ನೀವು ಆಗಾಗ ಕೆವೈಸಿ ಶಬ್ಧವನ್ನು ಕೇಳ್ತಿರುತ್ತೀರಿ. ಆದ್ರೆ ಇದು ಏನು ಎಂಬುದು ಕೆಲವರಿಗೆ ತಿಳಿದಿರೋದಿಲ್ಲ. ಮತ್ತೆ ಕೆಲವರು ಕೆವೈಸಿ ಫಾರ್ಮ್ ಭರ್ತಿ ಮಾಡಿದ್ರೂ ಅದರ ಪ್ರಯೋಜನ ಗೊತ್ತಿರೋದಿಲ್ಲ. ನಾವಿಂದು ಅದ್ರ ಬಗ್ಗೆ ಮಾಹಿತಿ ನೀಡ್ತೆವೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಿರುವ ಶಬ್ಧ ಕೆವೈಸಿ. ಬ್ಯಾಂಕ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಕೆವೈಸಿ ಬಳಸ್ತಾರೆ. ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಅಥವಾ ಪೋಸ್ಟ್ ಪೇಯ್ಡ್ ಟೆಲಿಕಾಂ ಸಂಪರ್ಕ ಪಡೆಯುವಾಗ ಕೂಡ ಕೆವೈಸಿ ಕೇಳಲಾಗುತ್ತದೆ. ಈ ಕೆವೈಸಿ ಬಗ್ಗೆ ಅನೇಕರಿಗೆ ತಿಳಿದಿಲ್ಲ. ನಿಮಗೂ ಕೆವೈಸಿ ಬಗ್ಗೆ ಮಾಹಿತಿ ತಿಳಿದಿಲ್ಲವೆಂದ್ರೆ ಈ ಲೇಖನ ಓದಿ. ಇಂದು ನಾವು ಕೆವೈಸಿ ಎಲ್ಲಿ ಮತ್ತು ಏಕೆ ಹಾಗೂ ಹೇಗೆ ಬಳಕೆ ಮಾಡ್ತಾರೆ ಎಂಬುದನ್ನು ನಿಮಗೆ ಹೇಳ್ತೆವೆ.
ಕೆವೈಸಿ (KYC) ಎಂದರೇನು? : ಕೆವೈಸಿ ಫುಲ್ ಫಾರ್ಮ್ Know Your Customer ಎಂದರ್ಥ. ಅಂದ್ರೆ ಗ್ರಾಹಕ (Customer) ರನ್ನು ತಿಳಿದುಕೊಳ್ಳುವ ರೂಪ ಎಂದರ್ಥ. ಸರಳ ಭಾಷೆಯಲ್ಲಿ ಹೇಳಬೇಕೆಂದ್ರೆ ಕೆವೈಸಿ ಎನ್ನುವುದು ಗ್ರಾಹಕರ ಬಗ್ಗೆ ಮಾಹಿತಿ ನೀಡುವ ಫಾರ್ಮ್ (Form) ಆಗಿದೆ. ಈ ಫಾರ್ಮ್ ನಲ್ಲಿ ಗ್ರಾಹಕರು ತಮಗೆ ಸಂಬಂಧಿಸಿದ ಎಲ್ಲ ಅಗತ್ಯ ಮಾಹಿತಿಯನ್ನು ನೀಡ್ತಾರೆ. ಪ್ರತಿ 6 ತಿಂಗಳು ಅಥವಾ 1 ವರ್ಷಕ್ಕೊಮ್ಮೆ ಬ್ಯಾಂಕ್ ತನ್ನ ಗ್ರಾಹಕರಿಗೆ ಕೆವೈಸಿ ಫಾರ್ಮ್ ಭರ್ತಿ ಮಾಡಲು ಕೇಳುತ್ತದೆ. ಈ ಕೆವೈಸಿ ಫಾರ್ಮ್‌ನಲ್ಲಿ, ನಿಮ್ಮ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಸಂಪೂರ್ಣ ವಿಳಾಸವನ್ನು ನೀವು ಭರ್ತಿ ಮಾಡಬೇಕು. ಈ ಮೂಲಕ ಬ್ಯಾಂಕ್, ಗ್ರಾಹಕರ ಎಲ್ಲಾ ಮಾಹಿತಿಯನ್ನು ಪಡೆಯುತ್ತದೆ.
