - 87.67 ₹/L
ಹಾವೇರಿ - 87.89 ₹/L
ಕೊಡಗು - 89.20 ₹/L
ಕೋಲಾರ -88.08 ₹/L
ಕೊಪ್ಪಳ - 88.96 ₹/L
ಮಂಡ್ಯ - 87.99 ₹/L
ಮೈಸೂರು - 87.72₹/L
ರಾಯಚೂರು - 87.84 ₹/L
ರಾಮನಗರ -88.17 ₹/L
ಶಿವಮೊಗ್ಗ - 89.15 ₹/L
ತುಮಕೂರು - 89.06 ₹/L
ಉಡುಪಿ - 87.36 ₹/L
ಉತ್ತರ ಕನ್ನಡ - 88.09 ₹/L
ಯಾದಗಿರಿ - 88.68 ₹/L
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.