ಬ್ಯಾಂಕ್ ನಲ್ಲಿ ಹಣವಿಡೋದು ತುರ್ತು ಪರಿಸ್ಥಿತಿಗೆ ನೆರವಾಗ್ಲಿ ಅಂತ. ಯಾವುದೇ ಉಳಿತಾಯ ಖಾತೆ ತೆರೆಯುವ ಮುನ್ನ ಬಡ್ಡಿಯನ್ನು ಪರಿಶೀಲಿಸಬೇಕು. ಬ್ಯಾಂಕ್ ಯಾವೆಲ್ಲ ಸೌಲಭ್ಯ ನೀಡುತ್ತೆ ಎಂಬುದನ್ನು ತಿಳಿದು ಖಾತೆ ತೆರೆಯೋದು ಬುದ್ದಿವಂತಿಕೆ.
ಈಗಿನ ದಿನಗಳಲ್ಲಿ ಹಣ ಎಷ್ಟಿದ್ರೂ ಸಾಲೋದಿಲ್ಲ. ನಿತ್ಯದ ಖರ್ಚು, ಬಟ್ಟೆ, ಔಷಧಿ, ಮಕ್ಕಳ ಶಾಲೆ ಶುಲ್ಕ ಸೇರಿದಂತೆ ಒಂದಲ್ಲ ಒಂದು ಕಾರಣಕ್ಕೆ ಹಣ ಖರ್ಚಾಗುತ್ತದೆ. ದುಡಿಮೆಗಿಂತ ಖರ್ಚು ಹೆಚ್ಚಿರುತ್ತೆ ಅಂದ್ರೆ ಅತಿಶಯೋಕ್ತಿಯಲ್ಲ. ತಿಂಗಳ ಖರ್ಚು ಎಷ್ಟೇ ಇರಲಿ, ಸ್ವಲ್ಪ ಹಣವನ್ನು ಉಳಿತಾಯ ಮಾಡುವುದು ಬಹಳ ಮುಖ್ಯವಾಗುತ್ತದೆ. ಇಲ್ಲವೆಂದ್ರೆ ಮಕ್ಕಳ ಉನ್ನತ ಶಿಕ್ಷಣ, ಮದುವೆ ಸಮಯದಲ್ಲಿ ಸಾಲ ಮಾಡಿ, ಕಷ್ಟವನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಹಣವನ್ನು ಉಳಿಸ್ಬೇಕು ಎನ್ನುವವರು ಎಫ್‌ಡಿ ಮತ್ತು ಪ್ರಾವಿಡೆಂಟ್ ಫಂಡ್ ಮೊರೆ ಹೋಗ್ತಾರೆ. ಇದ್ರ ಜೊತೆ ಮಧ್ಯಮ ವರ್ಗದವರು ಆರ್ ಡಿ ಖಾತೆ ತೆರೆಯುವುದು ಅತ್ಯುತ್ತಮ ಕೆಲಸವಾಗಿದೆ. ಇದನ್ನು ನಿಧಿ ಅಂತಾ ಹೇಳಿದ್ರೆ ತಪ್ಪಾಗೋದಿಲ್ಲ. ನಾವಿಂದು ಆರ್ ಡಿ ಖಾತೆಗೆ ಸಂಬಂಧಿಸಿದ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡ್ತೇವೆ.
ಆರ್ ಡಿ (RD) ಖಾತೆ ಅಂದ್ರೇನು? : ಮೊದಲು ಇದನ್ನು ತಿಳಿಯುವ ಅಗತ್ಯವಿದೆ. ಆರ್ ಡಿ ಅಂದ್ರೆ Recurring Deposit. ಇದನ್ನು ಮರುಕಳಿಸುವ ಠೇವಣಿ ಎನ್ನಲಾಗುತ್ತದೆ. ಯಾವುದೇ ವ್ಯಕ್ತಿ ಇದರಡಿ ಖಾತೆ ತೆರೆಯಬಹುದು. ಒಂದು ನಿಶ್ಚಿತ ಅವಧಿಗೆ ಪ್ರತಿ ತಿಂಗಳು ಒಂದು ನಿಶ್ಚಿತ ಮೊತ್ತವನ್ನು ಜಮಾ ಮಾಡಬೇಕಾಗುತ್ತದೆ. ಅವಧಿ ಮುಗಿದ ಮೇಲೆ ವ್ಯಕ್ತಿಗೆ ಬಡ್ಡಿ ಸಮೇತ ಆತ ಜಮಾ ಮಾಡಿದ ಹಣ ಸಿಗುತ್ತದೆ. ಇದಕ್ಕಾಗಿ ನೀವು ಪ್ರತಿ ತಿಂಗಳು ಹಣವನ್ನು ಜಮಾ ಮಾಡಬೇಕು.
Personal Finance: ಯಾವುದೇ ಕೆಲಸವಿಲ್ಲವೆಂದ್ರೂ ಕ್ರೆಡಿಟ್ ಕಾರ್ಡ್ ಪಡೆಯೋದು ಹೇಗೆ?
ಆರ್ ಡಿ ಖಾತೆ ತೆರೆಯುವುದ್ರಿಂದ ಆಗುವ ಲಾಭಗಳು :
• ಆರ್ ಡಿ ಖಾತೆಗೆ ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಜಮಾ ಮಾಡಬೇಕಾಗುತ್ತದೆ. ಅಂದ್ರೆ ತಿಂಗಳಿಗೆ ನೀವು ಒಂದಿಷ್ಟು ಹಣವನ್ನು ಉಳಿಸುತ್ತೀರಿ. ಇದು ಉಳಿತಾಯದ ಅಭ್ಯಾಸವನ್ನು ರೂಢಿಸುತ್ತದೆ.