ಬ್ಯಾಂಕಿನಲ್ಲಿ ಖಾತೆ ತೆರೆಯುವ ಸಮಯದಲ್ಲಿ ನಾವು ಈ ಎಲ್ಲ ಮಾಹಿತಿಯನ್ನು ನೀಡಿರ್ತೇವೆ. ಮತ್ತೇಕೆ ಕೆವೈಸಿ ಫಾರ್ಮ್ ಭರ್ತಿ ಮಾಡ್ಬೇಕು ಎಂದು ನೀವು ಕೇಳಬಹುದು. ಬ್ಯಾಂಕ್ ನಿಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಲು ಕೆವೈಸಿ ಫಾರ್ಮ್ ಭರ್ತಿ ಮಾಡಿಸಿಕೊಳ್ಳುತ್ತದೆ. ಅಂದ್ರೆ ಗ್ರಾಹಕರ ಯಾವುದೇ ವೈಯಕ್ತಿಕ ಮಾಹಿತಿ ಬದಲಾಯಿಸಿದ್ದರೆ, ಹೊಸ ಮಾಹಿತಿಯನ್ನು ಕೆವೈಸಿ ಫಾರ್ಮ್ ಮೂಲಕ ನವೀಕರಿಸಲಾಗುತ್ತದೆ. ಕೆವೈಸಿ ಭರ್ತಿ ಮಾಡಿದ್ದರೆ ಗ್ರಾಹಕರನ್ನು ಸಂಪರ್ಕಿಸಲು ಬ್ಯಾಂಕ್ ಗೆ ಸುಲಭವಾಗುತ್ತದೆ.
ಆಧಾರ್ ಕಾರ್ಡ್ ಕಳೆದು ಹೋಗಿದ್ಯಾ? ತಕ್ಷಣ ಈ ಒಂದು ಕೆಲ್ಸ ಮಾಡಿ
ಸಾಲ ತೆಗೆದುಕೊಳ್ಳಲು ಕೆವೈಸಿ (KYC) : ಸಾಲ ಹಣಕಾಸಿಗೆ ಸಂಬಂಧಿಸಿದ (Financial Matters( ವ್ಯವಹಾರವಾಗಿದೆ. ಹಾಗಾಗಿ ಬ್ಯಾಂಕ್ ಗ್ರಾಹಕರಿಗೆ ಸಾಲ ನೀಡುವ ಮೊದಲು ಕೆವೈಸಿ ಕೇಳುತ್ತದೆ. ಕೆಲವೊಮ್ಮೆ ಗ್ರಾಹಕರು ಖಾತೆ ಹೊಂದಿರುವ ಬ್ಯಾಂಕ್ ನಲ್ಲಿ ಸಾಲ ಪಡೆಯುತ್ತಿದ್ದರೂ ಕೆವೈಸಿ ಪಾವತಿಸಬೇಕು.ಗ್ರಾಹಕರ ವಿಳಾಸ, ಗ್ರಾಹಕರ ಆಧಾರ್ ಕಾರ್ಡ್ ಸಂಖ್ಯೆ,ಗ್ರಾಹಕರ ಪ್ಯಾನ್ ಕಾರ್ಡ್ ಸಂಖ್ಯೆ ಈ ಎಲ್ಲಾ ಮೂಲಭೂತ ಮಾಹಿತಿ ಕೆವೈಸಿ ಮೂಲಕ ಬ್ಯಾಂಕ್ ಬಳಿ ಇರುತ್ತದೆ. ಸಾಲ ಮರುಪಾವತಿಯಾಗದ ಸಮಯದಲ್ಲಿ ಈ ಮಾಹಿತಿಯನ್ನು ಬಳಸಿ, ಗ್ರಾಹಕರನ್ನು ಬ್ಯಾಂಕ್ ಸಂಪರ್ಕಿಸುತ್ತದೆ. ಬ್ಯಾಂಕೇತರ ಹಣಕಾಸು ಸಂಸ್ಥೆಯಿಂದ (Banking Instituions) ಸಾಲ ಪಡೆಯುವಾಗ ಕೂಡ ಕೆವೈಸಿ ಭರ್ತಿ ಮಾಡಬೇಕು. ಎನ್‌ಬಿಎಫ್‌ಸಿ ಕಂಪನಿಯು ವ್ಯವಹಾರ ಸಾಲದ ಅರ್ಜಿ ನಮೂನೆಯೊಂದಿಗೆ ಮಾಹಿತಿ ಪಡೆದಿದ್ದರೂ ಕೆವೈಸಿ ಫಾರ್ಮ್ ಭರ್ತಿ ಮಾಡುವುದು ಅನಿವಾರ್ಯ.