• ಆರ್ ಡಿಯಲ್ಲಿ ಹಣ ಜಮಾ ಮಾಡುವುದು ಅಪಾಯಕಾರಿಯಲ್ಲ. ಇದು ಸುರಕ್ಷಿತ ಉಳಿತಾಯವಾಗಿದೆ.
• ನೀವು ಕೇವಲ 100 ರೂಪಾಯಿ ಆರ್ ಡಿ ಕೂಡ ಮಾಡಬಹುದು. ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಕನಿಷ್ಠ ಬೆಲೆ ಬೇರೆಯಾಗಿದೆ.
• ಸುಮಾರು ಎಫ್ ಡಿಯಲ್ಲಿ ಸಿಗುವಷ್ಟೇ ಬಡ್ಡಿ ಇದ್ರಲ್ಲಿ ಸಿಗುತ್ತದೆ.
• ನೀವು ಆರ್ ಡಿ ಒತ್ತೆಯಿಟ್ಟು ಸಾಲ ಪಡೆಯಬಹುದು. ಮನೆ, ವಾಹನ ಖರೀದಿಗೆ ನೀವು ಇದ್ರ ಮೂಲಕ ಸಾಲ ಪಡೆಯಬಹುದು.
ವಿವಿಧ ಬ್ಯಾಂಕ್ ಗಳಲ್ಲಿ ಆರ್ ಡಿ ಬಡ್ಡಿದರ ಹೀಗಿದೆ :
ಎಸ್‌ಬಿಐ ಬ್ಯಾಂಕ್ ಬಡ್ಡಿ ದರ : ಸಾಮಾನ್ಯ ಬಡ್ಡಿ ದರ ಶೇಕಡಾ 5.10ರಷ್ಟಿದ್ದರೆ ಹಿರಿಯ ನಾಗರಿಕರಿಗೆ ಶೇಕಡಾ 5.60ರಷ್ಟು ಬಡ್ಡಿ ಸಿಗುತ್ತದೆ. ಇದು ಒಂದರಿಂದ ಎರಡು ವರ್ಷದ ಆರ್ ಡಿ ಮೇಲೆ ಸಿಗುವಂತಹ ಬಡ್ಡಿ. ಇನ್ನು ಒಂದರಿಂದ ಮೂರು ವರ್ಷದವರೆಗೆ ನೀವು ಆರ್ ಡಿ ಮಾಡುತ್ತೀರಿ ಎಂದಾದ್ರೆ ನಿಮಗೆ ಶೇಕಡಾ 5.30ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇಕಡಾ 5.80ರಷ್ಟು ಬಡ್ಡಿ ಲಭ್ಯವಿದೆ. ಐದರಿಂದ ಹತ್ತು ವರ್ಷದ ಅವಧಿಗೆ ನೀವು ಆರ್ ಡಿ ತೆರೆಯುತ್ತೀರಿ ಎಂದಾದ್ರೆ ಸಾಮಾನ್ಯ ಜನರಿಗೆ ಶೇಕಡಾ 5.40 ಬಡ್ಡಿ ಸಿಕ್ಕಿದ್ರೆ ಹಿರಿಯ ನಾಗರಿಕರಿಗೆ ಶೇಕಡಾ 6.20ರ ದರದಲ್ಲಿ ಬಡ್ಡಿ ಸಿಗುತ್ತದೆ.
Personal Finance: ಇಎಂಐ ಹೊರೆ ಕಡಿಮೆ ಮಾಡೋದು ಚಾಲಾಕಿತನ
ಎಚ್ ಡಿ ಎಫ್ ಸಿ ಬ್ಯಾಂಕ್ : 48 ತಿಂಗಳ ಆರ್ ಡಿಗೆ ಸಾಮಾನ್ಯರಿಗೆ ಶೇಕಡಾ 5.35ರ ದರದಲ್ಲಿ ಬಡ್ಡಿ ಸಿಕ್ಕಿದ್ರೆ ಹಿರಿಯ ನಾಗರಿಕರಿಗೆ ಶೇಕಡಾ 5.85ರ ದರದಲ್ಲಿ ಬಡ್ಡಿ ಲಭ್ಯವಿದೆ. 90 ದಿನದ ಎಫ್ ಡಿಗೆ ಸಾಮಾನ್ಯರಿಗೆ ಶೇಕಡಾ 5.50ರ ದರದಲ್ಲಿ ಹಾಗೂ ಹಿರಿಯ ನಾಗರಿಕರಿಗೆ ಶೇಕಡಾ 6ರ ದರದಲ್ಲಿ ಬಡ್ಡಿ ನೀಡಲಾಗುತ್ತದೆ.
ಕೇಂದ್ರ ಬ್ಯಾಂಕ್ : ಈ ಬ್ಯಾಂಕ್ ನಲ್ಲಿ 3ರಿಂದ ನಾಲ್ಕು ವರ್ಷದವರೆಗೆ ಆರ್ ಡಿ ತೆರೆಯುತ್ತಿದ್ದರೆ ನಿಮಗೆ ಶೇಕಡಾ 5ರ ದರದಲ್ಲಿ ಹಾಗೂ ಹಿರಿಯ ನಾಗರಿಕರಿಗೆ ಶೇಕಡಾ 5.50ರ ದರದಲ್ಲಿ ಬಡ್ಡಿ ಸಿಗುತ್ತದೆ. ನೀವು ಐದರಿಂದ ಹತ್ತು ವರ್ಷದ ಆರ್ ಡಿ ತೆರೆಯುತ್ತಿದ್ದರೂ ಬಡ್ಡಿ ಒಂದೇ ರೀತಿ ಇರುತ್ತದೆ.