ಕೆವೈಸಿ ಗ್ರಾಹಕ ಮತ್ತು ಸಂಬಂಧಪಟ್ಟ ಸಂಸ್ಥೆ ಇಬ್ಬರಿಗೂ ಪ್ರಯೋಜನಕಾರಿಯಾಗಿದೆ. ಮೊದಲೇ ಹೇಳಿದಂತೆ ಗ್ರಾಹಕರನ ಮಾಹಿತಿ ಬ್ಯಾಂಕ್ ನಲ್ಲಿರುವುದರಿಂದ ಆತನ ಸಂಪರ್ಕ ಬ್ಯಾಂಕ್ ಗೆ ಸುಲಭವಾಗುತ್ತದೆ. ಇತ್ತ ಗ್ರಾಹಕ ಬ್ಯಾಂಕ್ ನಲ್ಲಿಟ್ಟ ಹಣ ಭದ್ರವಾಗಿರುತ್ತದೆ. ಆತನ ಒಪ್ಪಗೆ ಇಲ್ಲದೆ ಬ್ಯಾಂಕ್ ಯಾವುದೇ ವಹಿವಾಟನ್ನು ನಡೆಸುವಂತಿಲ್ಲ. ಒಂದ್ವೇಳೆ ಮ್ಯಾನಿಪುಲೇಟ್ ಮಾಡಿದ್ರೆ ಸಂದೇಶ, ಆನ್ಲೈನ್ ಮೂಲಕ ಈ ಮಾಹಿತಿ ಗ್ರಾಹಕನಿಗೆ ತಲುಪುತ್ತದೆ.
ಪಾಸ್‌ಪೋರ್ಟ್‌ನಲ್ಲಿ ಸರ್ ನೇಮ್ ಇಲ್ವಾ..? ಹಾಗಿದ್ರೆ ನೀವು ಈ ದೇಶಕ್ಕೆ ಹೋಗೋ ಹಾಗೇ ಇಲ್ಲ..!
ಕೆವೈಸಿ ಮಾಡೋದು ಹೇಗೆ ? : ಕೆವೈಸಿ ಮಾಡುವುದು ತುಂಬಾ ಸುಲಭ. ನಿಮ್ಮ ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ಹೋಗಿ. ಅಲ್ಲಿ ಸಂಬಂಧಪಟ್ಟ ಡೆಸ್ಕ್ ನಿಂದ ಕೆವೈಸಿ ಫಾರ್ಮ್ ತೆಗೆದುಕೊಂಡು ಅದನ್ನು ಭರ್ತಿ ಮಾಡಿ. ಅದಕ್ಕೆ ಬೇಕಾದ ದಾಖಲೆಯನ್ನು ಲಗತ್ತಿಸಿ ನಂತರ ಅದನ್ನು ಸಲ್ಲಿಸಿ. ನೀವು ಕೆವೈಸಿ ಫಾರ್ಮ್ ಸಲ್ಲಿಸಿದ 3 ದಿನಗಳಲ್ಲಿ ಕೆವೈಸಿಯನ್ನು ನವೀಕರಿಸಲಾಗುತ್ತದೆ.